ಫಾರ್ಚ್ಯೂನ್ ಆರೋಗ್ಯ ವಿಜ್ಞಾನ ಸಂಸ್ಥೆಯಲ್ಲಿ “ಆರಂಭಮ್ – 2022” ಓಣಂ ಸಾಂಸ್ಕೃತಿಕ ಕಾರ್ಯಕ್ರಮ

ಬ್ರಹ್ಮಾವರ: ಇಲ್ಲಿನ ಮಧುವನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾರ್ಚ್ಯೂನ್ ಆರೋಗ್ಯ ವಿಜ್ಞಾನಗಳ ಸಂಸ್ಥೆ ವತಿಯಿಂದ  ಓಣಂ ಹಬ್ಬದ ಅಂಗವಾಗಿ “ಆರಂಭಮ್ – 2022” ಸಾಂಸ್ಕೃತಿಕ ಕಾರ್ಯಕ್ರಮ  ಮಂಗಳವಾರದಂದು ಮದರ್ ಪ್ಯಾಲೇಸ್ ಆಡಿಟೋರಿಯಂನಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ಸಂಸ್ಥೆಯ ಪ್ರಾಂಶುಪಾಲೆ ಸ್ಮಿತಾ ಮಾತನಾಡಿ, ಓಣಂ ಎನ್ನುವುದು ಕೇರಳದಲ್ಲಿ ಚಕ್ರವರ್ತಿ ಬಲಿಯ ನೆನಪಿಗಾಗಿ ಆಚರಿಸುವ ಹಬ್ಬ. ಇದು ಕೇರಳದ ಸಂಸ್ಕೃತಿ, ಧಾರ್ಮಿಕತೆ ಮತ್ತು ಪರಂಪರೆಯನ್ನು ಬಿಂಬಿಸುವ ಈ ಹಬ್ಬಕ್ಕೆ ಬಹಳ ಮಹತ್ವ ಇದೆ. ಈ ಹಬ್ಬವನ್ನು ಆಚರಿಸುವ ಮೂಲಕ […]

ಏಕ ಬಳಕೆಯ ಪೆನ್ನುಗಳಿಂದ ಮುಕ್ತಿ ಪಡೆಯಲು ಮಾಹೆಯ ‘ರಿ-ಪೆನ್’ ಯೋಜನೆ 

ಮಣಿಪಾಲ: ಏಕ ಬಳಕೆಯ ಪೆನ್ನುಗಳ ಬಳಕೆಯನ್ನು ನಿರುತ್ಸಾಹಗೊಳಿಸುವ ಮತ್ತು ಮರುಪೂರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ‘ರಿ-ಪೆನ್’ ಎಂಬ ಸಿ. ಎಸ್. ಆರ್ ಪ್ರಾಯೋಜಿತ ಯೋಜನೆಯನ್ನು ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್ ಇವರು ಉದ್ಘಾಟಿಸಿದರು. ಈ ‘ರಿ-ಪೆನ್’ ಯೋಜನೆಯನ್ನು ಕೈಗೆತ್ತಿಕೊಳ್ಳಲು ಪುತ್ತೂರಿನ ಶ್ಯಾಮಾ ಜ್ಯುವೆಲ್ಸ್ ಪ್ರೈ. ಲಿ ಸಂಸ್ಥೆಯು ತನ್ನ ಸಿ. ಎಸ್. ಆರ್ ನಿಧಿಯಿಂದ ಆರ್ಥಿಕ ಸಹಾಯವನ್ನು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌ನ ಇಕೋ ಕ್ಲಬ್ ಗೆ ನೀಡಿದೆ. ಪರಿಸರದ ಉಳಿವಿಗಾಗಿ ಇಂಗಾಲಾಮ್ಲದ […]

ಸರಕಾರದಿಂದ ಕೊರಗ ಸಮುದಾಯಕ್ಕೆ ಅನ್ಯಾಯವಾದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು: ಡಾ.ಪಿ.ವಿ ಭಂಡಾರಿ

ಉಡುಪಿ: ನೈಲ ಬುಡಕಟ್ಟು ಕೊರಗ ಸಮುದಾಯಕ್ಕೆ ವೈದ್ಯಕೀಯ ವೆಚ್ಚ ಮರುಪಾವತಿ ಯೋಜನೆಯನ್ನು ಸರಕಾರವು ಕೈಬಿಡಲು ಯೋಜಿಸಿದ್ದು, ಇದನ್ನು ವಿರೋಧಿಸಿ ಡಾ ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಕೊರಗರ ಸಂಘದಿಂದ ಹಕ್ಕೊತ್ತಾಯ ಜಾಥಾ ಮತ್ತು ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪಿ.ವಿ.ಭಂಡಾರಿ, ಕೇಂದ್ರ ಸರಕಾರವು ಎರಡು ಅತ್ಯುತ್ತಮ ಯೋಜನೆಗಳಾದ ಜನೌಷಧಿ ಮತ್ತು ಅಯುಷ್ಮಾನ್ ಭಾರತ್ ಗಳನ್ನು ಜಾರಿಗೆ ತಂದಿದ್ದರೂ, ಸರಕಾರದಲ್ಲಿರುವ ಮೇಲಧಿಕಾರಿಗಳು ಈ ಯೋಜನೆಗಳ ಸಮರ್ಪಕ ಅನುಷ್ಠಾನ ಆಗಲು […]

ರಾಜ್ಯದಲ್ಲೇ ಪ್ರಥಮ: ತಂಬಾಕು ಮುಕ್ತ ವಸತಿ ಸಮುಚ್ಛಯಗಳಿಗಾಗಿ ಉಡುಪಿಯಲ್ಲಿ ಪೈಲಟ್ ಯೋಜನೆ

ಉಡುಪಿ: ತಂಬಾಕು ಉತ್ಪನ್ನಗಳನ್ನು ಪ್ರತ್ಯಕ್ಷವಾಗಿ ಬಳಸುವ ಜನರು ಅದರ ಪ್ರಾಥಮಿಕ ಬಳಕೆದಾರರಾದರೆ ಅವರ ಸಮೀಪದವರು ಪರೋಕ್ಷವಾಗಿ ಎರಡನೇ ಬಳಕೆದಾರರಾಗಿದ್ದಾರೆ. ಪ್ರತಿ ವರ್ಷ ವಿಶ್ವದ ಪ್ರಮುಖ ನಗರಗಳಲ್ಲಿ ಸಂಭವಿಸುವ ತಡೆಯಬಹುದಾದ ಸಾವುಗಳ ಪ್ರಮಾಣದಲ್ಲಿ ಇವರಿಗೆ 2 ನೇ ಸ್ಥಾನವಾಗಿದ್ದು, ಬಳಕೆದಾರರಿಗಿಂತಲೂ ಹೆಚ್ಚಿನ ಖಾಯಿಲೆಗಳು ಇವರಲ್ಲಿ ಕಾಣಿಸಿಕೊಳ್ಳುತ್ತವೆ. ಧೂಮಪಾನದಿಂದ 10 ಲಕ್ಷ ಸಾವುಗಳು ಸಂಭವಿಸಿದರೆ ಅದರಲ್ಲಿ 2 ಲಕ್ಷ ಮಂದಿ ಎರಡನೇ ಬಳಕೆದಾರರೇ ಆಗಿರುತ್ತಾರೆ. ಭಾರತದಲ್ಲಿ ಕಂಡುಬರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ. 27 ರಷ್ಟಕ್ಕೆ ತಂಬಾಕು ಬಳಕೆ ಕಾರಣವಾಗಿದೆ. ತಂಬಾಕು […]

ಸೆ 26 ರಿಂದ ಅಕ್ಟೋಬರ್ 5 ರವರೆಗೆ ಪ್ರಪ್ರಥಮ ಉಚ್ಚಿಲ ದಸರಾ-2022: 100 ಕ್ಕೂ ಅಧಿಕ ಟ್ಯಾಬ್ಲೋ ಪ್ರದರ್ಶನ 

ಉಚ್ಚಿಲ: ದ.ಕ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಆಡಳಿತಕ್ಕೊಳಪಟ್ಟ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಈ ವರ್ಷದಿಂದ ನವರಾತ್ರಿ ಉತ್ಸವ ಉಚ್ಚಿಲ ದಸರಾ -2022 ಅನ್ನು ಸೆ 26 ರಿಂದ ಅಕ್ಟೋಬರ್ 5 ರವರೆಗೆ ವಿಜೃಂಭಣೆಯಿಂದ ಆಚರಿಸಲಾಗುವುದು. ಅಕ್ಟೋಬರ್ 5 ರಂದು 100 ಅಧಿಕ ಟ್ಯಾಬ್ಲೋ ಗಳ ಮೂಲಕ ಭವ್ಯವಾದ ನವದುರ್ಗೆ ಹಾಗು ಶಾರದಾ ಮೂರ್ತಿಗಳ ಶೋಭಾಯಾತ್ರೆ ಉಚ್ಚಿಲ-ಎರ್ಮಾಳ್-ಪಡುಬಿದ್ರಿ-ಹೆಜಮಾಡಿ-ಪಡುಬಿದ್ರಿ-ಎರ್ಮಾಳ್-ಉಚ್ಚಿಲ-ಮೂಳೂರು ಮೂಲಕ ಸಾಗಿ ಕಾಪು ಸಮುದ್ರದಲ್ಲಿ ಜಲ ಸ್ಥಮ್ಭನ ಮಾಡಲಾಗುವುದು. ನವರಾತ್ರಿ ಉತ್ಸವದ ಸಮಯದಲ್ಲಿ ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ […]