ನಗರಸಭಾ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆ ಕುರಿತು ಸಮೀಕ್ಷಾ ಕಾರ್ಯ

ಉಡುಪಿ: ಉಡುಪಿ ನಗರಸಭೆಯ ವತಿಯಿಂದ ನಗರಸಭಾ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆ ಕುರಿತು ಸಮೀಕ್ಷಾ ಕಾರ್ಯ ನಡೆಸುತ್ತಿದ್ದು, ಸಮೀಕ್ಷೆ ಮಾಡುವವರಿಗೆ ಮಾಹಿತಿ ನೀಡಿ ಸಹಕರಿಸುವಂತೆ, ಈವರೆಗೂ ನವೀಕರಿಸದೇ ಇರುವವರು ಕೂಡಲೇ ನವೀಕರಿಸುವಂತೆ, ಉದ್ದಿಮೆ ಸ್ಥಗಿತಗೊಳಿಸಿ ರದ್ದುಗೊಳಿಸದೇ ಇದ್ದಲ್ಲಿ ನಗರಸಭಾ ಕಚೇರಿಗೆ ಮಾಹಿತಿ ನೀಡುವಂತೆ ಹಾಗೂ ಎಲ್ಲಾ ಉದ್ದಿಮೆದಾರರು ಏಕಬಳಕೆ ಪ್ಲಾಸ್ಟಿಕ್ ಅನ್ನು ಬಳಸದಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖಂಡಗ್ರಾಸ ಸೂರ್ಯಗ್ರಹಣ: ದೀಪಾವಳಿ ಹಬ್ಬದ ಧಾರ್ಮಿಕ ವಿಧಿವಿಧಾನಗಳ ವಿವರ

ಉಡುಪಿ: ಈ ಬಾರಿ ದೀಪಾವಳಿಯಂದೇ ಖಂಡಗ್ರಾಸ ಸೂರ್ಯಗ್ರಹಣವಿರುವುದರಿಂದ ಅಂಗಡಿ ಪೂಜೆ ಮುಂತಾದವುಗಳನ್ನು ಸೋಮವಾರದಂದು ಸಂಜೆ ಮಾಡಿದಲ್ಲಿ ಪ್ರಶಸ್ತವಾಗಿರುತ್ತದೆ. ದೀಪಾವಳಿ ಹಬ್ಬದ ಧಾರ್ಮಿಕ ವಿಧಿ ವಿಧಾನಗಳು: ಅ.23 ಭಾನುವಾರದಂದು ಸಂಜೆ ಗಂಗಾ ಸ್ಮರಣ ಪೂಜಾ, ಜಲಪೂರಣ. ನೀರು ತುಂಬುವುದು. ಅ. 24 ರಂದು ಸೋಮವಾರ ತೈಲಾಭ್ಯಂಜನ, ನರಕಚತುರ್ದಶಿ. ದೀಪಾವಳಿ, ಧನ -ಧಾನ್ಯ -ಲಕ್ಷ್ಮೀಪೂಜೆ, ಬಲಿಂದ್ರ ಪೂಜೆ. ಅ. 25 ಮಂಗಳವಾರ ಬೆಳಿಗ್ಗೆ ಗೋಪೂಜೆ; ಸಂಜೆ ಖಂಡಗ್ರಾಸ ಸೂರ್ಯಗ್ರಹಣ ಸ್ಪರ್ಶ ಕಾಲ: ಸಾಯಂಕಾಲ ಗಂ.5.06 ನಿಮಿಷ; ಗ್ರಹಣ ಮೋಕ್ಷ: ಸಾಯಂಕಾಲ […]

ಅಸಭ್ಯ ರೀತಿ ವೀಡೀಯೋ ಎಡಿಟ್ ಮಾಡಿದವರ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಪ್ರತಿಭಾ ಕುಳಾಯಿ

ಮಂಗಳೂರು: ಅ.18 ರಂದು ಸಾಮಾಜಿಕ ಜಾಲತಾಣದಲ್ಲಿ ತನ್ನ ಅಸಹ್ಯ ಮತ್ತು ಅಸಭ್ಯ ರೀತಿಯಲ್ಲಿ ಚಿತ್ರಿಸಿದ ಭಾವಚಿತ್ರಕ್ಕೆ ಕಮೆಂಟ್ ಮಾಡಿ ಎಂದು ಹರಿಯಬಿಟ್ಟ ಕೆ.ಟಿ ಶೆಟ್ಟಿ ಎಂಬವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಮಂಗಳೂರು ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ. ಅ18 ರಂದು ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುತ್ತಿಗೆ ಪ್ರತಿಭಟನಾ ಸಂದರ್ಭದಲ್ಲಿ ಆರಕ್ಷಕ ಅಧಿಕಾರಿಗಳು ತಮ್ಮನ್ನು ಬಂಧಿಸಲು ಬಂದಿದ್ದು, ಆ ಸಂದರ್ಭದಲ್ಲಿ ಬಂಧನದ ವಿರುದ್ದ ಸಾರ್ವಜನಿಕವಾಗಿ ಪ್ರತಿಭಟಿಸಿದ್ದು, ಆಗ ಅಲ್ಲಿದ್ದ […]

ದೀಪಾವಳಿಯನ್ನು ಸ್ಮರಣೀಯವಾಗಿ ಆಚರಿಸಲು ಸಜ್ಜಾಗಿದೆ ‘ಸ್ಮರಣಿಕಾ’: ಗ್ರಾಹಕರನ್ನು ಸೆಳೆಯುತ್ತಿದೆ ಆಕರ್ಷಕ ಗೂಡುದೀಪ, ಗಿಫ್ಟ್, ಸ್ವೀಟ್ಸ್

ಉಡುಪಿ:‌ ಕಳೆದ 30 ವರುಷದಿಂದ ಮೊಮೆಂಟೊ ಮತ್ತು ಗಿಫ್ಟ್ ವಸ್ತುಗಳಿಗೆ ಹೆಸರುವಾಸಿ ಆದ ಉಡುಪಿಯ ಪ್ರತಿಷ್ಠಿತ ಸ್ಮರಣಿಕಾ ಸಂಸ್ಥೆಯು ಈ ಸಲದ ದೀಪಾವಳಿ ಹಬ್ಬವನ್ನು ಸ್ಮರಣೀಯವಾಗಿ ಆಚರಿಸಲು ಸಜ್ಜಾಗಿದೆ. ದೀಪಾವಳಿ ಪ್ರಯುಕ್ತ ಉತ್ಪನ್ನಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಆಯೋಜಿಸಿದೆ. ಉಡುಪಿ ರೆಸಿಡೆನ್ಸಿ ಸಮೀಪದ ಅಫನ್ ಕಾಂಪ್ಲೆಕ್ಸ್ ನಲ್ಲಿ ಮತ್ತು ಉಡುಪಿ ಸಿಟಿ ಬಸ್ಟ್ಯಾಂಡ್ ಹತ್ತಿರದ ಕೆಎಸ್ಆರ್ಟಿಸಿ ನರ್ಮ್ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ಕಟ್ಟಡದಲ್ಲಿರುವ ಸ್ಮರಣಿಕಾ ಮೊಮೆಂಟೊ, ಗಿಫ್ಟ್ ಸೆಂಟರ್ ಹಾಗೂ ಬಾಂಬೆ ಸ್ವೀಟ್ಸ್ ನಲ್ಲಿ ವಿವಿಧ […]