ಜ್ಞಾನಸುಧಾ ವಿದ್ಯಾರ್ಥಿನಿ ಅರುಂಧತಿ.ಜಿ.ವಿ ರಾಜ್ಯ ಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆ

ಕಾರ್ಕಳ : ಜ್ಞಾನಸುಧಾ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಕು.ಅರುಂಧತಿ.ಜಿ.ವಿ ಇವರು ಶ್ರೀಮೂಕಾಂಬಿಕ ದೇವಳ ಸ್ವತಂತ್ರ ಪ.ಪೂ.ಕಾಲೇಜು ಕೊಲ್ಲೂರು ಇಲ್ಲಿ ನಡೆದ ಪದವಿ ಪೂರ್ವ ವಿಭಾಗದ ಉಡುಪಿ ಜಿಲ್ಲಾ ಮಟ್ಟದ ಚೆಸ್‌ ಪಂದ್ಯಾಟದಲ್ಲಿ 5ನೇ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಗಣೇಶ್‌ ವಿ.ಜಿ ಮತ್ತು ಶ್ರೀಮತಿ ವೀಣಾ ದಂಪತಿಗಳ ಪುತ್ರಿ. ರಾಜ್ಯಮಟ್ಟದ ಚೆಸ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ಸಾಧಕ ವಿದ್ಯಾರ್ಥಿಗೆ ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ.ಸುಧಾಕರ್‌ ಶೆಟ್ಟಿ ಅಭಿನಂದಿಸಿದ್ದು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಶುಭಹಾರೈಸಿದ್ದಾರೆ.

ಉಡುಪಿ: ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿಗಳ ವೇತನ ಪಾವತಿಗೆ ರೂ.368.70 ಲಕ್ಷ ಬಿಡುಗಡೆ

ಉಡುಪಿ: ಇಲ್ಲಿನ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳ ಬಾಕಿ ಇರುವ ವೇತನವನ್ನು ಪಾವತಿಸಲು ಶಾಸಕ ಕೆ ರಘುಪತಿ ಭಟ್ ಮಾಡಿರುವ ಮನವಿಯಂತೆ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳ ಬಾಕಿ ಇರುವ ವೇತನವನ್ನು ಪಾವತಿಸಲು ರೂ. 228.33 ಲಕ್ಷಗಳು ಹಾಗೂ ಇತರ ಬಾಕಿ ಇರುವ ಸಾದಿಲ್ವಾರು ವೆಚ್ಚ ರೂ. 140.37 ಲಕ್ಷಗಳು ಸೇರಿದಂತೆ ಒಟ್ಟು ರೂ. 368.70 ಲಕ್ಷ ರೂ ಗಳನ್ನು ಭರಿಸಲು ರಾಜ್ಯ […]

ಪ್ರಪ್ರಥಮ ಉಚ್ಚಿಲ ದಸರಾದಲ್ಲಿ ಏಕಕಾಲದಲ್ಲಿ ನವದುರ್ಗೆಯರಿಗೆ ಆರತಿ: ಕಾಪು ಕಡಲತೀರದಲ್ಲಿ ಕಣ್ಮನ ಸೆಳೆಯುವ ನೋಟ

ಕಾಪು: ಇದೇ ಮೊದಲ ಬಾರಿಗೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನವದುರ್ಗಾ ಸಹಿತ ಶಾರದಾ ಮಾತೆಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ನವರಾತ್ರಿಯ ಅಂತಿಮ ದಿನವಾದ ವಿಜಯದಶಮಿಯಂದು ದೇವಿಯರ ವಿಸರ್ಜನಾ ಕಾರ್ಯಕ್ರಮವು ಕಾಪು ಕಡಲ ತೀರದಲ್ಲಿ ಜರುಗಿತು. ದೇವಿಯರ ಜಲಸ್ತಂಭನದ ವೇಳೆಯಲ್ಲಿ ಜಿಲ್ಲೆಯು ಅಭೂತಪೂರ್ವ ದೃಶ್ಯವೊಂದಕ್ಕೆ ಸಾಕ್ಷಿಯಾಯಿತು. ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಸಲಾಗುವ ಗಂಗಾ ಆರತಿ ಮಾದರಿಯಲ್ಲಿ ಶಾರದಾ ಮಾತೆ ಸಹಿತ ನವದುರ್ಗೆಯರಿಗೆ ಏಕಕಾಲದಲ್ಲಿ ಆರತಿ ಬೆಳಗುವ ಮೂಲಕ ಹೊಸ ಇತಿಹಾಸವೊಂದನ್ನು ಕರಾವಳಿಯ ಕಡಲ ಕಿನಾರೆಯಲ್ಲಿ ಸೃಷ್ಠಿಸಲಾಯಿತು. ದೇವಿಯರ ವೈಭವದ […]