ಅಜೆಕಾರಿನ ಕಾಂಗ್ರೆಸ್ ಕಾರ್ಯಕರ್ತ ಅರುಣ್ ಕುಲಾಲ್ ನಿಧನ
ಅಜೆಕಾರು ದೊಂಡೇರಂಗಡಿಯ ನಿವಾಸಿ ಅರುಣ್ ಕುಲಾಲ್ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಅವರಿಗೆ 41 ವರ್ಷ ವಯಸಾಗಿತ್ತು. ಅವರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. ದೊಂಡೇರಂಗಡಿ ಭಾಗದಲ್ಲಿ ಪಕ್ಷ ಸಂಘಟನೆ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರು ತಾಯಿ, ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.
ಬ್ರಹ್ಮಾವರ ವಿಶ್ವ ಹಿಂದೂ ಪರಿಷತ್ ವತಿಯಿಂದ ಸಾಮೂಹಿಕ ಗೋ ಪೂಜೆ
ಬ್ರಹ್ಮಾವರ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಬ್ರಹ್ಮಾವರ ಪ್ರಖಂಡ ವತಿಯಿಂದ ಅ. 26 ಬ್ರಹ್ಮಾವರ ಗಾಂಧಿ ಮೈದಾನದಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿಯಲ್ಲಿ ನಡೆದ ಸಾಮೂಹಿಕ ಗೋಪೂಜೆ ಕಾರ್ಯಕ್ರಮದಲ್ಲಿ ಶಾಸಕ ಕೆ. ರಘುಪತಿ ಭಟ್ ಭಾಗವಹಿಸಿ ಗೋ ಮಾತೆಗೆ ಪೂಜೆ ಸಲ್ಲಿಸಿದರು.
ಹೊಂಬಾಳೆ ಫಿಲಮ್ಸ್ ನಿರ್ಮಾಣಗಳ ಪೈಕಿ ಅತಿ ಹೆಚ್ಚು ಜನ ವೀಕ್ಷಿಸಿದ ಚಿತ್ರ ಕಾಂತಾರ: ಕೆ.ಜಿ.ಎಫ್ ದಾಖಲೆ ಧೂಳೀಪಟ!!
ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ ಕಾಂತಾರ ‘..! ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ.. ಧನ್ಯವಾದ ಕರ್ನಾಟಕ.. ಈ ರೀತಿಯಾಗಿ ನಿರ್ಮಾಪಕ ವಿಜಯ್ ಕಿರಗಂದೂರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಮಧ್ಯೆ ಚಿತ್ರವು ಯಶಸ್ವಿ 25 ದಿನಗಳನ್ನು ಪೂರೈಸಿದೆ. ತಮಿಳು ಚಿತ್ರರಂಗದ ದಿಗ್ಗಜ ತಲೈವಾ ರಜನಿಕಾಂತ್ ಕೂಡಾ ಕಾಂತಾರ ಕಂಡು ತಮ್ಮ ಮೆಚ್ಚುಗೆ […]
5 ದಶಕಗಳಿಂದ ಸ್ನಾನ ಮಾಡದ ವಿಶ್ವದ ಅತ್ಯಂತ ಕೊಳಕು ವ್ಯಕ್ತಿ 94 ನೇ ವಯಸ್ಸಿನಲ್ಲಿ ನಿಧನ
ಟೆಹ್ರಾನ್: ಸರಿಸುಮಾರು 5 ದಶಕಗಳಿಂದ ಸ್ನಾನ ಮಾಡದಿದ್ದಕ್ಕಾಗಿ “ವಿಶ್ವದ ಅತ್ಯಂತ ಕೊಳಕು ಮನುಷ್ಯ” ಎಂದು ಕರೆಯಲ್ಪಡುತ್ತಿದ್ದ ಇರಾನಿನ ವ್ಯಕ್ತಿಯೊಬ್ಬರು ತಮ್ಮ 94 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಸ್ನಾನವನ್ನೇ ಮಾಡದ ಅಮೌ ಹಾಜಿ ಭಾನುವಾರ ದೇಜ್ಗಾ ಗ್ರಾಮದಲ್ಲಿ ನಿಧನರಾದರು ಎಂದು ಐ.ಆರ್. ಎನ್. ಎ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಮೌ ಹಾಜಿ ಅವರು “ಅನಾರೋಗ್ಯಕ್ಕೆ ಒಳಗಾಗುವ” ಭಯದಿಂದ ಸ್ನಾನ ಮಾಡುವುದನ್ನು ತಪ್ಪಿಸುತ್ತಿದ್ದರು ಎಂದು ಸ್ಥಳೀಯ […]
ಅಕ್ಷತಾ ಮೂರ್ತಿ: ಇನ್ಫೋಸಿಸ್ ನಿಂದ ಇಂಗ್ಲೆಡ್ ನ ಪ್ರಥಮ ಮಹಿಳೆಯವರೆಗಿನ ಪಯಣ
ಭಾರತೀಯ ಬಿಲಿಯನೇರ್ ಮತ್ತು ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಸಮಾಜ ಸೇವಕಿ ಹಾಗೂ ಲೇಖಕಿ ಸುಧಾ ಮೂರ್ತಿ ದಂಪತಿಗಳ ಮಗಳಾದ ಅಕ್ಷತಾ ಮೂರ್ತಿ 1980 ರಲ್ಲಿ ಕರ್ನಾಟಕದ ಹುಬ್ಬಳ್ಳಿಯಲ್ಲಿ ಜನಿಸಿದರು. ಅಕ್ಷತಾ ಮೂರ್ತಿ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಸಾಧಾರಣ ಹುಡಿಗಿಯಂತೆಯೆ ಬೆಳೆದರು. ಮೂರ್ತಿ ದಂಪತಿಗಳು ಮುಂಬೈನಲ್ಲಿ ತಮ್ಮ ವೃತ್ತಿಜೀವನವನ್ನು ನಿರ್ಮಿಸುವುದರಲ್ಲಿ ವ್ಯಸ್ತವಾದ್ದರಿಂದ ಅಕ್ಷತಾ ಆರಂಭದ ದಿನಗಳನ್ನು ತನ್ನ ಅಜ್ಜಿ ಮನೆಯಲ್ಲಿಯೆ ಕಳೆದಿದ್ದಾರೆ. ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಬಾಲ್ಡ್ವಿನ್ ಬಾಲಕಿಯರ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದ ಅಕ್ಷತಾ, ಉನ್ನತ […]