ನಿಟ್ಟೆ: ಜಪಾನಿನ ನಿಡ್ಯಾಕ್-ರೀಡ್ ಕಂಪೆನಿಯ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆ
ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಜಪಾನ್ ನ ನಿಡ್ಯಾಕ್-ರೀಡ್ ಕಾರ್ಪೋರೇಶನ್ ಸಂಸ್ಥೆಯ ಸಹಯೋಗದಲ್ಲಿ ನಿಟ್ಟೆ ಕ್ಯಾಂಪಸ್ ನಲ್ಲಿ ನಿಡ್ಯಾಕ್-ರೀಡ್ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಆರಂಭಿಸಿದೆ. ಮಂಗಳವಾರದಂದು ನಿಡ್ಯಾಕ್-ರೀಡ್ ಸಂಸ್ಥೆಯ ನಿರ್ದೇಶಕ ಹಾಗೂ ಸಿ.ಇ.ಒ ಹಿಡೆಕಾಜು ಯಮಜಕಿ ಅವರು ಗಣ್ಯರ ಸಮ್ಮುಖದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆಗೊಳಿಸಿ ಮಾತನಾಡಿ, ಭಾರತದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲೊಂದಾಗಿರುವ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದೊಂದಿಗೆ ನಿಡ್ಯಾಕ್ ರೀಡ್ ಸಂಸ್ಥೆಯು ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ […]
ಉಡುಪಿಯ ‘ಡೆನಿಮ್ ಹಟ್’ ಪ್ರೀಮಿಯಂ ಮೆನ್ಸ್ ವೇರ್ ನಲ್ಲಿ ಈ ದೀಪಾವಳಿಗೆ ಕಾದಿದೆ ಭರ್ಜರಿ ಆಫರ್ಸ್: ಈಗಲೇ ಶಾಪಿಂಗ್ ಪ್ಲಾನ್ ಮಾಡಿ..
ಉಡುಪಿ: ಈ ಸಲದ ದೀಪಾವಳಿಗೊಂದು ಚೆಂದದ ಬಟ್ಟೆ ಖರೀದಿಸಬೇಕು ಎಂದು ಉಡುಪಿ ನಗರದ ಜನರು ಯೋಚಿಸುತ್ತಿರಬಹುದು. ಇಲ್ಲಿದೆ ನೋಡಿ ನಿಮ್ಮ ಬಟ್ಟೆ ಶಾಪಿಂಗ್ ಗೊಂದು ಹೇಳಿ ಮಾಡಿಸಿದ ಅಡ್ಡಾ. ಯಸ್, ನಗರದ ಹಳೆ ಪೋಸ್ಟ್ ಆಫೀಸ್ ರಸ್ತೆಯ ಕೊಳದ ಪೇಟೆ (ತೆಂಕಪೇಟೆ) ಸಾಯಿ ಹರ್ಷ ಸ್ಕ್ವಾರ್ ಕಟ್ಟಡದಲ್ಲಿರುವ ‘ಡೆನಿಮ್ ಹಟ್’ ಪ್ರೀಮಿಯಂ ಮೆನ್ಸ್ ವೇರ್ ಶೋರೂಮ್ ನಿಮ್ಮ ಶಾಪಿಂಗ್ ಆಸೆಯನ್ನು ಪೂರೈಸಿ ಭರ್ಜರಿ ಬಟ್ಟೆಗಳನ್ನು ನಿಮಗೆ ನೀಡಲಿದೆ. ಕಡಿಮೆ ಬೆಲೆಗೆ ಗುಣಮಟ್ಟದ ಬಟ್ಟೆ ನೀಡುವಲ್ಲಿ ಈಗಾಗಲೇ ಈ […]
ಆಗ ಪೇಸಿಎಂ; ಈಗ ಸೇಸಿಎಂ: ಸರಕಾರದ ವಿರುದ್ದ ಕಾಂಗ್ರೆಸ್ ನಿಂದ ಮತ್ತೊಂದು ಅಸ್ತ್ರ
ಬೆಂಗಳೂರು: ‘ಪೇಸಿಎಂ’ ಅಭಿಯಾನದ ನಂತರ, ಕಾಂಗ್ರೆಸ್‌ನ ಕರ್ನಾಟಕ ಘಟಕವು ಪ್ರತಿಪಕ್ಷಗಳು ಕೇಳಿದ 50 ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳಿಂದ ಉತ್ತರವನ್ನು ಕೋರಿ ‘ಸೇಸಿಎಂ’ ಅಭಿಯಾನವನ್ನು ಪ್ರಾರಂಭಿಸಿದೆ. ಕ್ಯೂಆರ್ ಕೋಡ್ ಸ್ವರೂಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಛಾಯಾಚಿತ್ರದೊಂದಿಗೆ ಪೇಸಿಎಂ ಅಭಿಯಾನದ ಅದೇ ಗ್ರಾಫಿಕ್ ಅನ್ನು ಪ್ರಚಾರಕ್ಕೆ ಬಳಸಲಾಗಿದೆ. “ಸೇಸಿಎಂ 90% ಈಡೇರಿಸಲಾಗಿಲ್ಲ”, “ಸಿಎಂ ಮಾತನಾಡಲು ನಾವು ಪೇಸಿಎಂ ಮಾಡಬೇಕೇ” ಎಂದು ಪ್ರಶ್ನಿಸಲಾಗಿದೆ. ಬಿಜೆಪಿ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಭರವಸೆಗಳಲ್ಲಿ ಶೇ 10 ರಷ್ಟನ್ನು ಕೂಡಾ ಈಡೇರಿಸಲು […]
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಅಕ್ರಮದ ಆರೋಪ ಹೊರಿಸಿದ ಶಶಿ ತರೂರ್ ತಂಡ
ನವದೆಹಲಿ: ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಉನ್ನತ ಹುದ್ದೆಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಶಶಿ ತರೂರ್ ನೇತೃತ್ವದ ಪಾಳಯವು ಉತ್ತರ ಪ್ರದೇಶದಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪಿಸಿದೆ. ಅಕ್ಟೋಬರ್ 19 ರಂದು, ಲೋಕಸಭಾ ಸಂಸದ ಶಶಿ ತರೂರ್ ಪರವಾಗಿ ಕಾಂಗ್ರೆಸ್ ನಾಯಕ ಸಲ್ಮಾನ್ ಸೋಜ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರಿಗೆ ಪತ್ರ ಬರೆದು ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ “ಅತ್ಯಂತ ಗಂಭೀರ ಅಕ್ರಮಗಳು” ನಡೆದಿವೆ ಎಂದು ಆರೋಪಿಸಿದ್ದಾರೆ. ಸೋಜ್ ತಮ್ಮ […]
ಬೆಂಗಳೂರಿನ ಬಾಲಕಿ ಮಂಗಳೂರಿನಲ್ಲಿ ನಾಪತ್ತೆ
ಮಂಗಳೂರು: ಸೋಮವಾರ ಮಂಗಳೂರಿಗೆ ಬಂದಿಳಿದಿದ್ದ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಭಾರ್ಗವಿ (14) ಎಂಬ ಬಾಲಕಿ ನಾಪತ್ತೆಯಾಗಿದ್ದಾಳೆ. ಭಾರ್ಗವಿ ಸೋಮವಾರ ಮುಂಜಾನೆ 3 ಗಂಟೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದ ನಂತರದಿಂದ ನಾಪತ್ತೆಯಾಗಿದ್ದಾಳೆ. ಬಾಲಕಿಯ ಪತ್ತೆಗಾಗಿ ಪೋಷಕರು ಮನವಿ ಮಾಡಿದ್ದಾರೆ. ಬಾಲಕಿಯ ಬಗ್ಗೆ ಮಾಹಿತಿ ದೊರೆತಲ್ಲಿ ಶಶಿ: 9972031021 ಅಥವಾ ಮಹದಿ: 9916595109 ಈ ಸಂಖ್ಯೆಗೆ ಕರೆಮಾಡುವಂತೆ ಮನವಿ ಮಾಡಿದ್ದಾರೆ.