2022-23 ನೇ ಸಾಲಿನ ಕಂಬಳ ವೇಳಾಪಟ್ಟಿ

ಉಡುಪಿ/ ಮಂಗಳೂರು: 2022-23ರ ನವೆಂಬರ್ 5 ರಿಂದ ಏಪ್ರಿಲ್ 8 ರ ವರೆಗೆ ಒಟ್ಟು 23 ಕಂಬಳಗಳ ವೇಳಾಪಟ್ಟಿಯನ್ನು ಜಿಲ್ಲಾ ಕಂಬಳ ಸಮಿತಿ ಪ್ರಕಟಿಸಿದೆ. ನವೆಂಬರ್.5 -ಶಿರ್ವ ನ.12- ಪಿಲಿಕುಳ ನ.19-ಪಜೀರ್ ನ-26-ಕಕ್ಯಪದವು ಡಿಸೆಂಬರ್.3-ವೇಣೂರು ಡಿ.10-ಬಾರಾಡಿ ಬೀಡು ಡಿ.17-ಹೊಕ್ಕಾಡಿಗೋಳಿ ಡಿ.24- ಮೂಡಬಿದ್ರೆ ಡಿ.31-ಮೂಲ್ಕಿ ಜನವರಿ.14-ಅಡ್ವೆ ನಂದಿಕೂರು ಜ.21-ಮಂಗಳೂರು, ಬಂಗ್ರಕೂಳೂರು ಜ.28-ಐಕಳ ಬಾವ ಫೆಬ್ರವರಿ.4-ಪುತ್ತೂರು ಫೆ.11- ಕಟಪಾಡಿ ಬೀಡು ಫೆ.18- ವಾಮಂಜೂರು ತಿರುವೈಲ್ ಫೆ. 25- ಜಪ್ಪು ಮಾರ್ಚ್. 4 -ಬಂಟ್ವಾಳ ನಾವೂರು ಮಾ.11-ಉಪ್ಪಿನಂಗಡಿ ಮಾ.18 ಬಂಗಾಡಿ ಮಾ.25-ಪೈವಳಿಕೆ […]

ಶ್ರೀಕೃಷ್ಣಮಠದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ

ಉಡುಪಿ: ವಿಜಯದಶಮಿಯಂದು ಸೋದೆಮಠದ ಹೆಬ್ಬಾಗಿಲಿನಿಂದ ಕದಿರನ್ನು ಚಿನ್ನದ ಪಲ್ಲಕ್ಕಿಯಲ್ಲಿಟ್ಟು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ತಂದು ಶ್ರೀಕೃಷ್ಣದೇವರ ಗರ್ಭಗುಡಿಯ ಮೂಡುಬಾಗಿಲಿನಿಂದ ಒಳಗೆ ತಂದು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರಿಂದ ಪೂಜೆಗೊಂಡ ಕದಿರನ್ನು ಕಟ್ಟಲಾಯಿತು. ನಂತರ ಬಡಗು ಮಾಳಿಗೆಯಲ್ಲಿ ಭಕ್ತಾದಿಗಳಿಗೆ ವಿತರಿಸಲಾಯಿತು.

ಸುಳ್ಯ: ಸ್ಕೂಟರ್-ಕಾರ್ ಡಿಕ್ಕಿ; ಅಣ್ಣ- ತಂಗಿ ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹೆದ್ದಾರಿಯಲ್ಲಿ ಕಾರೊಂದಕ್ಕೆ ಸ್ಕೂಟರ್ ಡಿಕ್ಕಿ ಹೊಡೆದು ಯುವಕ ಮತ್ತು ಆತನ ಸಹೋದರಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಸುಬ್ರಹ್ಮಣ್ಯ-ಜಾಲ್ಸೂರು ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯಾಹ್ನ ಸುಳ್ಯ ತಾಲೂಕಿನ ಎಲಿಮಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಕಡಪಳ ಬಾಜಿನಡ್ಕದ ನಿಶಾಂತ್ ಹಾಗೂ ಅವರ ತಂಗಿ ಮೋಕ್ಷ ಎಂದು ಗುರುತಿಸಲಾಗಿದೆ. ನಿಶಾಂತ್ ಸುಳ್ಯದ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಆತನ ಸಹೋದರಿ 5 ನೇ ತರಗತಿಯಲ್ಲಿ ಓದುತ್ತಿದ್ದಳು […]

‘ವರುಣಾ’ ದೇಶದ ಮೊದಲ ಮಾನವ-ಹಾರಾಟದ ಡ್ರೋನ್ ಶೀಘ್ರದಲ್ಲೇ ಭಾರತೀಯ ನೌಕಾಪಡೆಗೆ ಸೇರ್ಪಡೆ

ನವದೆಹಲಿ: ಭಾರತೀಯ ಸ್ಟಾರ್ಟಪ್ ಸಾಗರ್ ಡಿಫೆನ್ಸ್ ಇಂಜಿನಿಯರಿಂಗ್ ಅಭಿವೃದ್ಧಿಪಡಿಸಿದ ‘ವರುಣಾ’ ದೇಶದ ಮೊದಲ ಮಾನವ-ಹಾರಾಟದ ಡ್ರೋನ್ ಶೀಘ್ರದಲ್ಲೇ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ. ಈ ಡ್ರೋನ್ 100 ಕೆಜಿ ಸರಕನ್ನು ಎತ್ತಬಲ್ಲದು ಮತ್ತು ಇದರ ಮೂಲಕ ವೈದ್ಯಕೀಯ ಸ್ಥಳಾಂತರಿಸುವಿಕೆಯನ್ನು ನಡೆಸಬಹುದು. 25-30 ಕಿಮೀ ವ್ಯಾಪ್ತಿಯೊಂದಿಗೆ ಸುಮಾರು 30 ನಿಮಿಷಗಳ ಕಾಲ ಹಾರಬಲ್ಲ ಈ ಡ್ರೋನ್ ಅಸಮರ್ಪಕ ಕೆಲಸದ ಸಂದರ್ಭದಲ್ಲಿ ಬ್ಯಾಲಿಸ್ಟಿಕ್ ಪ್ಯಾರಾಚೂಟ್ ಮೂಲಕ ವ್ಯಕ್ತಿಯು ಡ್ರೋನ್ ನಿಂದ ತುರ್ತು ನಿರ್ಗಮಿಸಬಹುದು. #WATCH | ‘Varuna’ country’s first human-carrying […]

ತ್ರೋಬಾಲ್-ಕರಾಟೆ ಪಂದ್ಯಾವಳಿಯಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಕಾರ್ಕಳ : ಪದವಿ ಪೂರ್ವಶಿಕ್ಷಣ ಇಲಾಖೆ ಹಾಗೂ ಅದಮಾರಿನ ಪೂರ್ಣ ಪ್ರಜ್ಞಾ ಪಿಯು ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೋಬಾಲ್‌ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಕಾಲೇಜಿನ ಬಾಲಕರ ತಂಡದಿಂದ ಪ್ರಥಮ ವಿಜ್ಞಾನ ವಿಭಾಗದ ಸನತ್‌ ಪಿಡಾಯಿ ಹಾಗೂ ಬಾಲಕಿಯರ ತಂಡದ ದ್ವಿತೀಯ ವಾಣಿಜ್ಯ ವಿಭಾಗದ ಸ್ವಾತಿ ಶೆಟ್ಟಿ ಕಾರ್ಕಳ ತಂಡವನ್ನು ಪ್ರತಿನಿಧಿಸಿ ಬೆಂಗಳೂರು ಗ್ರಾಮಾಂತರದಲ್ಲಿ ನಡೆಯುವ ರಾಜ್ಯಮಟ್ಟದ ತ್ರೋಬಾಲ್‌ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳು ಕಾರ್ಕಳ ತಾಲೂಕು ಮಟ್ಟದ ತ್ರೋಬಾಲ್‌ ಪಂದ್ಯಾಟದಲ್ಲಿ ಸವ್ಯಸಾಚಿ ಆಟಗಾರ […]