ಉನ್ನತಿ ಕರಿಯರ್ ಅಕಾಡಮಿ: ಖಚಿತ ಉದ್ಯೋಗಾವಕಾಶದೊಂದಿಗೆ ಬಹುಬೇಡಿಕೆಯ ಐಟಿ ಕೋರ್ಸ್ ಅಕ್ಟೋಬರ್ ಮೊದಲ ವಾರದಿಂದ ಪ್ರಾರಂಭ
ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿರುವ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಕಳೆದ 3 ವರ್ಷಗಳಲ್ಲಿ 3000ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಉದ್ಯೋಗವಕಾಶವನ್ನು ಸೃಷ್ಟಿಸಿರುತ್ತದೆ. ಇದೀಗ ಸಂಸ್ಥೆಯು ಖಚಿತ ಉದ್ಯೋಗಾವಕಾಶ ಹೊಂದಿರುವ ಐಟಿ ಕ್ಷೇತ್ರದ ಬಹುಬೇಡಿಕೆಯ ತಂತ್ರಜ್ಞಾನಗಳಾದ ಫ್ರಂಟ್ ಎಂಡ್ ಡೆವಲಂಪ್ಮೆಂಟ್, ಬ್ಯಾಕ್ ಎಂಡ್ ಡೆವಲಂಪ್ಮೆಂಟ್, ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಫುಲ್ ಸ್ಟ್ಯಾಕ್ ಡೆವಲಪರ್ ಕೋರ್ಸ್ ಗಳನ್ನು ನೀಡುತ್ತಿದೆ. ಪಿಯುಸಿ, ಪದವಿ, ಡಿಪ್ಲೊಮಾ, ಇಂಜಿನೀಯರಿಂಗ್ ವಿದ್ಯಾರ್ಥಿಗಳು ಈ ಕೋರ್ಸ್ ಗಳಿಗೆ ಪ್ರವೇಶಾತಿ […]
ಬೈಂದೂರು: ಉಡುಪಿ ರಜತ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮ
ಬೈಂದೂರು: ತಾಲೂಕು ಆಡಳಿತ ಬೈಂದೂರು ಇವರ ವತಿಯಿಂದ ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಉದ್ಘಾಟನಾ ಸಮಾರಂಭವು ಸೆಪ್ಟಂಬರ್ 25 ರಂದು ಬೆಳಗ್ಗೆ 11 ಗಂಟೆಗೆ ನಾಗೂರು ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಉದ್ಘಾಟಿಸಲಿದ್ದು, ಬೈಂದೂರು ಶಾಸಕ ಬಿ.ಎಮ್. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಎನ್‌ಡಿಎ ಪ್ರವೇಶ ಪರೀಕ್ಷೆ: ಎಕ್ಸ್ ಪರ್ಟ್ ಕಾಲೇಜಿನ 6 ವಿದ್ಯಾರ್ಥಿಗಳು ಆಯ್ಕೆ
ಮಂಗಳೂರು: ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ಆರು ವಿದ್ಯಾರ್ಥಿಗಳು ಅರ್ಹತೆ ಪಡೆದು, ಮುಂದಿನ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಮೈಸೂರಿನ ಪ್ರಥಮ್ ಎಂ.ಕೆ., ಚಿರಂತ್ ಎಸ್., ಹಾಸನದ ಪಾಯಲ್ ಕವಾರ್ ಸೆಪ್ಟೆಂಬರ್ 4 ರಂದು ನಡೆದ ಲಿಖಿತ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಏಪ್ರೀಲ್ ತಿಂಗಳಿನಲ್ಲಿ ನಡೆದ ಪರೀಕ್ಷೆಯಲ್ಲಿ ಬೀದರ್‌ನ ಶರಣ್ ಕೃಷ್ಣ ಕೊಂಡಿ, ಮಡಿಕೇರಿಯ ಸಿ.ಪಿ. ಕರಿಯಪ್ಪ, […]
ಮಣಿಪಾಲ: ಜೀನ್-ಲುಕ್ ಗೊಡಾರ್ಡ್ ರ ಬ್ರೆಥ್ ಲೆಸ್ ಚಲನಚಿತ್ರ ಪ್ರದರ್ಶನ
ಮಣಿಪಾಲ: ಇತ್ತೀಚಿಗೆ ನಿಧನರಾದ ಖ್ಯಾತ ಚಲನಚಿತ್ರ ನಿರ್ದೇಶಕ ಜೀನ್-ಲುಕ್ ಗೊಡಾರ್ಡ್ ಅವರ ಗೌರವಾರ್ಥವಾಗಿ ಅವರ ಪ್ರಸಿದ್ಧ ಚಲನಚಿತ್ರ ‘ಬ್ರೆಥ್ ಲೆಸ್’ ಪ್ರದರ್ಶನ ಮತ್ತು ಗೊಡಾರ್ಡ್ ಕುರಿತ ವಿಶೇಷ ಸಂವಾದವು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್), ಆಶ್ರಯದಲ್ಲಿ ಸೆಪ್ಟೆಂಬರ್ 24, ಶನಿವಾರ ಬೆಳಿಗ್ಗೆ 10.00 ಗಂಟೆಗೆ ಮಣಿಪಾಲದ ಹಳೆಯ ಟ್ಯಾಪ್ಮಿ ಕಟ್ಟಡದ ತರಗತಿ ಕೊಠಡಿ-2ರಲ್ಲಿ ನಡೆಯಲಿದೆ. ಲೇಖಕರು ಮತ್ತು ಉಡುಪಿ ಚಿತ್ರ ಸಮಾಜದ ಮತ್ತು ಸಂಚಾಲಕರಾದ ಪ್ರೊ.ಫಣಿರಾಜ್ ಅವರು ಚಿತ್ರವನ್ನು ಪರಿಚಯಿಸಿ […]
ಕುಂದಾಪುರ: ಶ್ರೀ ವೆಂಕಟರಮಣ ಕಾಲೇಜಿನಲ್ಲಿ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಬಾಲಕ-ಬಾಲಕಿ ತಂಡ ಪ್ರಥಮ
ಕುಂದಾಪುರ: ಸ್ಪರ್ಧೆಯಲ್ಲಿ ಸೋಲು-ಗೆಲುವು ಸಾಮಾನ್ಯ. ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ಬದುಕಿನಲ್ಲಿ ಯಶಸ್ಸು ತಮ್ಮದಾಗಿಸಬಹುದು ಎಂದು ಸರಸ್ವತಿ ವಿದ್ಯಾಲಯ ಗಂಗೊಳ್ಳಿ ಇಲ್ಲಿನ ದೈಹಿಕ ಶಿಕ್ಷಣ ಉಪನ್ಯಾಸಕ ನಾಗರಾಜ್ ಶೆಟ್ಟಿ ಹೇಳಿದರು. ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಕುಂದಾಪುರ ಇದರ ಜಂಟಿ ಆಶ್ರಯದಲ್ಲಿ ಸೆ.22 ರಂದು ಜರುಗಿದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ವೆಂಕಟರಮಣ ಸಂಸ್ಥೆಯ ಕಾರ್ಯದರ್ಶಿ ಕೆ. ರಾಧಾಕೃಷ್ಣ […]