ಶಸ್ತ್ರಚಿಕಿತ್ಸೆ ಇಲ್ಲದೆ ಪ್ರಾಣಾಯಾಮ ಮತ್ತು ಆಯುರ್ವೇದದಿಂದ ವೆರಿಕೋಸ್ ವೈನ್ಸ್ ಮುಕ್ತ ಸಮಾಜಕ್ಕೆ ಪಣತೊಟ್ಟಿರುವ ಡಾ. ಎಂ.ವಿ ಉರಾಳ್

‘ಆರೋಗ್ಯವೇ ಭಾಗ್ಯ’ ಎಂಬುದು ತಿಳಿದಿದ್ದರೂ, ಇಂದಿನ ವೇಗದ ಬದುಕಿನ ಶೈಲಿ ಮತ್ತು ದಿನಚರಿಯ ಕ್ರಮಗಳು ನಮ್ಮಆರೋಗ್ಯವನ್ನು ಸೂಕ್ಷ್ಮವಾಗಿಸಿವೆ. ಇಂದಿನ ದಿನ ಮನೆಯ ಕೆಲಸದಿಂದ ಹಿಡಿದು ಉದ್ಯೋಗದವರೆಗೂ ನಿಂತು ಮಾಡುವ ಕೆಲಸಗಳು ಅಥವಾ ಸುಧೀರ್ಘಕಾಲ ಕುಳಿತುಕೊಂಡು ಮಾಡುವ ಕೆಲಸಗಳೇ ಹೆಚ್ಚು. ಹೀಗೆ ಸತತ ನಿಲ್ಲುವಿಕೆಯು ಕೆಲವೊಮ್ಮೆ ಕಾಲಿನ ರಕ್ತನಾಳಗಳ ಉಬ್ಬುವಿಕೆಗೆ ಕಾರಣವಾಗುತ್ತದೆ. ಇದಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ “ವೆರಿಕೋಸ್ ವೈನ್ಸ್” ಎನ್ನುತ್ತಾರೆ. ಇದರಿಂದುಂಟಾಗುವ ನೋವು ಕ್ರಮೇಣ ಹೆಚ್ಚಾಗಿ, ಚರ್ಮಕಪ್ಪಾಗುವಿಕೆ ಮತ್ತು ತುರಿಕೆ ಗಾಯವಾಗಿ, ಶಸ್ತ್ರಚಿಕಿತ್ಸೆಯಿಂದ ಬೆರಳು ಅಥವಾ ಕಾಲುಗಳನ್ನು ಕತ್ತರಿಸುವ […]
ಕಾಂತಾರ ಕಂಡು ಮೆಚ್ಚಿದ ಕರಾವಳಿ ಬೆಡಗಿಯರು: ಅನುಷ್ಕಾ, ಶಿಲ್ಪಾ ಶೆಟ್ಟಿ ಯಿಂದ ರಿಷಭ್ ಗುಣಗಾನ

ಕರಾವಳಿಯ ಬೆಡಗಿಯರಾದ ಅನುಷ್ಕಾ ಶೆಟ್ಟಿ ಮತ್ತು ಶಿಲ್ಪಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ ಮತ್ತು ಸಂಪೂರ್ಣ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಮೂಲತಃ ಪುತ್ತೂರಿನ ಬೆಳ್ಳಿಪಾಡಿಯವರಾದ ಅನುಷ್ಕಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ಚಿತ್ರವನ್ನು ಸಂಪೂರ್ಣವಾಗಿ ಮೆಚ್ಚಿಕೊಂಡಿದ್ದೇನೆ. ರಿಷಭ್ ಮತ್ತು ಸಮಸ್ತ ಕಾಂತಾರ ತಂಡಕ್ಕೆ ಶುಭಾಶಯ ಎಂದಿದ್ದಾರೆ. ನಿಡ್ಡೋಡಿಯ ಮುದಲಾಡಿಯವರಾದ ಶಿಲ್ಪಾ ಶೆಟ್ಟಿ ಕೂಡಾ ಕಾಂತಾರ ಸಿನಿಮಾ ವೀಕ್ಷಿಸಿ, ಎಂತಹ ನಿರೂಪಣೆ, ಭಾವನೆ, ಕಂಪನ ಮತ್ತು ಜಗತ್ತು. ಕ್ಲೈಮ್ಯಾಕ್ಸ್ ಸಮಯದಲ್ಲಿ ಮೈರೋಮಾಂಚನಗೊಂಡಿತ್ತು. ಸಿನಿಮಾದ ಶಕ್ತಿಯು […]
ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಾಧೀಶರಾಗಿ ನ್ಯಾಯಮೂರ್ತಿ ಡಾ. ಡಿ.ವೈ ಚಂದ್ರಚೂಡ್ ನೇಮಕ

ನವದೆಹಲಿ: ಭಾರತದ ಸಂವಿಧಾನವು ನೀಡಿರುವ ಅಧಿಕಾರವನ್ನು ಚಲಾಯಿಸಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಡಾ. ಡಿ.ವೈ ಚಂದ್ರಚೂಡ್ ಅವರನ್ನು ನವೆಂಬರ್ 9, 2022 ರಿಂದ ಜಾರಿಗೆ ಬರುವಂತೆ ಭಾರತದ ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಿದ್ದಾರೆ. ನವೆಂಬರ್ 9 ರಂದು ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಔಪಚಾರಿಕ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆ: ಲಿಖಿತ್.ಬಿ.ವೈ ಗೆ ಕಂಚಿನ ಪದಕ

ಉಡುಪಿ:ಹಾಸನ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಮೂಡುಬಿದ್ರೆಯ ಕ್ರೀಯೆಟಿವ್ ಎಜುಕೇಷನ್ ಫೌಂಡೇಶನ್ ನ ಶೈಕ್ಷಣಿಕ ಸಹಭಾಗಿತ್ವದ ನಗರ ಹೊರ ವಲಯದ ಹೆಚ್.ಕೆ.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಲಿಖಿತ್.ಬಿ.ವೈ ಕಂಚಿನ ಪದಕ ಪಡೆಯುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ಸುರೇಶ್, ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.