ತಾಯಿ ಚಾಕೋಲೇಟ್ ಕದ್ದಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ ಮೂರು ವರ್ಷದ ಪೋರ: ವೀಡಿಯೋ ವೈರಲ್

ಭೋಪಾಲ್: ಮಧ್ಯಪ್ರದೇಶದ ಬುರ್ಹಾನ್‌ಪುರ್ ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕನೊಬ್ಬ ತನ್ನ ತಂದೆಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ ತನ್ನ ತಾಯಿ ವಿರುದ್ಧ ದೂರು ನೀಡಿರುವ ವೀಡಿಯೋ ವೈರಲ್ ಆಗಿದೆ. ಮಗು ತನ್ನ ತಾಯಿಯ ವಿರುದ್ಧ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಿಯಾಂಕಾ ನಾಯಕ್ ಅವರಿಗೆ ಭಾನುವಾರ ದೂರು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರಿಯಾಂಕಾ ನಾಯಕ್ ಕರ್ತವ್ಯದಲ್ಲಿರುವ ಬುರ್ಹಾನ್‌ಪುರ್ ಠಾಣೆಗೆ ಈ ಮಗು ಬಂದು ತಾಯಿ ಮೇಲೆ ದೂರು ನೀಡಬೇಕು ಎಂದಿದೆ. ಮಗುವಿನ ದೂರನ್ನು ಬರೆಯಲು ಪ್ರಿಯಾಂಕ ಕಾಗದ […]

ಕರಾವಳಿಗೆ ಮತ್ತೆ ಮರುಕಳಿಸಿದ ವರುಣ: ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಉಡುಪಿ/ಮಂಗಳೂರು: ವಾರಾಂತ್ಯದಲ್ಲಿ ದಕ್ಷಿಣ ಭಾರತದಲ್ಲಿ ಕಾಣಿಸಿಕೊಂಡ ವರುಣ ಕೃಪೆಯು ಈ ವಾರವೂ ಮುಂದುವರಿಯುವ ಸಾಧ್ಯತೆಯಿದೆ ಮತ್ತು ಈ ಆರ್ದ್ರ ಪರಿಸ್ಥಿತಿಗಳು ಕನಿಷ್ಠ ಶುಕ್ರವಾರದವರೆಗೆ ಉಳಿಯಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಗುರುವಾರ ಮತ್ತು ಶುಕ್ರವಾರದಂದು ದಕ್ಷಿಣ ಆಂತರಿಕ ಕರ್ನಾಟಕದಲ್ಲಿ 64.5 ಮಿಮೀ ನಿಂದ115.5 ಮಿಮೀ ವರೆಗೆ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 20 ಮತ್ತು 21 ರಂದು ಕರಾವಳಿ ಕರ್ನಾಟಕದಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ. […]

ನದಿಗೆಸೆದ ಪೂಜಾ ಸಾಮಾಗ್ರಿಗೆ ಕಾಳಿಂಗನ ‘ಸರ್ಪ’ಗಾವಲು!

ಸುಳ್ಯ: ಇಲ್ಲಿನ ನಾಲ್ಕೂರು ಗ್ರಾಮದ ಇಜಿನಡ್ಕದಲ್ಲೊಂದು ವಿಚಿತ್ರ ಘಟನೆ ಅ. 15 ರಂದು ವರದಿಯಾಗಿದೆ. ಗ್ರಾಮಸ್ಥರೊಬ್ಬರು ಮನೆಯ ಪೂಜಾ ಸಾಮಾಗ್ರಿಗಳನ್ನು ನದಿಗೆಸೆದಿದ್ದು, ಇದನ್ನು ಕಾಳಿಂಗ ಸರ್ಪವೊಂದು ಕಾವಲು ಕಾಯುತ್ತಿತ್ತು. ಪೂಜಾ ಸಾಮಾಗ್ರಿಗಳಲ್ಲಿ ಕಾಲುದೀಪ, ಆರತಿ, ಘಂಟೆ, ಹರಿವಾಣ ಮುಂತಾದ ಹಳೆಯ ಪೂಜಾ ಸಾಮಾಗ್ರಿಗಳನ್ನು ಇಜಿನಡ್ಕ ಎಂಬಲ್ಲಿ ನದಿಗೆ ಎಸೆದಿರುವುದನ್ನು ಸ್ಥಳೀಯರು ಗಮನಿಸಿದ್ದರು. ಇದೇ ವೇಳೆ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಅಲ್ಲೇ ಕಾವಲು ಕಾಯುತ್ತಿರುವ ರೀತಿಯಲ್ಲಿ ಇರುವುದನ್ನು ಕೂಡಾ ನೋಡಿದ್ದರು. ಸುದ್ದಿ ತಿಳಿದು ಹಲವಾರು ಜನರು ಸ್ಥಳಕ್ಕಾಗಮಿಸಿದ್ದರೂ, […]

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆಭಾ ಕಾರ್ಡ್ ನೋಂದಣಿ

ಉಡುಪಿ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ನಾರ್ತ್ ಶಾಲೆಯಲ್ಲಿ ಹಳೇ ವಿದ್ಯಾರ್ಥಿ ಮತ್ತು ಶಾಲಾಭಿವೃದ್ಧಿ ಸಮಿತಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ಜಂಟಿ ಆಶ್ರಯದಲ್ಲಿ ಆದಿತ್ಯವಾರದಂದು ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ಉಚಿತ ನೋಂದಣಿ ಹಾಗೂ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆಧಾರ್ ಜೋಡಣೆ ಕಾರ್ಯಕ್ರಮವನ್ನು ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತೆಂಕಪೇಟೆ ವಾರ್ಡ್ ನಗರಸಭಾ ಸದಸ್ಯೆ ಮಾನಸ ಪೈ, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶ್ರೀದೇವಿ, […]

ಸಮಾಜ ಸೇವಕ ಕೃಷ್ಣಮೂರ್ತಿ ದಂಪತಿಗಳಿಗೆ ಸನ್ಮಾನ

ಉಡುಪಿ: ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ದಿ ಸಂಘ ಗಂಗಾವತಿ, ಕೇಂದ್ರ ಕಛೇರಿ ವಿಜಯಪುರ, ಆಲ್ ಇಂಡಿಯಾ ಟೆಂಟ್ ಎಂಡ್ ಡೆಕೋರೇಷನ್ ವೆಲ್ ಫೇರ್ ಅಸೋಷಿಯನ್ ನವದೆಹಲಿ ಹಾಗೂ ಧ್ವನಿ ಬೆಳಕು ಸಂಯೋಜಕರ ಸಂಘಟನೆ ಉಡುಪಿ ಇದರ ಉಡುಪಿ ಜಿಲ್ಲಾ ದಶಮಾನೋತ್ಸವ ಉಡುಪಿ ವೈಭವ ಸಮಾರಂಭದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಮತ್ತು ಅಮೃತಾ ಕೃಷ್ಣಮೂರ್ತಿ ದಂಪತಿಗಳನ್ನು ಗೌರವಿಸಿದರು. ವೇದಿಕೆಯಲ್ಲಿ ರಾಜ್ಯಾಧ್ಯಕ್ಷ ಶಿವಕುಮಾರ್ ಹಿರೇಮಠ , […]