ಕ್ವಾಂಟಾಸ್ ನ ಸಿಡ್ನಿ – ಬೆಂಗಳೂರು ಉದ್ಘಾಟನಾ ವಿಮಾನದ ಮೆನುವಿನಲ್ಲಿ ತುಳುನಾಡಿನ ಕೋರಿ ಗಸಿ!
ಉಡುಪಿ: ಆಸ್ಟ್ರೇಲಿಯಾ ಮೂಲದ ಕ್ವಾಂಟಾಸ್ ಏರ್‌ವೇಸ್ ಸೆಪ್ಟೆಂಬರ್ 14 ರಂದು ಬೆಂಗಳೂರಿನಿಂದ ಸಿಡ್ನಿಗೆ ಹೊಸ ವಿಮಾನವನ್ನು ಪ್ರಾರಂಭಿಸಿದೆ. ನಿನ್ನೆ ಸಂಜೆ 6.35ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕಾಫ್ ಆಗಿದ್ದು, ದಕ್ಷಿಣ ಭಾರತದಿಂದ ಆಸ್ಟ್ರೇಲಿಯಾಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ ಮೊದಲ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ನೇರ ವಿಮಾನವು ಬೆಂಗಳೂರಿನಿಂದ ಸಿಡ್ನಿಗೆ ತಲುಪಲು 11 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ಸಿಡ್ನಿಯಿಂದ ಹಿಂತಿರುಗುವ ವಿಮಾನ ಬುಧವಾರ ಸಂಜೆ 4.55ಕ್ಕೆ ಬೆಂಗಳೂರಿಗೆ ಬಂದಿಳಿಯಲಿದೆ.ಕ್ವಾಂಟಾಸ್ ಬೆಂಗಳೂರು-ಸಿಡ್ನಿಗೆ ಎ330 ವಿಮಾನವನ್ನು […]
ವಾರದೊಳಗೆ ಅಪಘಾತ ಪ್ರಕರಣಗಳ ಶಾಶ್ವತ ಪರಿಹಾರ ಕಾರ್ಯಗಳ ವರದಿ ಒಪ್ಪಿಸಿ: ಜಿಲ್ಲಾಧಿಕಾರಿ
ಉಡುಪಿ: ಜಿಲ್ಲೆಯಲ್ಲಿ ಈಗಾಗಲೇ 30 ಕ್ಕೂ ಹೆಚ್ಚು ಅಪಘಾತ ವಲಯಗಳನ್ನು ಗುರುತಿಸಲಾಗಿದ್ದು, ರಾಷ್ಟೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ತಾತ್ಕಾಲಿಕ ಸುರಕ್ಷತಾ ಸೌಕರ್ಯಗಳ ಕಾರ್ಯಗಳನ್ನು ಕೈಗೊಳ್ಳುವುದರಿಂದ ಮರಣ ಹೊಂದುವಂತಹ ಅಪಘಾತಗಳನ್ನು ತಪ್ಪಿಸಲು ಸಾಧ್ಯ. ಇದಕ್ಕೆ ಹೆಚ್ಚಿನ ಒತ್ತು ನೀಡಿ ಮುಂದಿನ ದಿನಗಳಲ್ಲಿ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ತೆಗೆದುಕೊಂಡ ಕಾರ್ಯಗಳ ಬಗ್ಗೆ ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರಕ್ಕೆ ಅನುಸರಣಾ ವರದಿಯನ್ನು ಒಂದು ವಾರದೊಳಗೆ ನೀಡಬೇಕೆಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಅಧಿಕಾರಿಗಳಿಗೆ […]
ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಕುಕ್ಕಿಕಟ್ಟೆ ನೇಮಕ
ಉಡುಪಿ: ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಅಬ್ದುಲ್ ಮುತಾಲಿ ಇವರು ಈಗಾಗಲೇ ಉಡುಪಿ ಜಿಲ್ಲಾ ವಕ್ಛ್ ಬೋರ್ಡಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಸೂಚನೆ ಮೇರೆಗೆ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿಯಿಂದ ವಿಮುಕ್ತಿಗೊಳಿಸಲಾಗಿದ್ದು, ರಿಕ್ತ ಸ್ಥಾನಕ್ಕೆ ಅಬ್ದುಲ್ ಖಾದರ್ ಕುಕ್ಕಿಕಟ್ಟೆ ಅವರನ್ನು ನೇಮಕ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕ್ಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.