ಬಾಸ್ಕೆಟ್‌ ಬಾಲ್‌ ಮತ್ತು ಬ್ಯಾಡ್ಮಿಂಟನ್‌ ಪಂದ್ಯಾಟದಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಕಾರ್ಕಳ: ಪದವಿ ಪೂರ್ವಶಿಕ್ಷಣ ಇಲಾಖೆ ಹಾಗೂ ಶ್ರೀ ಶಾರದಾ ಪಿಯು ಕಾಲೇಜು ಉಡುಪಿ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಬಾಸ್ಕೆಟ್‌ ಬಾಲ್‌ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡವು ದ್ವಿತೀಯ ಸ್ಥಾನ ಗಳಿಸಿ, ಬಾಲಕರ ತಂಡದ ಪ್ರಥಮ ವಿಜ್ಞಾನ ವಿಭಾಗದ ಶಾಶ್ವತ್‌.ಎಂ.ಆರ್‌., ಕೆ.ಗಗನ್‌, ಕಾರ್ತಿಕ್‌ ಕಾಮತ್‌ ಹಾಗೂ ಬಾಲಕಿಯರ ತಂಡದ ಪ್ರಥಮ ವಿಜ್ಞಾನ ವಿಭಾಗದ ಬಾಲಚನ್ನ ವೈನವಿ, ಸಂಜನಾ.ವಿ.ಬೆಸ್ಕೂರ್‌, ದ್ವಿತೀಯ ವಿಜ್ಞಾನ ವಿಭಾಗದ ಸಾನ್ವಿ ಶೆಟ್ಟಿ ದಾವಣಗೆರೆಯಲ್ಲಿ ನಡೆಯುವ ರಾಜ್ಯಮಟ್ಟದ ಬಾಸ್ಕೆಟ್‌ […]

ದುಬೈ: ದಸರಾದಂದು ಸಾರ್ವಜನಿಕರಿಗೆ ಮುಕ್ತವಾದ ಭವ್ಯ ಹಿಂದೂ ದೇವಾಲಯ

ದುಬೈ: ಇಲ್ಲಿನ ‘ಪೂಜಾ ಗ್ರಾಮ’ ಜೆಬೆಲ್ ಅಲಿ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಉದ್ಘಾಟನೆಗೊಂಡ ಭವ್ಯವಾದ ಹಿಂದೂ ದೇವಾಲಯವು ದಸರಾ ಸಂದರ್ಭದಲ್ಲಿ ಭಕ್ತರಿಗೆ ಮುಕ್ತವಾಗಿದೆ. ಈ ದೇವಾಲಯವು ಯುಎಇಯ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾದ ಸಿಂಧಿ ಗುರು ದರ್ಬಾರ್ ದೇವಾಲಯದ ವಿಸ್ತರಣೆಯಾಗಿದೆ. ಸಹಿಷ್ಣುತೆ ಮತ್ತು ಸಹಬಾಳ್ವೆ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರು ನೆಲಮಹಡಿಯಲ್ಲಿರುವ ದೇವಾಲಯದ ವಿವಿಧೋದ್ದೇಶ ಸಭಾಂಗಣದಲ್ಲಿ ದೀಪ ಬೆಳಗಿಸುವ ಮೂಲಕ ದೇವಾಲಯವನ್ನು ಉದ್ಘಾಟಿಸಿದರು. Amb @sunjaysudhir – It […]

ಡಿಸೆಂಬರ್ 23 ರಿಂದ ಜನವರಿ 1 ರವರೆಗೆ ತಣ್ಣೀರಬಾವಿ ಕಡಲ ತೀರದಲ್ಲಿ ಕರಾವಳಿ ಉತ್ಸವ

ಮಂಗಳೂರು: ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಕರಾವಳಿ ಉತ್ಸವವನ್ನು ಡಿಸೆಂಬರ್ 23 ರಿಂದ ಜನವರಿ 1 ರವರೆಗೆ ತಣ್ಣೀರಬಾವಿ ಕಡಲ ತೀರದಲ್ಲಿ ಆಯೋಜಿಸಲಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಮತ್ತು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು. ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉತ್ಸವದ ಸುಗಮ ನಿರ್ವಹಣೆಗೆ ವಿವಿಧ ಸಮಿತಿಗಳು ಹಾಗೂ ಉಪಸಮಿತಿಗಳನ್ನು ಶೀಘ್ರ ರಚಿಸಲಾಗುವುದು ಎಂದರು. ಈ ಪ್ರದೇಶದ […]

ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಚಂಡಿಕಾ ಹವನ; ಮಕ್ಕಳಿಗೆ ಅಕ್ಷರಾಭ್ಯಾಸ

ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಿಜಯದಶಮಿ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಚಂಡಿಕಾ ಹವನವನ್ನು ವಿನಾಯಕ ಭಟ್ ಮಾರ್ಗದರ್ಶನದಲ್ಲಿ ನಡೆಸಲಾಯಿತು. ದಯಘನ್ ಭಟ್, ಮೇಘಶ್ಯಾಮ್ ಭಟ್, ದೀಪಕ್ ಭಟ್ ಮತ್ತು ಅರ್ಚಕ ವೃಂದದವರು ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ಪೂಜಾ ವಿಧಾನಗಳನ್ನು ನಡೆಸಿಕೊಟ್ಟರು. ಚಂಡಿಕಾ ಹವನ ಪೂಜಾ ಕಾರ್ಯದಲ್ಲಿ ಹೆಚ್ ಉಮೇಶ್ ದಂಪತಿಗಳು ಸಹಕರಿಸಿದರು. ಪೂರ್ಣಾಹುತಿ ಮಹಾಪೂಜೆ ಬಳಿಕ ಸಮಾರಾಧನೆ ನಡೆಯಿತು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ವಿನಾಯಕ ಭಟ್ ನಡೆಸಿಕೊಟ್ಟರು. ದೇವಳದ ಆಡಳಿತ […]

ವಿಶ್ವದಲ್ಲೇ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ: 40 ಸಾವಿರ ಕೋಟಿ ರೂ. ವಿದೇಶಿ ವಿನಿಮಯ ಗಳಿಕೆ

ನವದೆಹಲಿ: ಭಾರತವು ವಿಶ್ವದ ಅತಿದೊಡ್ಡ ಸಕ್ಕರೆ ಉತ್ಪಾದಕ ಮತ್ತು ಎರಡನೇ ಅತಿದೊಡ್ಡ ರಫ್ತುದಾರನಾಗಿ ಹೊರಹೊಮ್ಮಿದೆ. ಸಕ್ಕರೆ ಋತು 2021-22 ರಲ್ಲಿ, ದೇಶದಲ್ಲಿ ಐದು ಸಾವಿರ ಲಕ್ಷ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಕಬ್ಬು ಉತ್ಪಾದನೆಯಾಗಿದೆ. ಈ ಪೈಕಿ 35 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗಿದ್ದು, 359 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ಕಾರ್ಖಾನೆಗಳು ಉತ್ಪಾದಿಸಿವೆ. ಈ ಋತುವು ಭಾರತೀಯ ಸಕ್ಕರೆ ವಲಯಕ್ಕೆ ಪರ್ವಕಾಲವೆಂದು ಸಾಬೀತಾಗಿದೆ. 109 ಲಕ್ಷ ಮೆಟ್ರಿಕ್ ಟನ್‌ಗಿಂತಲೂ ಹೆಚ್ಚಿನ ಸಕ್ಕರೆ ರಫ್ತಾಗಿ […]