ಕುಸ್ತಿ ಪಂದ್ಯಾಟ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಹೆಮ್ಮಾಡಿ: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಭಂಡಾರ್‌ಕಾರ್ಸ್ ಪದವಿಪೂರ್ವ ಕಾಲೇಜು ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 61 ಕೆ.ಜಿ ವಿಭಾಗದಲ್ಲಿ ನಿಶ್ಚಲ್ ಫಿಲಿಪ್ ಬೆಳ್ಳಿ ಪದಕ, 65 ಕೆ.ಜಿ ವಿಭಾಗದಲ್ಲಿ ಕ್ರಮವಾಗಿ ಅನುಲ್ ಚಿನ್ನದ ಪದಕ ಹಾಗೂ ಡೆನ್ಜಿಲ್ ಡಯಸ್ ಬೆಳ್ಳಿಯ ಪದಕ, 70ಕೆ.ಜಿ ಮೇಲ್ಪಟ್ಟ ವಿಭಾಗದಲ್ಲಿ ಸೂರಜ್ ಡಯಾಸ್ ಕಂಚಿನ ಪದಕ, 79 ಕೆ.ಜಿ.ವಿಭಾಗದಲ್ಲಿ ಶ್ರೀನಿಧಿ ಶೆಟ್ಟಿ ಚಿನ್ನದ […]
ಹೆಮ್ಮಾಡಿ: ಶ್ರೀ ವಿ.ವಿ.ವಿ ಮಂಡಳಿ ಇದರ ಪದನಿಮಿತ್ತ ನಾಮನಿರ್ದೇಶಕರಾಗಿ ಗಣೇಶ ಮೊಗವೀರ ಆಯ್ಕೆ

ಹೆಮ್ಮಾಡಿ: ಶ್ರೀ ವಿ.ವಿ.ವಿ ಮಂಡಳಿ ಹೆಮ್ಮಾಡಿ ಇದರ ಸಾಮಾನ್ಯ ಸಭೆಯಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ ಮೊಗವೀರರವರನ್ನು ಪದನಿಮಿತ್ತ ನಾಮ ನಿರ್ದೇಶಕರನ್ನಾಗಿ ಆಯ್ಕೆ ಮಾಡಿ ಶ್ರೀ ವಿ.ವಿ.ವಿ.ಮಂಡಳಿಗೆ ಸೇರ್ಪಡೆಗೊಳಿಸಲಾಯಿತು. ಗಣೇಶ ಮೊಗವೀರ್ ಇವರು ಸಮರ್ಪಣಾ ಎಜುಕೇಶನ್ ಟ್ರಸ್ಟ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹಾಗೂ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂದು ಸಿಸ್ ಟೆಕ್ ಕಂಪ್ಯೂಟರ್ ಸ್ಥಳಾಂತರಿತ ಶಾಖೆ ಉದ್ಘಾಟನೆ

ಹಿರಿಯಡಕ: ಕಳೆದ 12 ವರ್ಷಗಳಿಂದ ಹಿರಿಯಡಕದಲ್ಲಿ ಎಲ್ಲಾ ತರದ ಆನ್ಲೈನ್ ಸೇವೆಯನ್ನು ಡಿಜಿಟಲ್ ಸೇವಾ ಕೇಂದ್ರ ಎಸ್.ವೈ.ಎಸ್-ಟೆಕ್ ಕಂಪ್ಯೂ ಟರ್ಸ್ ಎಂಬ ಸಂಸ್ಥೆಯ ಮೂಲಕ ನೀಡುತ್ತಾ ಬಂದಿದ್ದೇವೆ. ಗ್ರಾಹಕರ ಅನುಕೂಲಕ್ಕಾಗಿ ಕಚೇರಿಯು ಧನ್ಯಲಕ್ಷ್ಮಿ ಕಾಂಪ್ಲೆಕ್ಸ್ ನ ನೆಲ ಅಂತಸ್ತಿಗೆ ಇಂದು ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ. ಆದುದರಿಂದ ತಾವೆಲ್ಲರೂ ಈ ಒಂದು ಕಾರ್ಯದಲ್ಲಿ ಭಾಗವಹಿಸಿ ಈ ಹಿಂದಿನಂತೆ ನಿರಂತರ ಪ್ರೋತ್ಸಾಹ ನೀಡಿ ಶುಭ ಹಾರೈಸಬೇಕಾಗಿ ಸಂಸ್ಥೆಯ ಮಾಲಕ ರವಿ ಎಸ್ ಹಿರಿಯಡ್ಕ ತಿಳಿಸಿದ್ದಾರೆ.