ಲೋಕಾಯುಕ್ತ ಕಾಯ್ದೆ: ಅಕ್ಟೋಬರ್ 17 ರಿಂದ ದೂರು ಸ್ವೀಕಾರ

ಉಡುಪಿ: ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ವಿಚಾರಣೆ ಬಯಸುವ ಜಿಲ್ಲೆಯ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬಹುದಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೂ ಗಂಭೀರವಲ್ಲದ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ದೃಷ್ಠಿಯಿಂದ ದೂರು ಅರ್ಜಿಗಳ ಪ್ರಪತ್ರಗಳನ್ನು ಅಕ್ಟೋಬರ್ 17 ರಂದು ಬೈಂದೂರು ಪ್ರವಾಸಿ ಮಂದಿರ, ಅ.18 ರಂದು ಕುಂದಾಪುರ ಪ್ರವಾಸಿ ಮಂದಿರ, ಅ.19 ರಂದು ಹೆಬ್ರಿ ಪ್ರವಾಸಿ ಮಂದಿರ, ಅ.20 ರಂದು ಕಾರ್ಕಳ ಪ್ರವಾಸಿ ಮಂದಿರ, ಅ.21 ರಂದು ಬ್ರಹ್ಮಾವರ ಚಾಂತಾರು ಗ್ರಾಮ ಪಂಚಾಯತ್ ಸಭಾಂಗಣ ಹಾಗೂ ಅ.25 […]

ಕರಾವಳಿ ವಲಯ ನಿರ್ವಹಣಾ ಯೋಜನಾ ನಕಾಶೆಗೆ ಕೇಂದ್ರದ ಅನುಮೋದನೆ

ಉಡುಪಿ: ಕರಾವಳಿ ನಿಯಂತ್ರಣ ವಲಯ ಅಧಿಸೂಚನೆಗೆ ಸಂಬಂಧಿಸಿದಂತೆ, ಕರಾವಳಿ ವಲಯ ನಿರ್ವಹಣಾ ಯೋಜನಾ ನಕಾಶೆಗೆ ಪ್ರಸ್ತುತ ಸಾಲಿನ ಸೆಪ್ಟಂಬರ್ 2 ರಂದು ಕೇಂದ್ರ ಸರ್ಕಾರದಿಂದ ಅನುಮೋದನೆಗೊಂಡಿದ್ದು, ಅನುಮೋದಿತ ದಿನಾಂಕದಿಂದ ಕರಾವಳಿ ನಿಯಂತ್ರಣ ವಲಯ 2019 ರ ಅಧಿಸೂಚನೆ ಜಾರಿಯಲ್ಲಿರುತ್ತದೆ ಎಂದು ಉಡುಪಿ ಪ್ರಾದೇಶಿಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.