ಈಸಿ ಲೈಫ್ ನಲ್ಲಿ ಅಡಕೆ ಕೊಯ್ಯುವ ಮತ್ತು ಔಷಧಿ ಸಿಂಪಡಿಸುವ ಕಾರ್ಬನ್ ಫೈಬರ್ ದೋಟಿ ಲಭ್ಯ

ಅಡಿಕೆ, ತೆಂಗು ಕೊಯ್ಯಲು ಹಾಗೂ ಔಷಧಿ ಸಿಂಪಡಿಸಲು ಸುಧೀರ್ಘ ಬಾಳಿಕೆಯ ಕಾರ್ಬನ್ ಫೈಬರ್ ದೋಟಿ ಈಸಿ ಲೈಫ್ ನಲ್ಲಿ ಲಭ್ಯವಿದೆ. ಅಡಿಕೆ ಸುಲಿಯುವ ಯಂತ್ರ: • ಅತೀ ಕಡಿಮೆ ಹಾನಿಯೊಂದಿಗೆ 97%-98% ಸುಲಿದ ಅಡಿಕೆ ದೊರೆಯುತ್ತದೆ. • ಚಾಲನಾ ಸಮಯದಲ್ಲಿ ಕಡಿಮೆ ಧೂಳು ಹಾಗೂ ಕಡಿಮೆ ಶಬ್ಧ. ಮೋಟೋಕಾರ್ಟ್ 125: • ಏರು-ತಗ್ಗು ಹಾಗೂ ಕಿರಿದಾದ ಜಾಗಗಳಲ್ಲಿ ಸರಾಗವಾಗಿ ಚಲಿಸುತ್ತದೆ. ಮೋಟೋಕಾರ್ಟ್ 350: • ರಿವರ್ಸ್ ಗೇರ್ ಹೊಂದಿದ್ದು, ಏರು-ತಗ್ಗು ಹಾಗೂ ಕಿರಿದಾದ ಜಾಗಗಳಲ್ಲಿ ಸರಾಗವಾಗಿ ಚಲಿಸುತ್ತದೆ. […]

ಕಾಂತಾರದ ಮೈನವಿರೇಳಿಸುವ ಹಿನ್ನೆಲೆ ಸಂಗೀತದ ಮಾಂತ್ರಿಕ ಬಿ. ಅಜನೀಶ್ ಲೋಕನಾಥ್: ಕಾಂತಾರ ಯಶಸ್ಸಿನ ಹಿಂದೆ ಜನಪದ ಸಂಗೀತದ ಛಾಪು

ತುಳುನಾಡಿನ ನಂಬಿಕೆ ಮತ್ತು ಆಚರಣೆಗಳನ್ನು ಅತ್ಯಮೋಘವಾಗಿ ಬಿಂಬಿಸಿರುವ ಕಾಂತಾರ ಚಿತ್ರದ ಯಶಸ್ಸಿನ ಹಿಂದೆ ಅದರ ಸಂಗೀತ ಮತ್ತು ಹಿನ್ನೆಲೆ ಸಂಗೀತವೂ ಕೆಲಸ ಮಾಡಿದೆ. ಚಿತ್ರದ ಮನಮೋಹಕ ಹಾಡುಗಳಾಗಿರಲಿ, ಜನ ಕೈ ಮುಗಿಯುತ್ತಿರುವ, ಅಥವಾ ಮೈಮೇಲೆ ಆವೇಶ ಬಂದಂದಾಡುತ್ತಿರುವ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ದೈವಾರಾಧನೆಯ ಹಿನ್ನೆಲೆ ಸಂಗೀತವೆ ಇರಲಿ ಇದರ ಸಂಪೂರ್ಣ ಶ್ರೇಯ ಕನ್ನಡದ ಸಂಗೀತ ಮಾಂತ್ರಿಕ ಬಿ.ಅಜನೀಶ್ ಲೋಕನಾಥ್ ಅವರಿಗೆ ಸಲ್ಲಬೇಕು. ಕರಾವಳಿಯ ದೈವಾರಾಧನೆಯ, ಭೂತ-ಕೋಲದ ಸಂಸ್ಕೃತಿಯನ್ನು ಹತ್ತಿರದಿಂದ ಕಂಡವರಿಗೆ, ಬಾಲ್ಯದಿಂದಲೂ ಇದನ್ನು ಅನುಭವಿಸಿದವರಿಗೆ ಈ ಹಿನ್ನೆಲೆ […]

ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಅಮೋಘ ಪ್ರದರ್ಶನ: ವಿವಿಧ ಕ್ರೀಡೆಗಳಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಪ್ರತಿ ಹೆಜ್ಜೆಯಲ್ಲೂ ಹೊಸತನ ಸಾಧಿಸುವುದರ ಮೂಲಕ ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಅವಕಾಶ ಕಲ್ಪಿಸಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸಿನ ಪಯಣದಲ್ಲಿ ಸಾಗಿ ಮುನ್ನೆಡೆಯಬೇಕು ಎನ್ನುವ ಸದುದ್ದೇಶವನ್ನು ಹೊಂದಿರುವ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜು ಶೈಕ್ಷಣಿಕ ಸಾಧನೆಯ ಶಿಖರವನ್ನು ಏರುವುದರ ಜೊತೆಗೆ ಇದೀಗ ಕ್ರೀಡಾಕ್ಷೇತ್ರದಲ್ಲಿಯೂ ಅದ್ಭುತ ಸಾಧನೆಗೈದಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯು ಆಯೋಜಿಸಿದ್ದ ರಾಜ್ಯ ಮಟ್ಟದ ಪಂದ್ಯಾಟಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಪ್ರಜ್ವಲ್( ಕರಾಟೆ ), ಮನೀಶ್, ಪ್ರಖ್ಯಾತ್ (ಟೆನ್ನಿಕ್ವಾಯಿಟ್ ), ಶ್ರವಣ್ ( ಫುಟ್ಬಾಲ್ ), […]

ಕುಂದಾಪುರ: ವಿಶ್ವ ಪ್ರಕೃತಿ ವಿಕೋಪ ನಿಯಂತ್ರಣ ದಿನಾಚರಣೆ

ಕುಂದಾಪುರ: ಇತ್ತೀಚಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪಗಳು ಜಾಸ್ತಿಯಾಗುತ್ತಿದ್ದು, ಮನುಷ್ಯ ಮತ್ತು ಪ್ರಕೃತಿಯ ಒಡನಾಟದಲ್ಲಿ ಸಾಮರಸ್ಯ ತಪ್ಪಿರುವುದೇ ಇದಕ್ಕೆ ಕಾರಣ. ಅತಿವೃಷ್ಟಿ, ನೆರೆ ಹಾವಳಿ, ಭೂ ಕುಸಿತ, ಮೇಘ ಸ್ಪೋಟ ಇತ್ಯಾದಿಗಳು ಒಂದಿಲ್ಲೊಂಡೆದೆ ದಿನನಿತ್ಯ ಎಂಬಂತಾಗಿದೆ. ಪ್ರಾಕೃತಿಕ ವಿಕೋಪಗಳನ್ನು ತಡೆಯುವುದು ಅಸಾಧ್ಯವಾದರೂ, ಅವುಗಳ ಬಗ್ಗೆ ಅರಿವು ಹೊಂದಿದ್ದರೆ, ಜೀವ ಮತ್ತು ಆಸ್ತಿ ಹಾನಿಯನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ವಿವಿಧ ಇಲಾಖೆಗಳಿದ್ದರೂ, ಸಾರ್ವಜನಿಕರು ಕೈ ಜೋಡಿಸದೆ ವಿಪತ್ತು ತಪ್ಪಿಸಲು ಅಸಾಧ್ಯ. ಆದರೆ, ಉಡುಪಿ ಜಿಲ್ಲೆಯಲ್ಲಿ ಇಂತಹ ಎಲ್ಲ ವಿಷಮ ಪರಿಸ್ಥಿತಿಗಳಲ್ಲೂ […]

ಸಾಲಿಗ್ರಾಮ: ಅ. 15 ರಂದು ಕಾರಂತರ ಸಂಸ್ಮರಣೆ ಹಾಗೂ ಕಾರಂತ ಪುರಸ್ಕಾರ ಸಮಾರಂಭ

ಸಾಲಿಗ್ರಾಮ: ಗೆಳೆಯರ ಬಳಗದ ವತಿಯಿಂದ ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ ಅಂಗವಾಗಿ ಅ.15 ರಂದು ಸಂಜೆ 6 ಗಂಟೆಗೆ ಕಾರ್ಕಡದ ಗಿರಿಜಾ ಕಲ್ಯಾಣ ಮಂತಪದಲ್ಲಿ ಕಾರಂತರ ಸಂಸ್ಮರಣೆ ಹಾಗೂ ಕಾರಂತ ಪುರಸ್ಕಾರ ಸಮಾರಂಭ ಜರುಗಲಿದ್ದು, ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಇವರು ವಹಿಸಿಕೊಳ್ಳಲಿದ್ದಾರೆ. ಹಿರಿಯ ಪತ್ರಕರ್ತ ಮೊಗೇರಿ ಜಯರಾಮ ಅಡಿಗ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಡಿ. ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತ ಡಾ. […]