ಲಿಯಾ ಕಾಸ್ಟಿಂಗ್ ಎನ್ ಚಿತಾರಾ ತಂಡದಿಂದ ಹಿರಿಯ ಕಲಾವಿದರಿಗೆ ಗೌರವ

ಉಡುಪಿ: ಕನ್ನಡ ಚಿತ್ರರಂಗದ 15 ಹಿರಿಯ ಕಲಾವಿದರನ್ನು ಲಿಯಾ ಕಾಸ್ಟಿಂಗ್ ಎನ್ ಚಿತಾರಾ ಟ್ರಸ್ಟ್ ವತಿಯಿಂದ ಗೌರವಿಸಲಾಗಿದ್ದು, ಕಲಾವಿದರಿಗೆ ಆರ್ಥಿಕವಾಗಿ ಸಹಾಯ ಮಾಡಲಾಗಿದೆ. ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕಲಾವಿದರನ್ನು ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಚಿತ್ರರಂಗದ ವಿವಿಧ ಚೇಂಬರ್ ಗಳ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಹ್ಯಾರಿ ಪಾಟರ್ ಹ್ಯಾಗ್ರಿಡ್ ಪಾತ್ರಧಾರಿ ರಾಬಿ ಕೋಲ್ಟ್ರೇನ್ ಇನ್ನಿಲ್ಲ

ಹ್ಯಾರಿ ಪಾಟರ್ ಚಲನಚಿತ್ರ ಸರಣಿಯಲ್ಲಿ ಹ್ಯಾಗ್ರಿಡ್ ಪಾತ್ರಕ್ಕೆ ಹೆಸರುವಾಸಿಯಾದ ರಾಬಿ ಕೋಲ್ಟ್ರೇನ್ ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ಐಟಿವಿ ಪತ್ತೇದಾರಿ ನಾಟಕ ಕ್ರ್ಯಾಕರ್ ಮತ್ತು ಜೇಮ್ಸ್ ಬಾಂಡ್ ಚಲನಚಿತ್ರಗಳಾದ ಗೋಲ್ಡನ್ ಐ ಮತ್ತು ದಿ ವರ್ಲ್ಡ್ ಈಸ್ ನಾಟ್ ಎನಫ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ರಾಬಿ ಅವರ ಏಜೆಂಟ್ ಬೆಲಿಂಡಾ ರೈಟ್ ಸ್ಕಾಟ್ಲೆಂಡ್‌ನ ಫಾಲ್ಕಿರ್ಕ್ ಬಳಿಯ ಆಸ್ಪತ್ರೆಯಲ್ಲಿ ನಟ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ರಾಬಿ ಒಂದು “ಅನನ್ಯ ಪ್ರತಿಭೆ” ಎಂದು ವಿವರಿಸಿದ ಅವರು, ಹ್ಯಾಗ್ರಿಡ್ ಪಾತ್ರದ ಮೂಲಕ […]

ಮುಂಬಯಿ ವಾಪಸಿಗರ ಸಮ್ಮಿಲನ: ಕವನ ಮತ್ತು ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟ

ಅಜೆಕಾರು: ಅಕ್ಟೋಬರ್ 16 ರಂದು ಅಂಬಲಪಾಡಿಯಲ್ಲಿ ನಡೆಯುವ ಮುಂಬಯಿ ವಾಪಸಿಗರ ಸಮ್ಮೇಳನಕ್ಕಾಗಿ ಏರ್ಪಡಿಸಲಾಗಿದ್ದ ಕವನ ಮತ್ತು ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕವನ ವಿಭಾಗದಲ್ಲಿ 63 ಜನ ಭಾಗವಹಿಸಿದ್ದು 30 ಮಂದಿ ಅಂತಿಮ ಸ್ಪರ್ಧೆಯಲ್ಲಿದ್ದರು. ಕವನ ಸ್ಪರ್ಧೆಯ ಫಲಿತಾಂಶ: ಪ್ರಥಮ: ಅನಿತಾ ಶೆಟ್ಟಿ – ಕವನ:ಮಾಯಾನಗರಿ, ದ್ವಿತೀಯ: ಸುಶೀಲಾ ರಾವ್‌ ಕೊಡವೂರು- ಕವನ: ವೃದ್ಧಾಶ್ರಮದ ಬದುಕು, ತೃತೀಯ: ಬಾಲಕೃಷ್ಣ ಹೆಗ್ಡೆ ಅಜೆಕಾರು ಕವನ: ಬಸಳೆ ಹಾಡು. ವಿಶೇಷ ಬಹುಮಾನ: ಜಗದೀಶ್ ಬಾರಿಕೆ, ಸುಲೋಚನಾ ಪಚ್ಚಿನಡ್ಕ, ತುಳಸಿ ಕೈರಂಗಳ, ಕರುಣಾ […]

ಮಂದಾರ್ತಿ: ಶ್ರೀ ಕುಲಮಾಹಾಸ್ತ್ರೀ ಮೀನುಗಾರರ ಸಹಕಾರಿ ಸಂಘದ ನೂತನ ಕಚೇರಿ ಉದ್ಘಾಟನೆ

ಮಂದಾರ್ತಿ: ಶ್ರೀ ಕುಲಮಾಹಾಸ್ತ್ರೀ ಮೀನುಗಾರರ ವಿ. ಪ್ರಾ. ಸ. ಸಂಘವು ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದ್ದು, ಮೀನುಗಾರರ ಸಹಕಾರಿ ಸಂಘವು ಮಾದರಿ ಆರ್ಥಿಕ ಸಂಸ್ಥೆಯಾಗಿ ಹೊರಹೊಮ್ಮಲಿ ಎಂದು ನಾಡೋಜ ಡಾ.ಜಿ.ಶಂಕರ್ ಹೇಳಿದರು. ಅವರು ಶುಕ್ರವಾರ ಮಂದಾರ್ತಿ ಶ್ರೀ ಕುಲಮಾಹಾಸ್ತ್ರೀ ಮೀನುಗಾರರ ವಿವಿಧೋದ್ದೇಶ ಪ್ರಾಥಮಿಕ ಸಹಕಾರಿ ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಸಂಘದ ಭದ್ರತಾ ಕೊಠಡಿಯನ್ನು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಧನಂಜಯ ಶೆಟ್ಟಿ ಹಾಗೂ ಕಂಪ್ಯೂಟರ್ ಅನ್ನು ‌ ಉದ್ಯಮಿ ಗಣೇಶ್ ಪ್ರಸಾದ್‌ ಕಾಂಚನ್ […]

ರಾಜ್ಯ ಸರ್ಕಾರ ಶೀಘ್ರದಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು: ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ: ಕೇಂದ್ರ ಸರ್ಕಾರ ಕಳೆದ ಬಾರಿ ಎಂಒ ಭತ್ತ ಖರೀದಿಗೆ ಅನುಮತಿ ನೀಡುವಾಗ ತಡವಾದ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಕುಚ್ಚಲಕ್ಕಿ ಲಭ್ಯವಾಗಿಲ್ಲ. ಆದರೆ, ಈ ಬಾರಿ ಕಟಾವಿಗೆ ಪೂರ್ವದಲ್ಲೇ ಅನುಮತಿ ಲಭಿಸಿದ್ದು, ರಾಜ್ಯ ಸರ್ಕಾರ ಶೀಘ್ರದಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆದಾಗ ಕರಾವಳಿ ಭಾಗದ ಜನರಿಗೆ ಪಡಿತರದಲ್ಲಿ ಕುಚ್ಚಲಕ್ಕಿ ನೀಡಲು ಸಾಧ್ಯವಾಗುತ್ತದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ, ಲಘು ಉದ್ಯೋಗ ಭಾರತಿ ಮತ್ತು ಐಎಂಎಸ್ […]