ಗಗನಕ್ಕೇರಿದ ಖಾಸಗಿ ಬಸ್ ಟಿಕೆಟ್ ದರ: ದೀಪಾವಳಿ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅಧಿಕೃತ ಹೊರೆ

ಬೆಂಗಳೂರು: ಇನ್ನೇನು ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಉಳಿದಿದ್ದು, ಕೆಲಸದ ಪ್ರದೇಶಗಳಿಂದ ತಮ್ಮ ಹುಟ್ಟೂರಿಗೆ ಹಿಂದಿರುಗುವವರ ದಂಡೇ ಬಸ್ ನಿಲ್ದಾಣಗಳಲ್ಲಿ ಕಾಣಸಿಗುತ್ತವೆ. ಈ ಮಧ್ಯೆ ಖಾಸಗಿ ಬಸ್ ದರಗಳು ಗಗನಕ್ಕೇರಿವೆ. ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ, ವಿಜಯಪುರ, ಕಲಬುರಗಿ, ಹೈದರಾಬಾದ್ ಮತ್ತು ಚೆನ್ನೈ ನಗರಗಳಿಗೆ ಸಾಗುವ ಖಾಸಗಿ ಬಸ್ ದರಗಳು ಏರಿಕೆಯಾಗಿವೆ. ಹವಾನಿಯಂತ್ರಿತವಲ್ಲದ ಸ್ಲೀಪರ್ ಬಸ್‌ನಲ್ಲಿ ಸಾಮಾನ್ಯವಾಗಿ 800 ರೂಪಾಯಿ ಬೆಲೆಯ ಸೀಟು ಇದೀಗ 2000 ರೂಪಾಯಿಗೆ ಮಾರಾಟವಾಗುತ್ತಿದೆ. ಹವಾನಿಯಂತ್ರಿತ ಸ್ಲೀಪರ್ ಬಸ್‌ ನಲ್ಲಿ ಉಳಿದ ದಿನಗಳಲ್ಲಿ […]

ಸಿದ್ಧಾಂತದ ಹೆಸರಿನಲ್ಲಿ ಪರದೆಯ ಮೇಲೆ ಹಿಂಸೆಯನ್ನು ಅನುಮೋದಿಸುವುದು ಕಳವಳಕಾರಿ: ರಘನಂದನ್

ಉಡುಪಿ: ಇಂದು ಸಿನಿಮಾದಲ್ಲಿನ ಹಿಂಸೆಯ ಸ್ವರೂಪ ಬದಲಾಗುತ್ತಿದ್ದು, ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿರುವ ನಾಯಕ ಪಾತ್ರಗಳೇ ಹೆಚ್ಚುತ್ತಿವೆ. ಸಿದ್ಧಾಂತದ ಹೆಸರಿನಲ್ಲಿ ಪರದೆಯ ಮೇಲೆ ಹಿಂಸೆಯನ್ನು ಅನುಮೋದಿಸುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಹಿರಿಯ ನಾಟಕಕಾರ ಹಾಗೂ ನಿರ್ದೇಶಕ ರಘುನಂದನ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನಲ್ಲಿ ‘ಸಿನೆಮಾದಲ್ಲಿ ಫ್ಯಾಸಿಸಂ’ ಎಂಬ ವಿಷಯದ ಕುರಿತು ಮಾತನಾಡಿದ ರಘುನಂದನ, ಜನಪ್ರಿಯ ಸಿನಿಮಾ ಪ್ರಕಾರವು ನಮ್ಮ ಸಮಾಜದ ಕೆಲವು ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತದೆ. ಕಾನೂನಿನ ಮೇಲಿನ ಗೌರವದಿಂದ ದೂರ […]

ಪಕ್ಷ ಬಲವರ್ಧನೆಗೆ ಜಿಲ್ಲೆಯಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಬಿಜೆಪಿ ಮಹತ್ವಾಕಾಂಕ್ಷಿ ‘ಜನ ಸಂಕಲ್ಪ ಯಾತ್ರೆ’ಯು ಉಡುಪಿ ಜಿಲ್ಲೆಯ ಬೈಂದೂರು ಮತ್ತು ಕಾಪು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನ.16 ಮತ್ತು 17ರಂದು ಮುಖ್ಯಮಂ ತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪರವರ ನೇತೃತ್ವದಲ್ಲಿ ನಡೆಯಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಅ.19 ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. […]

ದೀಪಾವಳಿ ಪ್ರಯುಕ್ತ ಕಿನ್ನಿಮೂಲ್ಕಿ “ಪೃಥ್ವಿ ಏಜೆನ್ಸೀಸ್”ನಲ್ಲಿ ವಿಶೇಷ ರಿಯಾಯಿತಿ ಮಾರಾಟ

ಉಡುಪಿ: ಉಡುಪಿ ಕಿನ್ನಿಮೂಲ್ಕಿಯಲ್ಲಿ ಇರುವ ಗೃಹೋಪಕರಣ, ಪೀಠೋಪಕರಣಗಳ ಮಳಿಗೆ ಪೃಥ್ವಿ ಏಜೆನ್ಸೀಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ದರದ ಮಾರಾಟ ಆಯೋಜಿಸಲಾಗಿದೆ. ಡಬಲ್ ಕಾಟ್ 7,500 ರೂ., ಡೈನಿಂಗ್ ಟೇಬಲ್ 8,999 ರೂ., ಸೋಫಾ ಸೆಟ್ 11,500 ರೂ., ಗ್ಲಾಸ್ ಸೆಂಟರ್ ಟೇಬಲ್ 2, 500 ರೂ., 3 ಡೋರು ವಾರ್ಡ್ ರೋಬ್ 9,999 ರೂ., ಕಂಪ್ಯೂಟರ್ ಚೆಯರ್ 2,500 ರೂ., ಆರಂಭಿಕ ದರದಲ್ಲಿ ದೊರೆಯಲಿವೆ. ಕ್ಲಾತ್ ಹ್ಯಾಂಗರ್ 1,500 ರೂ., ಡ್ರೆಸ್ಸಿಂಗ್ ಮಿರರ್ […]

ಮಂಗಳೂರಿನಿಂದ ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕಿ ಗೋವಾದಲ್ಲಿ ಪತ್ತೆ

ಮಂಗಳೂರು: ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಭಾರ್ಗವಿ ಎನ್ನುವ ಬಾಲಕಿ ಸೋಮವಾರ ಮುಂಜಾನೆ 3 ಗಂಟೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ನಾಪತ್ತೆಯಾಗಿದ್ದ ಘಟನೆ ವರದಿಯಾಗಿತ್ತು. ಈ ಬಗ್ಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಾಪತ್ತೆಯಾದ ಹುಡುಗಿ ಪತ್ತೆಯಾಗಿದ್ದಾಳೆ ಎಂದು ಹೇಳಿದ್ದಾರೆ. ಇದಕ್ಕಾಗಿ ಅವರು ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು 14 ವರ್ಷದ ಭಾರ್ಗವಿ ಗೋವಾದಲ್ಲಿ ಪತ್ತೆಯಾಗಿದ್ದು, ಪಣಜಿ ಪೊಲೀಸ್ ಠಾಣೆಯಲ್ಲಿದ್ದಾಳೆ ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ. […]