ನಿಷೇಧ, ದಂಡಕ್ಕೂ ಜಗ್ಗದ ದೆಹಲಿಗರು: ದೀಪಾವಳಿಯಂದು ಪಟಾಕಿ ಸಿಡಿಸಿ ಸಂಭ್ರಮ ಆಚರಣೆ

ದೆಹಲಿ: ದೀಪಾವಳಿಯಂದು ಪಟಾಕಿ ಸಿಡಿಸದಂತೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರವು ಪಟಾಕಿಗಳ ಮೇಲೆ ನಿಷೇಧ ಹೇರಿದ್ದರೂ ದೆಹಲಿಗರು ಮಾತ್ರ ಇದಕ್ಕೆ ಕ್ಯಾರೇ ಅನ್ನದೆ ಪಟಾಕಿ ಸಿಡಿಸಿ ದೀಪಾವಳಿಯ ಸಂಭ್ರಮವನ್ನು ಆಸ್ವಾದಿಸಿದ್ದಾರೆ. ದೀಪಾವಳಿಯಂದು ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಸಿಡಿಸಿದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ₹ 200 ದಂಡ ವಿಧಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಕಳೆದ ವಾರ ಹೇಳಿದ್ದರು. ಕಾನೂನು ಪ್ರತಿಬಂಧಕ ಜಾರಿಯಲ್ಲಿದ್ದರೂ, ದಕ್ಷಿಣ ಮತ್ತು ವಾಯುವ್ಯ ದೆಹಲಿ ಸೇರಿದಂತೆ ನಗರದ […]

ಶಿವಕುಮಾರ್ ಅಂಬಲಪಾಡಿ ಇವರಿಗೆ ಮಹಾರಾಷ್ಟ್ರ ಎಪೆಕ್ಸ್ ಕಾರ್ಪೋರೇಷನ್ ಲಿಮಿಟೆಡ್ ಸಿಬ್ಬಂದಿ ವರ್ಗದಿಂದ ಸನ್ಮಾನ

ಉಡುಪಿ: ಕೇಂದ್ರ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಸುಪರ್ದಿಯಲ್ಲಿರುವ ಕೇಂದ್ರೀಯ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆ ಗೋವಾ ಇದರ ಆಡಳಿತ ಮಂಡಳಿಯ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ, ಮಹಾರಾಷ್ಟ್ರ ಎಪೆಕ್ಸ್ ಕಾರ್ಪೋರೇಷನ್ ಲಿಮಿಟೆಡ್ ಮಣಿಪಾಲ ಇದರ ಅಧಿಕಾರಿ ಶಿವಕುಮಾರ್ ಅಂಬಲಪಾಡಿ ಇವರನ್ನು ಧನಲಕ್ಷ್ಮೀ ಪೂಜೆಯ ಸುಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗದ ಪರವಾಗಿ ಸಂಸ್ಥೆಯ ಸಹಾಯಕ ಮಹಾ ಪ್ರಬಂಧಕ ವಿವೇಕಾನಂದ ಬಿ. ಇವರು ಸಂಸ್ಥೆಯ ಪ್ರಬಂಧಕ ಶಶೀಂದ್ರ ಭಟ್ ಹಾಗೂ ಮಣಿಪಾಲ ಸಮೂಹ ಸಂಸ್ಥೆಯ ಹಿರಿಯ ಅಧಿಕಾರಿ ಕೆ.ಎಸ್. […]