ಬಜಗೋಳಿ: ರವೀಂದ್ರ ಶೆಟ್ಟಿ ದಂಪತಿಗಳಿಂದ ಬಲಿಪಾಡ್ಯಮಿಯಂದು ಗೋದಾನ ಸೇವೆ
ಬಜಗೋಳಿ: ಹಿಂದುತ್ವ ಪ್ರತಿಪಾದಕ ರವೀಂದ್ರ ಶೆಟ್ಟಿ ಬಜಗೋಳಿ ಮತ್ತು ಅವರ ಧರ್ಮಪತ್ನಿ ರೂಪ ರವೀಂದ್ರ ಶೆಟ್ಟಿ ದಂಪತಿಗಳು ದೀಪಾವಳಿಯ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ದಾನಕ್ಕೆ ಹೆಸರುವಾಸಿಯಾದ ಬಲಿ ಚಕ್ರವರ್ತಿಯಂತೆ, ಬಡ ಮತ್ತು ಅಶಕ್ತ ಕುಟುಂಬಗಳನ್ನು ಆರ್ಥಿಕವಾಗಿ ಮೇಲೆತ್ತಲು ದ್ವಿತೀಯ ವರ್ಷದ ಗೋದಾನಕ್ಕೆ ತಮ್ಮ ಸ್ವಗ್ರಹದಲ್ಲಿ ಚಾಲನೆ ನೀಡಿದರು. ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರವೀಂದ್ರ ಶೆಟ್ಟಿಯವರು ಬಡವರ ಶಿಕ್ಷಣ, ದೈವ-ದೇವಸ್ಥಾನಗಳ ಜೀರ್ಣೋದ್ಧಾರ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಆರ್ಥಿಕ ಸಹಾಯ ಮಾಡುತ್ತಲೇ ಬಂದಿದ್ದಾರೆ. ಈ ಬಾರಿ ಹೆಬ್ರಿ, ಬೆಳ್ಮಣ್,ಮೀಯಾರು, […]
ಶ್ರೀಕೃಷ್ಣಮಠದಲ್ಲಿ ಗ್ರಹಣ ಕಾಲದ ಜಪ ತಪ ಅನುಷ್ಠಾನ
ಉಡುಪಿ: ಸೂರ್ಯಗ್ರಹಣ ಆರಂಭ ಕಾಲದಲ್ಲಿ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಮಧ್ವಸರೋವರದಲ್ಲಿ ಸ್ನಾನ ಮಾಡಿ ದಂಡೋದಕ ಅರ್ಘ್ಯ ನೀಡಿ ಗ್ರಹಣ ಕಾಲದಲ್ಲಿ ಜಪಾನುಷ್ಠಾನಗಳನ್ನು ನಡೆಸಿದರು. ಭಕ್ತಾದಿಗಳು ಗ್ರಹಣ ಕಾಲದಲ್ಲಿ ಸ್ನಾನಮಾಡಿ ಅನುಷ್ಠಾನಗಳನ್ನು ನಡೆಸಿದರು.
ನಾವುಂದ: ಫಿಟ್ ಇಂಡಿಯಾ ಓಟ; ಬೀಚ್ ಸ್ವಚ್ಛತಾ ಕಾರ್ಯಕ್ರಮ
ನಾವುಂದ: ಅ. 30, ಆದಿತ್ಯವಾರದಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾನಿಲಯದ ಎನ್. ಎಸ್.ಎಸ್ ಘಟಕ, ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಯನ್ಸ್ ಕಾಲೇಜಿನ ಎನ್.ಎಸ್.ಎಸ್ ಘಟಕ ಹಾಗೂ ನಾವುಂದ ಗ್ರಾಮ ಪಂಚಾಯತ್ ಇವರ ಸಹಯೋಗದಲ್ಲಿ ಫಿಟ್ ಇಂಡಿಯಾ ರನ್ ಹಾಗೂ ಬೀಚ್ ಸ್ವಚ್ಛತಾ ಕಾರ್ಯಕ್ರಮವು ನಾವುಂದ ಗ್ರಾಮ ಪಂಚಾಯತ್ ಪರಿಸರದಲ್ಲಿ ನಡೆಯಲಿದೆ. ಸುಮಾರು 200 ಎನ್.ಎಸ್.ಎಸ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
ಕಾಡುಬೆಟ್ಟಿನಲ್ಲಿ ಸಾಮೂಹಿಕ ಸೂರ್ಯಗ್ರಹಣ ಶಾಂತಿ ಹೋಮ
ಉಡುಪಿ: ಅಬ್ಬಗ ದಾರಗ ವೀರಭದ್ರ ಮತ್ತು ಶನೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಮಂಗಳವಾರ ಶ್ರೀ ಶನೈಶ್ವರ ದೇವರ ಸನ್ನಿಧಿಯಲ್ಲಿ ಸಂಜೆ ಸಾಮೂಹಿಕ ಸೂರ್ಯಗ್ರಹಣ ಶಾಂತಿ ಹೋಮ ನಡೆಯಿತು. ಅರ್ಚಕರು ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ನವಗ್ರಹ ಮಂಡಲ ಪೂಜೆ, ಪೂರ್ಣಾಹುತಿ, ಮಹಾಪೂಜೆ ನಡೆಸಿಕೊಟ್ಟರು. ದೇವಳದ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ನೂರಾರು ಭಕ್ತರು ಉಪಸ್ಥಿತರಿದ್ದರು.