ಅಯೋಧ್ಯೆ ಶ್ರೀ ರಾಮ ಚಂದ್ರನ ದಿಗ್ವಿಜಯ ಯಾತ್ರೆಯ ಪೂರ್ವ ತಯಾರಿ ಬೈಠಕ್
ಉಡುಪಿ: ಅಯೋಧ್ಯೆ ಶ್ರೀರಾಮಚಂದ್ರನ ದಿಗ್ವಿಜಯ ಯಾತ್ರೆಯ ಪೂರ್ವ ತಯಾರಿ ಬೈಠಕ್ ಅ. 17 ರಂದು ಅಮೃತ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು. ಅಯೋಧ್ಯೆ ಪ್ರಭು ಶ್ರೀರಾಮಚಂದ್ರನ ದಿಗ್ವಿಜಯ ಯಾತ್ರೆಯು 26 ರಾಜ್ಯಗಳನ್ನು ಸುತ್ತಾಡಿ ಬರುವ ಯಾತ್ರೆಗೆ ಉತ್ತರ ಪ್ರದೇಶದ ಸನ್ಮಾನ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್ ಚಾಲನೆಯನ್ನು ನೀಡಿದ್ದು, ಈ ಯಾತ್ರೆಯು ನವಂಬರ್ 7 ರಂದು ಉಡುಪಿ ಜಿಲ್ಲೆಗೆ ಬರಲಿದ್ದು, ಇದಕ್ಕೆ ಪೂರ್ವ ತಯಾರಿಗಾಗಿ ಯೋಚನೆ ಮತ್ತು ಯೋಜನೆಗಾಗಿ ಸಮಿತಿ ರಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಪ್ರಧಾನ […]
ಅ.22 ರಂದು ಶಕಲಕ ಬೂಮ್ ಬೂಮ್ ಶೀರ್ಷಿಕೆ ಹಾಡು ಬಿಡುಗಡೆ
ಉಡುಪಿ: ದೀಪಾವಳಿಯ ಶುಭ ಸಂದರ್ಭದಲ್ಲಿ ಅ.22 ರಂದು ಶಕಲಕ ಬೂಮ್ ಬೂಮ್ ತುಳು ಹಾರರ್, ಕಾಮಿಡಿ , ಸಸ್ಪೆನ್ಸ್ ಚಿತ್ರದ ಶೀರ್ಷಿಕೆ ಹಾಡನ್ನು ಉಡುಪಿಯ ಶಾಸಕ ಕೆ. ರಘುಪತಿ ಭಟ್ ರವರು ಜಸ್ಟ್ ರೋಲ್ ಫಿಲ್ಮ್ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಿರುವರು. ಹಾಡಿನ ಸಾಹಿತ್ಯವನ್ನು ಪ್ರಶಾಂತ್ ಸಿಕೆ ಬರೆದಿದ್ದರೆ ಸಂಗೀತ ಸಂಯೋಜನೆಯನ್ನು ಡಾಲ್ವಿನ್ ಕೊಳಲಗಿರಿ ಮಾಡಿದ್ದಾರೆ. ಸಂಕಲನಕಾರರಾಗಿ ಪ್ರಜ್ವಲ್ ಸುವರ್ಣ ದುಡಿದಿದ್ದಾರೆ. ಚಿತ್ರವು ಡಿ.16 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
ಇಂದ್ರಾಳಿ ರಸ್ತೆ ಕಾಮಗಾರಿ: ಘನ ವಾಹನಗಳಿಗೆ ಪರ್ಯಾಯ ಮಾರ್ಗ
ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ ಕಿ.ಮೀ 76.040 ರಿಂದ ಕಿ.ಮೀ 85.200 ವರೆಗೆ ಚತುಷ್ಪಥ ಕಾಮಗಾರಿ ಇಂದ್ರಾಳಿ ರೈಲ್ವೇ ಸೇತುವೆ ಬಳಿ ಬಾಕಿ ಇರುವ ಕಾಂಕ್ರೀಟೀಕರಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಇಂದ್ರಾಳಿ ರೇಲ್ವೆ ಸೇತುವ ಮೂಲಕ ಭಾರೀ ವಾಹನ ಸಂಚಾರವನ್ನು ಕಡ್ಡಾಯವಾಗಿ ನಿರ್ಬಂಧಿಸಿದ್ದು, ವಾಹನಗಳ ದಟ್ಟಣಿಕೆಯಿಂದ ಸುಗಮ ಸಂಚಾರಕ್ಕೆ ಉಳಿದ ವಾಹನಗಳಿಗೆ ಅಡಚಣೆಯಗುತ್ತಿರುವ ಹಿನ್ನಲೆ ಇತರ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕೆಂದು ಸೂಚಿಸಲಾಗಿದೆ. ಕುಂದಾಪುರ ಕಡೆಯಿಂದ ಬರುವ ಘನವಾಹನಗಳು ಅಂಬಾಗಿಲು-ಪೆರಂಪಳ್ಳಿ-ಮಣಿಪಾಲ ರಸ್ತೆಯ ಮೂಲಕ ಚಲಿಸುವುದು. ಉಡುಪಿಯಿಂದ ಬರುವ […]