ಉಡುಪಿ: ಯುವತಿ ನಾಪತ್ತೆ

ಉಡುಪಿ: ಪುತ್ತೂರು ಗ್ರಾಮದ ವಿಷ್ಣುಮೂರ್ತಿ ನಗರ ನಿವಾಸಿ ನಿಶಾ ಎನ್ ಎಸ್ ಆಮೀನ್ (21) ಎಂಬ ಯುವತಿಯು ಸೆಪ್ಟಂಬರ್ 20 ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 2 ಇಂಚು ಎತ್ತರ, ದಪ್ಪ ಮೈಕಟ್ಟು, ಗೋಧಿ ಮೈಬಣ್ಣ, ಅಗಲ ಮುಖ ಹೊಂದಿದ್ದು, ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳನ್ನು ಸಂಪರ್ಕಿಸುವಂತೆ ಪ್ರಕಟಣೆ […]

ಕೊಡವೂರು: ಪೌರ ಕಾರ್ಮಿಕರಿಗೆ ಸನ್ಮಾನ

ಕೊಡವೂರು: ಇಲ್ಲಿನ ಪರಿಸರವನ್ನು ಪ್ರತಿನಿತ್ಯ ಸ್ವಚ್ಛ ಮಾಡುವುದರ ಜೊತೆಗೆ ಎಲ್ಲರ ಮನೆಯ ಕಸವನ್ನು ಅಚ್ಚುಕಟ್ಟಾಗಿ ವಿಲೇವಾರಿ ಮಾಡುವ ನಗರ ಸಭೆಯ ವಾಹನದ ಚಾಲಕರು ಮತ್ತು ಲೋಡರ್ ಗಳನ್ನು ಕೊಡವೂರಿನ ನಾಗರಿಕರ ಪರವಾಗಿ ಕೊಡವೂರಿನ ಯುವಕ ಸಂಘದಲ್ಲಿ ಸನ್ಮಾನಿಸಲಾಯಿತು. ಪೌರಕಾರ್ಮಿಕರಾದ ಸಂದೀಪ್, ರಮೇಶ್, ಶಾಮ ಇವರಿಗೆ ಶಾಲು ಹೊದೆಸಿ ಗೌರವಿಸಲಾಯಿತು. ನಗರಸಭಾ ಸದಸ್ಯ ವಿಜಯ್ ಕೊಡವೂರು, ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್, ಸದಸ್ಯರಾದ ರಾಘವೇಂದ್ರ ರಾವ್, ವರ್ಷ ನಾರಾಯಣ್ ರಾವ್, ವಾಣಿ, ವಿನಯ್ ಮತ್ತಿತರರು ಉಪಸ್ಥಿತರಿದ್ದರು. […]

ಪಂಚಮಿ ಸೌಹಾರ್ದ ಸಹಕಾರಿ ನಿಯಮಿತ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಉಡುಪಿ: ಇಲ್ಲಿನ ಮಠದಬೆಟ್ಟು ರಸ್ತೆಯ ನಾಗಬನದ ಎದುರು ಆರ್.ಎಸ್.ಬಿ. ವಿಂಡ್ಸರ್ ನ ಮೊದಲನೆ ಮಹಡಿಯಲ್ಲಿರುವ ಪಂಚಮಿ ಸೌಹಾರ್ದ ಸಹಕಾರಿ ನಿಯಮಿತ ಸಹಕಾರಿ ಸಂಘದ 2021- 22ನೇ ಸಾಲಿನ ವಾರ್ಷಿಕ ಮಹಾ ಸಭೆಯ ಸೂಚನಾ ಪತ್ರ ಹಾಗೂ ವಾರ್ಷಿಕ ಲೆಕ್ಕ ಪತ್ರಗಳ ವರದಿಯನ್ನು ಸೆ. 24 ರಂದು ಕುಂಜಿಬೆಟ್ಟುವಿನ ಸ್ವರ್ಣ ಜುವೆಲ್ಲರಿಯ ಹತ್ತಿರವಿರುವ ಶ್ರೀ ಕೃಷ್ಣ ಪ್ರಜ್ಞ ಪ್ರತಿಷ್ಠಾನದಲ್ಲಿ ಅಪರಾಹ್ನ 3.00 ಗಂಟೆಗೆ ಮಂಡಿಸಲಾಗುವುದು. ಸಂಘದ ಅಧ್ಯಕ್ಷ ಸತ್ಯಪ್ರಸಾದ್ ಶೆಣೈ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಂಘದ ಎಲ್ಲಾ ಸದಸ್ಯರೂ ಸಭೆಯಲ್ಲಿ […]

ಭೂಮಿಗೆ ಬಂತು ‘ಗುರು’ ಬಲ: 59 ವರ್ಷಗಳ ಬಳಿಕ ಭೂಮಿಗೆ ಅತಿ ಸಮೀಪ ಬರಲಿರುವ ಬೃಹಸ್ಪತಿ

ಖಗೋಳ ಶಾಸ್ತ್ರದ ಕುತೂಹಲಿಗಳಿಗೆ ಸಂಭ್ರಮಿಸುವ ಕ್ಷಣವೊಂದು ಸೋಮವಾರ, ಸೆಪ್ಟೆಂಬರ್ 26ರಂದು ದೊರಕಲಿದೆ. ಸೌರಮಂಡಲದ ಅತ್ಯಂತ ಬಲಶಾಲಿ ಅನಿಲ ದೈತ್ಯ ಗ್ರಹವಾದ ಗುರು ಅಥವಾ ಬ್ರಹಸ್ಪತಿಯು 59 ವರ್ಷಗಳ ಬಳಿಕ ಭೂಮಿಗೆ ಅತಿ ಸಮೀಪ ಬರಲಿದೆ. ಆ ದಿನದಂದು ಭೂಮಿಯಿಂದ ನೋಡಿದಾಗ ಗುರುವು ಸೂರ್ಯನ ನೇರ ಎದುರು ಅಂದರೆ ಸೂರ್ಯನ ವಿರುದ್ದ ದಿಕ್ಕಿನಲ್ಲಿರುತ್ತದೆ. ಈ ಖಗೋಳ ವ್ಯವಸ್ಥೆಯನ್ನು ‘ವಿರೋಧ’ ಎಂದು ಕರೆಯಲಾಗುತ್ತದೆ. ಸೂರ್ಯ ಪಶ್ಚಿಮದಲ್ಲಿ ಮುಳುಗುವಾಗ ಗ್ರಹವು ಪೂರ್ವದಲ್ಲಿ ಉದಯಿಸುವುದನ್ನು ವಿರೋಧ ಎನ್ನುತ್ತಾರೆ. ಈ ಸಮಯದಲ್ಲಿ ಗುರುವು ಅಸಾಮಾನ್ಯ […]

ರಾಷ್ಟ್ರೀಯ ಹೆದ್ದಾರಿ ದುರವಸ್ಥೆ ಸರಿಪಡಿಸದಿದ್ದಲ್ಲಿ ಸಂಸದರ ಕಚೇರಿಗೆ ಮುತ್ತಿಗೆ: ವಿನಯ್ ಕುಮಾರ್ ಸೊರಕೆ

ಉಡುಪಿ: ಉಡುಪಿಯನ್ನು ಕಾರ್ಕಳಕ್ಕೆ ಸಂಪರ್ಕಿಸುವ ಮುಖ್ಯರಸ್ತೆ ಪರ್ಕಳದಿಂದ ಗುಡ್ಡೆಯಂಗಡಿವರೆಗಿನ ರಾಷ್ಟ್ರೀಯ ಹೆದ್ದಾರಿಯು ದುರವಸ್ಥೆಯಲ್ಲಿದ್ದು, ದುರಸ್ತಿ ಮಾಡಬೇಕಾದ ಸಂಸದೆ ಶೋಭಾ ಕರಂದ್ಲಾಜೆ ಅಡಗಿ ಕುಳಿತಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು. ಗುರುವಾರ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉತ್ತರ ವಲಯದ ನೇತೃತ್ವದಲ್ಲಿ ರಾಷ್ಟೀಯ ಹೆದ್ದಾರಿಯನ್ನು ದುರಸ್ತಿಗೊಳಿಸುವಂತೆ ಕೋರಿ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಬಿಜೆಪಿ ಸರ್ಕಾರದ ವಿರುದ್ದ ಧಿಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಹೆದ್ದಾರಿ ತಡೆ ನಡೆಸಿ ಜಿಲ್ಲಾಡಳಿತ ಮತ್ತು […]