ಕಾಪು: ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಚಂಡಿಕಾಯಾಗ
ಕಾಪು: ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಪ್ರಯುಕ್ತ ವರ್ಷಂಪ್ರತಿ ಜರಗುವ ಚಂಡಿಕಾ ಮಹಾಯಾಗ, ಪೂರ್ಣಾಹುತಿ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಮಂಗಳವಾರದಂದು ನಡೆಯಿತು. ಆ ಪ್ರಯುಕ್ತ ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೆ, ಮಧ್ಯಾಹ್ನ 11:30ಕ್ಕೆ ಚಂಡಿಕಾಯಾಗ ಮಹಾ ಪೂರ್ಣಾಹುತಿ, ಪಲ್ಲಪೂಜೆ ಹಾಗೂ ಅನ್ನ ಸಂತರ್ಪಣೆ, 3:00 ಗಂಟೆಗೆ ಶ್ರೀ ಮಾರಿಯಮ್ಮ ದೇವಿಗೆ ಪ್ರಸನ್ನ ಪೂಜೆ, ಮೈ ದರ್ಶನ ಸೇವೆ, ಅಭಯ ಪ್ರಸಾದ ವಿತರಣೆ ನಡೆಯಿತು.
ಕಾರ್ಕಳ: ಖಿನ್ನನಾದ ವ್ಯಕ್ತಿ ನೇಣಿಗೆ ಶರಣು
ಕಾರ್ಕಳ: ಇಲ್ಲಿನ ಕೌಡೂರು ಗ್ರಾಮದ ತಡ್ಪೆತೋಟದ ಪ್ರದೀಪ್ ಪೂಜಾರಿ(37) ಎನ್ನುವ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈ-ಪೂನಾದಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಪ್ರದೀಪ್ , ಕಳೆದ ವರ್ಷ ಊರಿಗೆ ಹಿಂತಿರುಗಿ ತಮ್ಮ ಅಣ್ಣ ಉಮೇಶ್ ಪೂಜಾರಿಯವರೊಂದಿಗೆ ವಾಸವಾಗಿದ್ದರು. ಕೊರೋನಾ ಸಮಯದಲ್ಲಿ ಚುಚ್ಚುಮದ್ದು ತೆಗೆದುಕೊಂಡ ಬಳಿಕ ಎಡಕೈನಲ್ಲಿ ನೋವು ಶುರುವಾಗಿದ್ದು ಪ್ರದೀಪ್ ಗೆ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಈ ಕಾರಣಕ್ಕೆ ಮನನೊಂದು ಸೋಮವಾರದಂದು ಮನೆಯ ಪಕ್ಕದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ […]
ಜಸ್ಟಿಸ್ ಡಿವೈ ಚಂದ್ರಚೂಡ್ ಸುಪ್ರೀಂಕೋರ್ಟಿನ ಮುಂದಿನ ಮುಖ್ಯನ್ಯಾಯಮೂರ್ತಿ
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದಾರೆ. ಅವರು ಮಂಗಳವಾರ ಬೆಳಗ್ಗೆ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಪತ್ರವನ್ನು ಹಸ್ತಾಂತರಿಸಿ, ಅವರನ್ನು ಮುಂದಿನ ಸಿಜೆಐ ಎಂದು ಗೊತ್ತುಪಡಿಸಿದರು. ಸುಪ್ರೀಂ ಕೋರ್ಟ್ನ ಇತರ ನ್ಯಾಯಾಧೀಶರ ಸಮ್ಮುಖದಲ್ಲಿ ಪತ್ರವನ್ನು ಹಸ್ತಾಂತರಿಸಲಾಯಿತು. ನ್ಯಾಯಮೂರ್ತಿ ಲಲಿತ್ ಅವರು ಈ ವಿಷಯದ ಬಗ್ಗೆ ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರ ಬರೆಯಲಿದ್ದಾರೆ. ನವೆಂಬರ್ 8 ರಂದು ನಿವೃತ್ತಿಯಾಗಲಿರುವ ಅವರು ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸುವಂತೆ ಕೇಂದ್ರ […]
ಬಿಸಿಸಿಐ ಅಧಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ಹೆಸರು ಪ್ರಸ್ತಾಪ: ಸೌರವ್ ಗಂಗೂಲಿ ಐಸಿಸಿಯತ್ತ ಪಯಣ?
ಭಾರತದ ಮಾಜಿ ಆಲ್ರೌಂಡರ್ ಮತ್ತು 1983 ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿರುವ ರೋಜರ್ ಬಿನ್ನಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷ ಹುದ್ದೆಗೆ ಅಗ್ರ ಸ್ಪರ್ಧಿಯಾಗಿದ್ದಾರೆ ಎಂದು ವರದಿಯಾಗಿದೆ. 67 ವರ್ಷದ ಮಾಜಿ ಆಲ್ರೌಂಡರ್ ಬಿಸಿಸಿಐ ಮುಖ್ಯಸ್ಥರಾಗಲಿದ್ದಾರೆ ಮತ್ತು ಜೈ ಶಾ ಅವರು ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿ ಮುಂದುವರಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರತಿನಿಧಿಯಾಗಿ ಅಕ್ಟೋಬರ್ 18 ರಂದು ನಡೆಯಲಿರುವ ಚುನಾವಣೆಗಾಗಿ ಬಿಸಿಸಿಐನ ಕರಡು ಮತದಾರರ ಪಟ್ಟಿಯಲ್ಲಿ ಬಿನ್ನಿ […]
ಕಾರ್ಕಳ: ಅಕ್ಟೋಬರ್ 15 ರಂದು ಮೆಸ್ಕಾಂ ಫೋನ್-ಇನ್ ಕಾರ್ಯಕ್ರಮ
ಕಾರ್ಕಳ: ಮೆಸ್ಕಾಂ ಇಲಾಖೆಯ ವತಿಯಿಂದ ಕಾರ್ಕಳ ಮತ್ತು ಹೆಬ್ರಿ ತಾಲೂಕು ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಅನುಕೂಲಕ್ಕಾಗಿ ಅಕ್ಟೋಬರ್ 15 ರಂದು ಮಧ್ಯಾಹ್ನ 3.30 ರಿಂದ 4.30 ರವರೆಗೆ ಮೆಸ್ಕಾಂ ಫೋನ್-ಇನ್ ಕಾರ್ಯಕ್ರಮವನ್ನು ಕಾರ್ಕಳ ವಿಭಾಗ ಕಚೇರಿಯಲ್ಲಿ ಆಯೋಜಿಸಲಾಗಿದೆ. ಗ್ರಾಹಕರು ದೂರವಾಣಿ ಸಂಖ್ಯೆ : 8277882642, 8277882896, 8277882644, 9480833011, 08258-200488 ಅನ್ನು ಸಂಪರ್ಕಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.