ಕೊಯಮತ್ತೂರು ಸ್ಫೋಟ: ಆತ್ಮಹತ್ಯಾ ದಾಳಿ ಎಂದು ಒಪ್ಪಿಕೊಳ್ಳಿ ಎಂದ ಅಣ್ಣಾಮಲೈ; ಯುಎಪಿಎ ಹೇರಿದ ಪೊಲೀಸರು

ಕೊಯಮತ್ತೂರು: ಕೊಯಮತ್ತೂರಿನಲ್ಲಿ ಭಾನುವಾರ ಮುಂಜಾನೆ ವಾಹನದಲ್ಲಿದ್ದ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡಾಗ ವ್ಯಕ್ತಿಯೊಬ್ಬನ ಸಾವಿಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ ಒಂದು ದಿನದ ನಂತರ, ಐವರು ಆರೋಪಿಗಳ ವಿರುದ್ಧ ಮಂಗಳವಾರ ಕಾನೂನುಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಹೇರಲಾಗಿದೆ ಎಂದು ಕೊಯಮತ್ತೂರು ನಗರ ಪೊಲೀಸ್ ಕಮಿಷನರ್ ವಿ ಬಾಲಕೃಷ್ಣನ್ ಹೇಳಿದ್ದಾರೆ. ಕೊಯಮತ್ತೂರು ಪೊಲೀಸರು ಬಂಧಿತ ಆರೋಪಿಗಳನ್ನು ಜಿಎಂ ನಗರದ ಮೊಹಮ್ಮದ್ ಧಾಲ್ಹಾ (25), ಮೊಹಮ್ಮದ್ ಅಜರುದ್ದೀನ್ (25), ಮೊಹಮ್ಮದ್ ರಿಯಾಜ್ (27), ಫಿರೋಜ್ ಇಸ್ಮಾಯಿಲ್ (27), ಮತ್ತು ಮೊಹಮ್ಮದ್ ನವಾಜ್ […]

ಶಿವಮೊಗ್ಗ: ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ; ಮೂವರ ಬಂಧನ

ಶಿವಮೊಗ್ಗ: ಕೆಲವು ತಿಂಗಳುಗಳ ಹಿಂದೆ ಹಿಂದೂ ಕಾರ್ಯಕರ್ತ ಹರ್ಷನ ಕ್ರೂರ ಹತ್ಯೆಗೆ ಸಾಕ್ಷಿಯಾದ ಶಿವಮೊಗ್ಗದಲ್ಲಿ ಮತ್ತೊಮ್ಮೆ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆಯಾಗಿದೆ. 25 ವರ್ಷದ ಪ್ರಕಾಶ್ ಎಂಬ ಯುವಕನ ಮೇಲೆ ಸೋಮವಾರ ದುಷ್ಕರ್ಮಿಗಳು ಆರ್‌ಎಸ್‌ಎಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ. ಘಟನೆ ನಡೆದಾಗ ಪ್ರಕಾಶ್ ತಮ್ಮ ಮನೆ ಮುಂದೆ ನಿಂತಿದ್ದರು. ಹಲ್ಲೆಗೊಳಗಾದ ಪ್ರಕಾಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾನು ವೀರ ಸಾವರ್ಕರ್ ಬಗ್ಗೆ ಆಯೋಜಿಸಲಾಗಿದ್ದ ಹಿಂದೂ ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ, ಆ ಬಳಿಕ […]

ಶ್ರೀ ಕೃಷ್ಣ ಮಠದಲ್ಲಿ ಬಲೀಂದ್ರ ಪೂಜೆ

ಉಡುಪಿ: ದೀಪಾವಳಿಯ ಅಮಾವಾಸ್ಯೆ ಪ್ರಯುಕ್ತ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು,ಅದಮಾರು ಕಿರಿಯ ಮಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರು “ಬಲೀಂದ್ರ ಪೂಜೆ”ಯನ್ನು ನಡೆಸಿದರು. ಬಳಿಕ ಪಂಚ ದೀಪ ಪ್ರಜ್ವಲನೆಯೊಂದಿಗೆ ವಾದ್ಯ ಮೇಳ ಸಹಿತ ಕೃಷ್ಣ ಮಠದ ಎಲ್ಲಾ ಭಾಗಗಳಿಗೂ ಮತ್ತು ಪರ್ಯಾಯ ಕೃಷ್ಣಾಪುರ ಮಠಕ್ಕೂ ದೀಪವನ್ನು ಪ್ರದರ್ಶಿಸಲಾಯಿತು. ಅದಮಾರು ಮಠದಲ್ಲಿ ದೀಪಾವಳಿಯ ಬಲಿಪಾಡ್ಯಮಿ ನಿಮಿತ್ತ ಶ್ರೀ ಮಠದ ಗೋಶಾಲೆಯಲ್ಲಿರುವ ಗೋವುಗಳಿಗೆ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಅದಮಾರು […]

ಎಕ್ಸ್ಪರ್ಟ್ ಪದವಿ ಪೂರ್ವಕಾಲೇಜಿನ ಪ್ರಸನ್ನಕುಮಾರ್ ಅವರಿಗೆ ಪಿ.ಎಚ್.ಡಿ.

ಮಂಗಳೂರು: ಎಕ್ಸ್ಪರ್ಟ್ ಪದವಿ ಪೂರ್ವಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಪ್ರಸನ್ನಕುಮಾರ್ ಆರ್ ಇವರು ಸಲ್ಲಿಸಿದ “ಸ್ಟಡಿ ಆಫ್ ಸ್ಟ್ರಕ್ಚರಲ್, ಆಪ್ಟಿಕಲ್‌ ಆ್ಯಂಡ್ ಮ್ಯಾಗ್ನೆಟಿಕ್ ಪ್ರೋಪರ್ಟೀಸ್‌ ಆಫ್‌ ಎಮ್‌ ಎನ್ ಕೊ ಆ್ಯಂಡ್‌ ಡಿವೈಡೊಪ್ಡ್ ಬಿಸ್ಮತ್ ಫೆರೈಟ್‌ಥಿನ್‌ಫಿಲ್ಮ್ಸ್” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ.ಎಚ್.ಡಿ. ಪದವಿಯನ್ನುನೀಡಿ ಗೌರವಿಸಿದೆ. ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿರುವ ಪ್ರೊ.ಗೋಪಾಲಕೃಷ್ಣ ನಾಯಕ್ ಅವರು ಮಾರ್ಗದರ್ಶನ ನೀಡಿರುತ್ತಾರೆ. ಇವರು ಮೂಲತಃ ಹಾಸನ ಜಿಲ್ಲೆಯವರಾಗಿದ್ದು, ರಾಮಶೆಟ್ಟಿ ಮತ್ತು ನಾಗಮ್ಮ ದಂಪತಿಗಳ ಪುತ್ರರಾಗಿದ್ದಾ

ಉಡುಪಿ-ಮಂಗಳೂರು ಲಯನ್ಸ್ ಕ್ಲಬ್ ಗಳ ಸಮಾಗಮ

ಉಡುಪಿ: ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಉಡುಪಿ ಮತ್ತು ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮಂಗಳೂರು ಈ ಎರಡು ಕ್ಲಬ್ ಗಳ ಸಮಾಗಮವು ಇತ್ತೀಚಿಗೆ ಉಡುಪಿಯ ಬಲೈಪಾದೆ ನಿತ್ಯಾನಂದ ಆರ್ಕೇಡ್ ಕಾಂಪ್ಲೆಕ್ಸ್ ಉದ್ಯಾವರ ಇಲ್ಲಿ ನೆರವೇರಿತು. ಜಿಲ್ಲಾ 317ಸಿಯ ಪ್ರಥಮ ಉಪ ಜಿಲ್ಲಾ ಗವರ್ನರ್ ಡಾ. ನೇರಿ ಕರ್ನೆಲಿಯೋ ಮುಖ್ಯ ಅತಿಥಿಯಾಗಿ ಮಾತನಾಡಿ, ಈ ರೀತಿಯ ಸಂಗಮ ಎರಡು ಜಿಲ್ಲೆಗಳ ಲಯನ್ ಸದಸ್ಯರು ಸಮಾಜಕ್ಕೆ ಇನ್ನೂ ಹೆಚ್ಚಿನ ಅಗತ್ಯ ಸೇವೆಗಳನ್ನು ಮಾಡುವ ಬಗ್ಗೆ ಮತ್ತು ಕ್ಲಬ್ ಗಳ ಮಧ್ಯೆ […]