ಡಾ. ಬಿ.ಆರ್.ಅಂಬೇಡ್ಕರ್ ದೀಕ್ಷಾಭೂಮಿ ಯಾತ್ರೆ: ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳನ್ನು ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾಭೂಮಿ ಯಾತ್ರೆಗೆ ನಿಯೋಜಿಸಲು 18 ವರ್ಷ ಮೇಲ್ಪಟ್ಟ ಅರ್ಹ ಅಭ್ಯರ್ಥಿಗಳಿಂದ ಇಲಾಖೆಯ ವೆಬ್‌ಸೈಟ್ www.sw.kar.nic.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 26 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ ದೂ.ಸಂಖ್ಯೆ: 0820-2574892 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ […]

ಟಾಟಾ ಮೆಮೊರಿಯಲ್ ನ 100 ರೂ ಗಿಂತಲೂ ಕಡಿಮೆ ಬೆಲೆಯ ಸ್ಥಳೀಯ ಅರಿವಳಿಕೆಯಿಂದ ಸ್ತನ ಕ್ಯಾನ್ಸರ್ ರೋಗಿಗಳಿಗೆ ಜೀವದಾನ

ಮುಂಬೈ: ಮುಂಬೈ ಟಾಟಾ ಮೆಮೋರಿಯಲ್ ಸೆಂಟರ್ (ಟಿಎಂಸಿ) ನ ವೈದ್ಯರ ಒಂದು ದಶಕದ ಅವಧಿಯ ಅಧ್ಯಯನವು ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಸ್ವಲ್ಪ ಮೊದಲು ಸ್ಥಳೀಯ ಅರಿವಳಿಕೆ (0.5% ಲಿಡೋಕೇನ್) ಯನ್ನು ಕ್ಯಾನ್ಸರ್ ವಿರೋಧಿ ಏಜೆಂಟ್ ಆಗಿ ಬಳಸುವ ಸರಳ ಹಸ್ತಕ್ಷೇಪವು ಮರಣ ಮತ್ತು ಮರುಕಳಿಸುವಿಕೆಯ ಅಪಾಯವನ್ನು ಕ್ರಮವಾಗಿ 29% ಮತ್ತು 30% ದಷ್ಟು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ತೋರಿಸಿದೆ. ಪ್ರತಿ ವರ್ಷ, ಭಾರತದಲ್ಲಿ ಅಂದಾಜು 1,50,000 ಹೊಸ ಸ್ತನ ಕ್ಯಾನ್ಸರ್ ರೋಗಿಗಳು ಪತ್ತೆಯಾಗುತ್ತಾರೆ. ಇದರಲ್ಲಿ 90,000-1,00,000 […]

ಸೆಪ್ಟಂಬರ್ 22 ರಂದು ರಜತಾದ್ರಿಯಲ್ಲಿ ಮಿನಿ ಉದ್ಯೋಗ ಮೇಳ

ಉಡುಪಿ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಸೆಪ್ಟಂಬರ್ 22 ರಂದು ಬೆಳಗ್ಗೆ 10.30 ಕ್ಕೆ ರಜತಾದ್ರಿಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಮಿನಿ ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ […]

ಗ್ರಾಮ ವನ್ ಕೇಂದ್ರಗಳಲ್ಲಿ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ನೋಂದಣಿ ಆರಂಭ

ಉಡುಪಿ: ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಪಿ.ಎಂ.ಜೆ.ಎ.ವೈ) ಯನ್ನು ಹೊಸದಾಗಿ ಆರಂಭಿಸಿದ್ದು, ಈ ಯೋಜನೆಯಡಿ ಯಾವುದೇ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ವೆಚ್ಚಗಳಿಗಾಗಿ ಬಿ.ಪಿ.ಎಲ್ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ. ವರೆಗೆ ಹಾಗೂ ಎ.ಪಿ.ಎಲ್ ಕಾರ್ಡುದಾರರು 1.5 ಲಕ್ಷ ರೂ. ವರೆಗೆ ವಿಮಾ ಸೇವೆಯ ಜೊತೆಗೆ ಫಲಾನುಭವಿಗಳ ಚಿಕಿತ್ಸೆಯ ಮಾಹಿತಿಯೂ ಸಹ ದೇಶದ ಯಾವುದೇ ಭಾಗದಲ್ಲಿ ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ. ಯೋಜನೆಯ ನೋಂದಣಿಯು ಉಚಿತವಾಗಿದ್ದು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾರಂಭಗೊಂಡಿರುವ […]

ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಉದ್ಘಾಟನಾ ಕಾರ್ಯಕ್ರಮ

ಉಡುಪಿ: ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಉದ್ಘಾಟನಾ ಕಾರ್ಯಕ್ರಮವು ಸೆ.18 ಭಾನುವಾರದಂದು ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ  ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಂಕರಪುರ ಸಂತ ಜಾನ್ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮೋಹನ್ ದಾಸ್ ಆರ್ ಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂರ್ವ ಸ್ವಾಮ್ಯದ ವಾಹನ ವಿತರಕ ಸಂಘದ ಸಂಸ್ಥಾಪಕ ಉದಯ್ ಕಿರಣ್ ವಹಿಸಿದ್ದರು. ಉಡುಪಿ ಆರಕ್ಷಕ ಠಾಣೆಯ ಉಪಅಧೀಕ್ಷಕ ವಾಸಪ್ಪ ನಾಯಕ್, ಉಡುಪಿ ಟ್ರಾಫಿಕ್ ಪೊಲೀಸ್ ಎಸ್ ಐ ಅಬ್ದುಲ್ ಖಾದರ್ , ದಕ್ಷಿಣ ಕನ್ನಡ […]