ಪ್ರಯಾಣಿಕ ಕಾರುಗಳಿಗೆ ಆರು ಏರ್‌ಬ್ಯಾಗ್ ನಿಯಮ: ಮುಂದಿನ ಅಕ್ಟೋಬರ್‌ ವರೆಗೆ ಮುಂದೂಡಿಕೆ

ನವದೆಹಲಿ: ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಪ್ರಸ್ತಾಪವನ್ನು ಸರ್ಕಾರವು ಅಕ್ಟೋಬರ್ 1, 2023 ರವರೆಗೆ ಒಂದು ವರ್ಷದ ಅವಧಿಗಳವರೆಗೆ ಮುಂದೂಡಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸರಣಿ ಟ್ವೀಟ್‌ ಮಾಡಿ, ಆಟೋ ಉದ್ಯಮವು ಎದುರಿಸುತ್ತಿರುವ ಜಾಗತಿಕ ಪೂರೈಕೆ ಸರಪಳಿಯ ನಿರ್ಬಂಧಗಳು ಮತ್ತು ಸ್ಥೂಲ ಆರ್ಥಿಕ ಸನ್ನಿವೇಶದ ಮೇಲೆ ಅದರ ಪರಿಣಾಮವನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ವಾಹನಗಳ ವೆಚ್ಚ ಮತ್ತು ವೇರಿಯಂಟ್ ಗಳನ್ನು ಪರಿಗಣಿಸದೆ ವಾಹನಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರ […]

ಕಳಪೆ ಕಾಮಗಾರಿಯಿಂದ ಗಂಗೊಳ್ಳಿ ಬಂದರು ಜೆಟ್ಟಿ ಕುಸಿತ: ನೀರಿನಲ್ಲಿ ಹೋಮವಾಯ್ತು 12 ಕೋಟಿ ರೂಪಾಯಿ ಅನುದಾನ

ಕುಂದಾಪುರ: ಕಳಪೆ ಕಾಮಗಾರಿಯಿಂದ ಇಲ್ಲಿನ ಗಂಗೊಳ್ಳಿ ಬಂದರಿನಲ್ಲಿ 12 ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಿಸಿದ್ದ ಜೆಟ್ಟಿ ಕುಸಿದಿದ್ದು, ನಿರ್ಮಾಣ ಕಾಮಗಾರಿಯು ನೀರಿನಲ್ಲಿಟ್ಟ ಹೋಮದಂತಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆರಂಭದಿಂದಲೂ ಅವೈಜ್ಞಾನಿಕ‌ ಕಾಮಗಾರಿಯಿಂದಾಗಿ ಒಂದಿಲ್ಲೊಂದು ಸಮಸ್ಯೆಗೆ ತುತ್ತಾಗುತ್ತಿದ್ದ ಗಂಗೊಳ್ಳಿ ಬಂದರು ಪ್ರದೇಶ ಇದೀಗ ಮತ್ತೆ ಸುದ್ದಿಯಲ್ಲಿದೆ. ಗಂಗೊಳ್ಳಿಯ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ನಡೆಯುತ್ತಿರುವ ಜೆಟ್ಟಿ ನಿರ್ಮಾಣ ಕಾರ್ಯದ ವೇಳೆ ಜೆಟ್ಟಿ ಭಾಗ ಕುಸಿತಕ್ಕೊಳಗಾಗಿದೆ. 150 ಮೀಟರಿಗೂ ಅಧಿಕ ಜೆಟ್ಟಿ ಕುಸಿದಿದ್ದು, ಸ್ಥಳೀಯ ಮೀನುಗಾರರು ಆತಂಕಕ್ಕೀಡಾಗಿದ್ದಾರೆ. ಜೆಟ್ಟಿ ಭಾಗವು ನಿರಂತರವಾಗಿ ಕುಸಿಯುತ್ತಿದ್ದರೂ […]

ದುರ್ಗಾ ರೂಪದಲ್ಲಿ ಕಂಗೊಳಿಸಿದ ಚಾರ್ವಿ ಎಸ್.ದೇವಾಡಿಗ

ಮಂಗಳೂರು: ಸುರತ್ಕಲ್ ಬಳಿಯ ಮುಕ್ಕದ ವಿಜಯಲಕ್ಷ್ಮಿ ಹಾಗೂ ಸುಶೀಲ್ ಕುಮಾರ್ ದಂಪತಿಯ ಮಗಳಾದ ಚಾರ್ವಿ.ಎಸ್.ದೇವಾಡಿಗ  ಎನ್.ಐ.ಟಿ.ಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ನೃತ್ಯ ಶಿಕ್ಷಕಿಯಾದ ಭಾರತಿ ಸುರೇಶ್ ಅವರಲ್ಲಿ ಶಾಸ್ತ್ರೀಯ ನೃತ್ಯದಲ್ಲಿ ಸೀನಿಯರ್ ಹಂತದ ತರಬೇತಿ ಪಡೆಯುತ್ತಿದ್ದಾಳೆ. ನೃತ್ಯದಲ್ಲಿ ಆಸಕ್ತಿ ಹೊಂದಿರುವ ಚಾರ್ವಿ ಕೆಲ ನೃತ್ಯದ ಪ್ರಕಾರಗಳನ್ನು ತಾನಾಗಿಯೇ ಅಭ್ಯಾಸ ಮಾಡಿಕೊಂಡು ತನ್ನ ಯೂಟ್ಯೂಬ್ ಚಾನಲ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಾಳೆ. ಇದೀಗ ದಸರಾ ಪ್ರಯುಕ್ತ ದುರ್ಗಾ ರೂಪದಲ್ಲಿ ಕಂಗೊಳಿಸಿದ್ದು, ಈ ಚಿತ್ರಗಳನ್ನು […]

ಅ. 1 ರಂದು ಆದರ್ಶ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಮೆಗಾ ರ‍್ಯಾಲಿ

ಉಡುಪಿ: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಉಡುಪಿ ಮತ್ತು ಜಿಲ್ಲಾ ಸರ್ವೇಕ್ಷಣಾ ಕಚೇರಿ ಉಡುಪಿ ಯ ಸಹಯೋಗದೊಂದಿಗೆ ಆದರ್ಶ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನ-2022 ರ ಮೆಗಾ ರ‍್ಯಾಲಿಯನ್ನು ಆಯೋಜಿಸಲಾಗಿದ್ದು ಅಕ್ಟೋಬರ್-1 ಶನಿವಾರದಂದು 8.45 ಕ್ಕೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ್ ಉಡುಪ, ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್ ಚಂದ್ರಶೇಖರ್, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಮತ್ತು ಜಿಲ್ಲಾ […]