ಮೊಳಹಳ್ಳಿ: ದೈಹಿಕ ಶಿಕ್ಷಣ ಶಿಕ್ಷಕ ಪಿ.ಟಿ. ಪ್ರಕಾಶ್ ಶೆಟ್ಟಿ ಬೆಳಗೋಡು ನಿಧನ

ಕುಂದಾಪುರ: ಮೊಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಿ.ಟಿ. ಪ್ರಕಾಶ್ ಶೆಟ್ಟಿ ಬೆಳಗೋಡು ಅನಾರೋಗ್ಯದಿಂದ ಸೋಮವಾರ ನಿಧನರಾದರು. ಪ್ರಕಾಶ್ ಶೆಟ್ಟಿ ಅವರು ಕ್ರೀಡಾ ಕಮೆಂಟರಿಗಳ ಮೂಲಕ ಪ್ರಸಿದ್ಧರಾಗಿದ್ದು, ಅವರು ವಾಲಿಬಾಲ್ ಆಟದ ಕಮೆಂಟರಿಗೆ ಕುಳಿತರೆಂದರೆ ಸ್ಟೇಡಿಯಂ ಸ್ಥಭ್ದವಾಗುತ್ತಿತ್ತು. ಅವರು ಹಲವಾರು ಕ್ರೀಡೋತ್ಸವಗಳನ್ನೂ ಸಂಘಟಿಸಿ ಯಶಸ್ವಿಯಾಗಿದ್ದರು. ಸ್ವತಃ ಕಲಾವಿದರಾಗಿದ್ದ ಪ್ರಕಾಶ್ ಶೆಟ್ಟಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನೂ, ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಿ ಏಕಪಾತ್ರಾಭಿನಯದ ಮೂಲಕ ಪ್ರಸಿದ್ಧರಾಗಿದ್ದರು. ಪ್ರಕಾಶ್ ಶೆಟ್ಟಿ ಅವರು ವಿಶ್ವ ಕಲಾ […]

ಮಲ್ಪೆ: ವಿವಾಹಿತ ಮಹಿಳೆ ನೇಣಿಗೆ ಶರಣು

ಮಲ್ಪೆ: ಆರ್ಥಿಕ ಸಂಕಷ್ಟದಿಂದ ಬೇಸತ್ತು ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡವೂರು ಕಾನಂಗಿ ಎಂಬಲ್ಲಿ ನಡೆದಿದೆ. ಕೊಡವೂರು ಕಾನಂಗಿಯ ನಿವಾಸಿ ಬೀನಾ ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಬೀನಾ ಅವರ ಪತಿ ಗುಂಡಿಬೈಲು ನಿವಾಸಿ ನಿತ್ಯಾನಂದ ಎಂಬವರು 9 ತಿಂಗಳ ಹಿಂದೆ ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾಲದ ಹೊರೆ ಬೀನಾ ಅವರ ಮೇಲೆ ಇದ್ದು, ಬೀನಾ ಅವರ ತಂದೆ ತಾಯಿ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಕರೆದುಕೊಂಡು ಹೋಗುವವರಿದ್ದರು, ಆದರೆ ಬೆಳಗ್ಗೆ […]

ಭಾರತೀಯ ಸೇನೆಗೆ ಅಸಾಧ್ಯವಾದುದು ಯಾವುದೂ ಇಲ್ಲ: ಸಿಂಧೂ ನದಿಗೆ ಸೇತುವೆ ಕಟ್ಟಿದ ಸಪ್ತ ಶಕ್ತಿ ಇಂಜಿನಿಯರ್ ಗಳ ಅಸಾಮಾನ್ಯ ಸಾಧನೆ

ಲಡಾಕ್: ಬಾನೆತ್ತರದ ಗಿರಿ ಶಿಖರದ ಮೇಲೆ, ಆಳವಾದ ಸಮುದ್ರ, ಕೊರಕಲು ಭೂಪ್ರದೇಶ, ದೊಡ್ಡ ಬಂಡೆಕಲ್ಲಿರಲಿ ಎಲ್ಲಿ ಬೇಕೆಂದರಲ್ಲಿ ಹೇಗೆ ಬೇಕೆಂದರೆ ಹಾಗೆ; ರಸ್ತೆ, ಸೇತುವೆ, ರೈಲ್ವೆ ಲೈನ್ ಹೀಗೆ ಭಾರತೀಯ ಸೇನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಭಾರತೀಯ ಸೇನೆಯು ಲಡಾಖ್‌ನಲ್ಲಿ ಸಿಂಧೂ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಿದೆ. ಸೇತುವೆಯು ಭಾರತೀಯ ಸೇನೆಯ ಪ್ರಭಾವಶಾಲಿ ಎಂಜಿನಿಯರಿಂಗ್ ಕೌಶಲ್ಯಗಳನ್ನು ಜಗತ್ತಿಗೆ ಪ್ರದರ್ಶಿಸುತ್ತಿದೆ. ಸಪ್ತ ಶಕ್ತಿ ಇಂಜಿನಿಯರ್ ಗಳು ನಿರ್ಮಾಣ ಮಾಡಿರುವ ಈ ಸೇತುವೆ ಇಂಜಿನಿಯರಿಂಗ್ ಲೋಕದ ಅದ್ಭುತವೆನಿಸಿದೆ. “ಸೇತುವೆ ಸವಾಲುಗಳು […]

ಅಮೃತ್ ಗಾರ್ಡನ್ ನಲ್ಲಿ ಲಯನ್ಸ್ ಕ್ಲಬ್ ಪ್ರಾಂತ್ಯ ಆರರ ಪ್ರಾಂತೀಯ ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ: ಪ್ರಪ್ರಥಮ ಬಾರಿಗೆ ಜಿಲ್ಲೆ 317 ಸಿ ಯಲ್ಲಿ ಪ್ರಾಂತ್ಯ ಆರರ ಪ್ರಾಂತೀಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾಂತ್ಯ ಅಧ್ಯಕ್ಷ ಲಯನ್ ಹರಿಪ್ರಸಾದ್ ರೈ ಅವರ ಮುಂದಾಳತ್ವದಲ್ಲಿ ನೆರವೇರಿತು. ಪ್ರಾಂತ್ಯದ ಎಲ್ಲಾ ಕ್ಲಬ್ಬುಗಳಿಗೆ ತಮ್ಮ ಪ್ರತಿಭೆಗಳನ್ನು ಪ್ರಸ್ತುತಪಡಿಸಲು ಇದೊಂದು ಒಳ್ಳೆಯ ಅವಕಾಶ, ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ಎಂದು ಜಿಲ್ಲಾ ಪ್ರಥಮ ಉಪಜಿಲ್ಲಾ ಗವರ್ನರ್ ಲಯನ್ ನೇರಿ ಕರ್ನೆಲಿಯೋ ಹೇಳಿದರು. ಅವರು ಅಮೃತ್ ಗಾರ್ಡನ್ ನಲ್ಲಿ ಸೆ.10 ರಂದು ನಡೆದ ಪ್ರಾಂತ್ಯ ಆರರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. […]

ಸೆಪ್ಟೆಂಬರ್ 15 ರಂದು ಎ.ಸಿ.ಸಿ.ಇ.ಎ ವತಿಯಿಂದ ಇಂಜಿನಿಯರ್ ಗಳ ದಿನಾಚರಣೆ

ಉಡುಪಿ: ಸಿವಿಲ್ ಇಂಜಿನಿಯರ್‌ ಸಲಹೆಗಾರ ಮತ್ತು ವಾಸ್ತುಶಿಲ್ಪಿಗಳ ಸಂಘದ ವತಿಯಿಂದ ಇಂಜಿನಿಯರ್ ಗಳ ದಿನ ಸೆಪ್ಟೆಂಬರ್ 15 ರಂದು ಸಂಜೆ 7 ಗಂಟೆಗೆ ಕಡಿಯಾಳಿಯಲ್ಲಿರುವ ಮಾಂಡವಿ ಟ್ರೇಡ್ ಸೆಂಟರಿನ ಮೂರನೇ ಮಹಡಿಯಲ್ಲಿ ಆಚರಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಸಿ.ಸಿ.ಇ.ಎಯ ಅಧ್ಯಕ್ಷ ಪಾಂಡುರಂಗ ಆಚಾರ್ ವಹಿಸಲಿದ್ದು, ದ.ಕ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಮಾಂಡವಿ ಬಿಲ್ಡರ್ಸ್ ಮತ್ತು ಡೆವೆಲಪರ್ಸ್ ನ ಎಂಡಿ ಡಾ.ಜೆರ್ರಿ ವಿನ್ಸೆಂಟ್ ಡೈಸ್ ಮತ್ತು ಸಂಘದ ಗೌರವಾಧ್ಯಕ್ಷ […]