ಉಪ್ಪಿನಕುದ್ರು: ವೆಂಟನಾ ಫೌಂಡೇಶನ್ ನಿಂದ ಗೊಂಬೆಯಾಟ ಅಕಾಡೆಮಿಗೆ ಜನರೇಟರ್ ಕೊಡುಗೆ
ಉಡುಪಿ: ವೆಂಟನಾ ಫೌಂಡೇಶನ್ ವತಿಯಿಂದ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಕೊಡುಗೆಯಾಗಿ ನೀಡಿರುವ 15 ಕೆವಿ ಜನರೇಟರ್ ಹಸ್ತಾಂತರಿಸುವ ಕಾರ್ಯಕ್ರಮವು ಅಕ್ಟೋಬರ್ 16 ರಂದು ನಡೆಯಿತು. ಉಡುಪಿಯ ಮಾಹಿತಿ ತಂತ್ರಜ್ಞಾನದ ದಿಗ್ಗಜ ಸಂಸ್ಥೆ 99ಗೇಮ್ಸ್ ಆನ್ ಲೈನ್ ಪ್ರೈ. ಲಿ. ನ ಉಪಾಧ್ಯಕ್ಷೆ ಹಾಗೂ ವೆಂಟನಾ ಫೌಂಡೇಶನ್ ನ ಟ್ರಸ್ಟಿ ಶಿಲ್ಪಾ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ರೋಹಿತ್ ಭಟ್ ಅವರ ನೇತೃತ್ವದ ವೆಂಟನಾ ಫೌಂಡೇಶನ್ ಸಮಾನ ಮನಸ್ಕರೊಂದಿಗೆ ಆರಂಭಗೊಂಡಿದ್ದು, ಅದರ ಮೂಲಕ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ […]
ಕಾಸರಗೋಡು: ಕಾಂತಾರ ವೀಕ್ಷಿಸಲು ಒಂದೇ ಬಸ್ ನಲ್ಲಿ ತೆರಳಿದ 69 ಗ್ರಾಮಸ್ಥರು!
ಕಾಸರಗೋಡು: ಎಲ್ಲೆಲ್ಲೂ ಕಾಂತಾರ ಮಾಯೆ ಆವರಿಸಿದೆ. ಹಳ್ಳಿ, ನಗರ, ದೇಶ, ಭಾಷೆಗಳ ಗಡಿಯನ್ನು ಮೀರಿ ಕಾಂತಾರ ಬೆಳೆಯುತ್ತಿದೆ. ಒಂದಾನೊಂದು ಕಾಲದಲ್ಲಿ ತುಳುನಾಡಿನ ಅವಿಭಾಜ್ಯ ಅಂಗವಾಗಿದ್ದ, ಮತ್ತು ಈಗಲೂ ತುಳುವ ಆಚರಣೆಗಳನ್ನು ಮೈಗೂಡಿಸಿಕೊಂಡಿರುವ ಕೇರಳದ ಕಾಸರಗೋಡು ಜಿಲ್ಲೆಯ ಕುಂಟಮುಕ್ಕಲ ಗ್ರಾಮದ ಒಟ್ಟು 69 ಜನರು ಕಾಂತಾರ ವೀಕ್ಷಿಸಲು ಒಂದೇ ಬಸ್ ನಲ್ಲಿ ತೆರಳಿದ್ದಾರೆ ಎನ್ನುವ ಸುದ್ದಿಯನ್ನು ನ್ಯೂಸ್ 18 ವರದಿ ಮಾಡಿದೆ. ಕಾಸರಗೋಡಿನ ಸಮೀಪದ ಚಿತ್ರಮಂದಿರದಲ್ಲಿ ಕಾಂತಾರವನ್ನು ವೀಕ್ಷಿಸಲು ಈ ಉತ್ಸಾಹಭರಿತ ಗ್ರಾಮಸ್ಥರ ಗುಂಪು ಒಂದೇ ಬಸ್ ಹತ್ತಿದೆ […]
ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್: ಟೀಚರ್ಸ್ ಟ್ರೈನಿಂಗ್ ಪ್ರವೇಶಾತಿ ಪಡೆಯಲು ಅ.20 ಕೊನೆಯ ದಿನ
ಮಣಿಪಾಲ: ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮಣಿಪಾಲದಲ್ಲಿ ಮಹಿಳೆಯರಿಗೆ ಮಾಂಟೆಸ್ಸರಿ/ನರ್ಸರಿ ಟೀಚರ್ ಟ್ರೈನಿಂಗ್ ಕೋರ್ಸಿಗೆ ಪ್ರವೇಶಾತಿ (2022-23) ಪ್ರಕ್ರಿಯೆ ಆರಂಭವಾಗಿದ್ದು, ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಅಭ್ಯರ್ಥಿಗಳು ಈ ತರಬೇತಿಗೆ ಪ್ರವೇಶ ಪಡೆದುಕೊಳ್ಳಬಹುದು. ಕೇವಲ ಕೆಲವೇ ಸೀಟುಗಳು ಲಭ್ಯವಿದ್ದು, ಆಸಕ್ತಿಯಿರುವವರು, ಹೆಚ್ಚಿನ ಮಾಹಿತಿಗಾಗಿ ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಡಿ.ಸಿ ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್ ಕಾಂಪ್ಲೆಕ್ಸ್, 1ನೇ ಮಹಡಿಯಲ್ಲಿರುವ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಶಂಕರನಾರಾಯಣ ಸರಕಾರಿ ಕಾಲೇಜಿನಲ್ಲಿ ಸಾಫ್ಟ್ ಸ್ಕಿಲ್ಸ್ ಕುರಿತ ತರಬೇತಿ ಕಾರ್ಯಾಗಾರ
ಉಡುಪಿ: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಇದರ ವತಿಯಿಂದ ನಾಂದಿ ಫೌಂಡೇಶನ್ ಮತ್ತು ಮಹೀಂದ್ರ ಫ್ರೆಂಡ್ ಕ್ಲಾಸ್ ರೂಮ್ ಇವರ ಸಹಯೋಗದೊಂದಿಗೆ ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯರಿಗೆ ನಡೆದ ಸಾಫ್ಟ್ ಸ್ಕಿಲ್ಸ್ ಕುರಿತ ತರಬೇತಿ ಕಾರ್ಯಾಗಾರವನ್ನು ಕಾಲೇಜಿನ ಪ್ರಾಂಶುಪಾಲ ಗಂಗರಾಜು ಉದ್ಘಾಟಿಸಿದರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್ ಬಿ., ಜಿಲ್ಲಾ ಸಲಹೆಗಾರ್ತಿ ಸಂಧ್ಯಾರಾಣಿ, ನಾಂದಿ ಫೌಂಡೇಶನ್ ತರಬೇತುದಾರ ಚಿನ್ನೀ ಅಜಯ್, ಕಾಲೇಜಿನ ಉಪನ್ಯಾಸಕರು ಹಾಗೂ […]
ರಾಜ್ಯೋತ್ಸವ ಪ್ರಯುಕ್ತ ಮಕ್ಕಳಿಗೆ ಕನ್ನಡ ಗೀತೆ ಸ್ಪರ್ಧೆ
ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಿಲ್ಲೆಯ 5 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ನವೆಂಬರ್ 1 ರಂದು ಮಧ್ಯಾಹ್ನ 1.30 ಕ್ಕೆ ನಗರದ ಬ್ರಹ್ಮಗಿರಿ ಜಿಲ್ಲಾ ಬಾಲಭವನದಲ್ಲಿ ಕನ್ನಡ ಗೀತೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಕನ್ನಡ ನಾಡಿನ ಕವಿ, ಸಾಹಿತಿಗಳಿಂದ ರಚಿಸಲ್ಪಟ್ಟ ಕನ್ನಡ ನಾಡಿಗೆ ಸಂಬಂಧಿಸಿದ ಸುಗಮ ಸಂಗೀತ ಹಾಗೂ ಸಿನಿಮಾ ಗೀತೆಗಳನ್ನು ಹಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 0820-2574972 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು […]