ಅಂಬಲಪಾಡಿ: ಅಕ್ಟೋಬರ್ 16 ರಂದು ಪ್ರಪ್ರಥಮ ಮುಂಬಯಿ ವಾಪಸಿಗರ ಸಮ್ಮಿಲನ ಕಾರ್ಯಕ್ರಮ

ಉಡುಪಿ: ಶ್ರೀ ಅಂಬಲಪಾಡಿ ದೇವಾಲಯದ ಆಶ್ರಯದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ನೇತೃತ್ವದಲ್ಲಿ ಕನ್ನಡ ಸೇವಾ ಸಂಘ ಪೊವಾಯಿ ಇದರ ಬೆಳ್ಳಿ ಹಬ್ಬ ಮತ್ತು ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಗೌರವಾರ್ಥ ಪ್ರಪ್ರಥಮ ಮುಂಬಯಿ ವಾಪಸಿಗರ ಸಮ್ಮಿಲನ ಕಾರ್ಯಕ್ರಮವು ಅಕ್ಟೋಬರ್ 16 ಭಾನುವಾರದಂದು ಬೆಳಗ್ಗೆ 9.30 ರಿಂದ ಸಂಜೆ 6 ರವರೆಗೆ ಉಡುಪಿಯ ಮಹಾಕಾಳಿ ಮತ್ತು ಜನಾರ್ಧನ ದೇವಾಲಯದ ಭವಾನಿ ಮಂಟಪದಲ್ಲಿ ನಡೆಯಲಿದ್ದು, ದೇವಸ್ಥಾನದ ಆಡಳಿತ ಮೊಕೇಸರ ಡಾ.ನಿ.ಬಿ.ವಿಜಯ್ ಬಳ್ಳಾಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರಾಗಿ […]

ಜಿಲ್ಲಾ ಬಿಜೆಪಿ ವತಿಯಿಂದ ಅ.22ರಂದು ಪ.ಜಾತಿ, ಪ.ಪಂಗಡದ ಬೃಹತ್ ಸಮಾವೇಶ

ಉಡುಪಿ: ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಶೋಷಿತರು, ದಲಿತರು ಹಾಗೂ ಬಡವರ ಕಲ್ಯಾಣದತ್ತ ಚಿತ್ತ ಹರಿಸಿ, ಪರಿಶಿಷ್ಟ ಜಾತಿ ಮೀಸಲಾತಿಯನ್ನು 15% ದಿಂದ 17%ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 3% ದಿಂದ 7%ಕ್ಕೆ ಏರಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಐತಿಹಾಸಿಕ ನಿರ್ಧಾರವನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಸ್.ಸಿ. ಮತ್ತು ಎಸ್.ಟಿ.‌ ಸಮುದಾಯದ ಮುಖಂಡರು ಅ.17 ರಂದು ಬೃಹತ್ ಸಂಖ್ಯೆಯಲ್ಲಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಅಭಿನಂದಿಸಲಿದ್ದಾರೆ […]

ಸಮೃದ್ದ ಕುಟುಂಬದ ಮಳಿಗೆ ಮೋರ್ ಫ್ಯಾಶನ್ ನಲ್ಲಿ ದೀಪಾವಳಿ ವಿಶೇಷ ಆಫರ್: ಖರೀದಿಯ ಮೇಲೆ ಉಚಿತ ಕೊಡುಗೆಗಳು

ಉಡುಪಿ: ಹೋಟೇಲ್ ಉಡುಪಿ ರೆಸಿಡೆನ್ಸಿ ಹತ್ತಿರ ರೋಹಿಣಿ ಪಾಂಡುರಂಗ ಆರ್ಕೇಡ್ ನಲ್ಲಿರುವ ಮೋರ್ ಫ್ಯಾಶನ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಆಫರ್ ಲಭ್ಯವಿದೆ. ನವ ನವೀನ ಮಾದರಿಯ ಟಾಪ್, ಕಾಟನ್, ರೆಯಾನ್, ಫ್ಯಾನ್ಸಿ ಕುರ್ತಾ, ಲೇಡೀಸ್ ಜೀನ್ಸ್, ಪಲಾಝೋ, ಪಟಿಯಾಲ, ಹೆರಾನ್ ಪ್ಯಾಂಟ್, ಡ್ರೆಸ್ ಮಟೀರಿಯಲ್, ಸೀರೆಗಳು, ಪುರುಷರ ಮತ್ತು ಮಕ್ಕಳ ಆಕರ್ಷಕ ಉಡುಗೆಗಳ ಹೊಚ್ಚ ಹೊಸ ಸ್ಟಾಕ್ ಲಭ್ಯವಿದೆ. 2,500 ರೂ ಗಿಂತ ಹೆಚ್ಚಿನ ಖರೀದಿಗೆ ತವಾ ಅಥವಾ ಹಾಟ್ ಕೇಸ್, 5000 ರೂ […]