ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಮಲ್ಪೆ ಸೈಂಟ್ ಮೇರೀಸ್ ದ್ವೀಪ
ಉಡುಪಿ: ಮಲ್ಪೆಯ ಸೈಂಟ್ ಮೇರೀಸ್ ದ್ವೀಪ ಇದೀಗ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಮಳೆಯ ಹಿನ್ನೆಲೆಯಲ್ಲಿ ಸೈಂಟ್ ಮೇರಿಸ್ ದ್ವೀಪಕ್ಕೆ ತಾತ್ಕಾಲಿಕವಾಗಿ ಪ್ರವಾಸಿಗರ ಪ್ರವೇಶವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಬುಧವಾರದಿಂದ ಮತ್ತೆ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಪ್ರವಾಸಿಗರಿಗಾಗಿ ವಿವಿಧ ಸೌಲಭ್ಯ ಮತ್ತು ಮುಂಜಾಗೃತಾ ಕ್ರಮ ಅಡಿಕೆ, ತೆಂಗಿನ ಮರದ ಎಲೆಗಳಿಂದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಿಸಲಾಗಿದೆ. ಪ್ರವೇಶ ಶುಲ್ಕ ಪ್ರತೀ ವ್ಯಕ್ತಿಗೆ 300 ರೂ. ನಿಯಮಗಳ ಉಲ್ಲಂಘನೆ ಕಂಡು ಬಂದಲ್ಲಿ 500 ರೂ. ದಂಡ ವಿಧಿಸಲಾಗುತ್ತದೆ. […]
ಅಕ್ಟೋಬರ್ 28 ರಂದು ತೆರೆಗಪ್ಪಳಿಸಲಿದೆ ಗಂಧದ ಗುಡಿ: ಇದು ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ ಕೊನೆ ಚಿತ್ರ
ನಟ ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಅಮೋಘವರ್ಷ ನಿರ್ದೇಶನದ ಸಾಕ್ಷ್ಯಚಿತ್ರ ಅಕ್ಟೋಬರ್ 28 ರಂದು ತೆರೆ ಮೇಲೆ ಬರಲಿದೆ. ಬಿಡುಗಡೆ ದಿನಾಂಕದ ಅಧಿಕೃತ ಪ್ರಕಟಣೆಯನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ. “ತನ್ನ ಮೇಲೆ ಅಪಾರ ಪ್ರೀತಿಯನ್ನು ಧಾರೆಯೆರೆದ ಭೂಮಿಗೆ ಗೌರವವಾಗಿ ಕರ್ನಾಟಕದ ಕಾಡುಗಳನ್ನು ಪುನೀತ್ ಆಗಿಯೇ ಅನ್ವೇಷಿಸುತ್ತಾರೆ. ಈ ಚಿತ್ರದಲ್ಲಿ ಚಿತ್ರಕಥೆಯಿಲ್ಲದ ನೈಜ ಪುನೀತ್ ಅವರನ್ನು ಅಭಿಮಾನಿಗಳು ಕಾಣಬಹುದು” ಎಂದು ಅಶ್ವಿನಿ ಹೇಳಿದ್ದಾರೆ. […]
ನೀಲಾವರ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಸಂಪನ್ನ
ಮಂದಾರ್ತಿ: ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಬುಧವಾರ ವಿಜಯದಶಮಿಯಂದು ಸಂಜೆ ಸಾಮೂಹಿಕ ದೀಪ ನಮಸ್ಕಾರ ಪೂಜೆ ಮೂಲಕ ವಿಜೃಂಭಣೆಯಿಂದ ಸಂಪನ್ನಗೊಂಡಿತು. ನವರಾತ್ರಿ ಪರ್ಯಂತ ದಿನಂಪ್ರತಿ ದುರ್ಗಾ ಹೋಮ, ಅನ್ನಸಂತರ್ಪಣೆ ನಡೆಯಿತು. ಶುಕ್ರವಾರ ವಿಜಯದಶಮಿಯಂದು ಚಂಡಿಕಾಯಾಗ, ಮಹಾ ಅನ್ನ ಸಂತರ್ಪಣೆ ಮತ್ತು ಸಂಜೆ ಸಾಮೂಹಿಕ ದೀಪ ನಮಸ್ಕಾರ ಪೂಜೆ ನಡೆಯಿತು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ರಘರಾಮ ಮಧ್ಯಸ್ಥ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ದೇವಳದ ಅರ್ಚಕರಾದ ಕೃಷ್ಣ ಅಡಿಗ, ಚಂದ್ರಶೇಖರ […]
ಪ್ರಗತಿಪರ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 20 ಕೊನೆ ದಿನ
ಉಡುಪಿ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಇವರ ವತಿಯಿಂದ ಶಿವಮೊಗ್ಗದಲ್ಲಿ ನಡೆಯುವ ಕೃಷಿ ಮೇಳದಲ್ಲಿ ಪ್ರಗತಿಪರ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿಗೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಪ್ರಗತಿಯತ್ತ ಸಾಗುತ್ತಿರುವ ಜಿಲ್ಲೆಯ ಅರ್ಹ ರೈತ ಹಾಗೂ ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಅಥವಾ ಜಂಟಿ ಕೃಷಿ ನಿರ್ದೇಶಕರ […]
ಮಂಗಳೂರು: ಜಿ.ಪಂ ಘನ ದ್ರವ ತ್ಯಾಜ್ಯ ನಿರ್ವಹಣೆ ಜಿಲ್ಲಾ ಸಲಹೆಗಾರ ಹುದ್ದೆ ಖಾಲಿ
ವಿಭಾಗ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹುದ್ದೆ: ಘನ ದ್ರವ ತ್ಯಾಜ್ಯ ನಿರ್ವಹಣೆ ಜಿಲ್ಲಾ ಸಲಹೆಗಾರ (ಗುತ್ತಿಗೆ ಆಧಾರ) ವಿದ್ಯಾರ್ಹತೆ: ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ನಲ್ಲಿ ಪದವಿ/ಸ್ನಾತಕೋತ್ತರ ಪದವಿ ಹೊಸಬರು ಅಥವಾ ಅನುಭವ ಇರುವವ ಪುರುಷ/ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ವೇತನ: 25 ಸಾವಿರ ಕೆಲಸದ ಸ್ಥಳ: ಮಂಗಳೂರು ಆಸಕ್ತ ಅಭ್ಯರ್ಥಿಗಳು ಸಿವಿ : 9964242943 ಗೆ ವಾಟ್ಸಾಪ್ ಮಾಡಬಹುದು