ಕೆ.ಇ.ಬಿ ನಿವೃತ್ತ ಇಂಜಿನಿಯರ್ ಪ್ರಕಾಶಚಂದ್ರ ಕುಂದಾಪುರ ನಿಧನ

ಕಾರ್ಕಳ: ಕೆ.ಇ.ಬಿ.ಯ ನಿವೃತ್ತ ಎಕ್ಸೀಕೂಟಿವ್ ಇಂಜಿನಿಯರ್ ಪ್ರಕಾಶಚಂದ್ರ ಕುಂದಾಪುರ (74ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಮಣಿಪಾಲದ ಖಾಸಗಿ ಅಸ್ಪತ್ರೆಯಲ್ಲಿ ಸೆಪ್ಟೆಂಬರ್ 10 ರಂದು ರಾತ್ರಿ ನಿಧನರಾಗಿದ್ದಾರೆ. ಮತೃರು ಕಾರ್ಕಳದಲ್ಲಿ ಪ್ರಾಮಾಣಿಕ ಕೆಲಸದಿಂದ ಜನಮನ್ನಣೆ ಪಡೆದು ಜನಪ್ರಿಯರಾಗಿದ್ದರು. ಈ ಮೊದಲು ಕುಂದಾಪುರ ಮತ್ತು ಜೋಗಫಾಲ್ಸ್ ನಲ್ಲಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ

ಸ್ಕೂಟರ್ ಅಪಘಾತ: ಹಿರಿಯ ನಾಗರಿಕರಿಗೆ ಮೂಳೆ ಮುರಿತ

ಉಡುಪಿ: ತೆಂಕಪೇಟೆ ನಿವಾಸಿ ರವೀಂದ್ರ ಭಟ್ (63) ಎನ್ನುವವರು ಸೆಪ್ಟೆಂಬರ್ 08 ರಂದು ತನ್ನ ಸ್ಕೂಟರ್ ನಲ್ಲಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ತೆರಳಿದ್ದು, ಮರಳಿ ತನ್ನ ಮನೆಗೆ ಹೋಗುವಾಗ ಮಧ್ಯಾಹ್ನ 12:30 ಗಂಟೆ ಸುಮಾರಿಗೆ ಅಜ್ಜರಕಾಡು ಆಸ್ಪತ್ರೆಯ ಮುಂಭಾಗದ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಜೋಡುಕಟ್ಟೆ ಕಡೆಯಿಂದ ಬ್ರಹ್ಮಗಿರಿ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ಸವಾರರೊಬ್ಬರು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿ ರವೀಂದ್ರ ಭಟ್ ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ, ರವೀಂದ್ರ ಭಟ್ […]

ಉಡುಪಿ ಜ್ಞಾನಸುಧಾ ಕಾಲೇಜಿನಲ್ಲಿ ಉಚಿತ ನೀಟ್‌ ಲಾಂಗ್‌ ಟರ್ಮ್‌ ತರಬೇತಿ

  ಉಡುಪಿ: ಕಡಿಯಾಳಿ ನಾಗಬನ ಬಳಿಯ ಜ್ಞನಸುಧಾ ಕ್ಯಾಂಪಸ್‌ ನಲ್ಲಿ ನೀಟ್‌ 2023 ಲಾಂಗ್‌ ಟರ್ಮ್‌ ತರಬೇತಿ ಬಯಸುವ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೀಟ್‌-2022ರಲ್ಲಿ 450ಕ್ಕಿಂತ ಹೆಚ್ಚು ಅಂಕ ಪಡೆದಿದ್ದು ನೀಟ್‌-2023 ಬರೆಯುವ ಆಸಕ್ತ ವಿದ್ಯಾರ್ಥಿಗಳು ನೀಟ್‌ ಲಾಂಗ್‌ ಟರ್ಮ್‌ ಉಚಿತ ತರಬೇತಿಗೆ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನೀಟ್‌ 2022ರಲ್ಲಿ19 ವಿದ್ಯಾರ್ಥಿಗಳು ಜ್ಞಾನಸುಧಾ ಎಂಟ್ರೆನ್ಸ್‌ ಅಕಾಡೆಮಿಯ ಮೂಲಕ ಉಡುಪಿ ಜ್ಞಾನಸುಧಾದಲ್ಲಿ ನೀಟ್‌ಲಾಂಗ್‌ ಟರ್ಮ್‌ಗೆ ದಾಖಲಾತಿ ಹೊಂದಿದ್ದರು. ಇದರಲ್ಲಿ 10 ವಿದ್ಯಾರ್ಥಿಗಳು ಉಚಿತ […]

ರಾಜ್ಯದಲ್ಲಿ ಅರಣ್ಯ ವಿಸ್ತೀರ್ಣ ಪ್ರಮಾಣ ಹೆಚ್ಚಳ: ಡಿಎಫ್‌ಓ ಆಶೀಶ್ ರೆಡ್ಡಿ

ಉಡುಪಿ: ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ ಅರಣ್ಯ ವಿಸ್ತೀರ್ಣ ಪ್ರಮಾಣ ಹೆಚ್ಚಳವಾಗಿದ್ದು, ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು, ಪ್ರಮುಖವಾಗಿ ಅರಣ್ಯ ರಕ್ಷಕರು ಮತ್ತು ವೀಕ್ಷಕರ ದಕ್ಷ ಕಾರ್ಯನಿರ್ವಹಣೆಯಿಂದ ಇದು ಸಾಧ್ಯವಾಗಿದೆ ಎಂದು ಕುಂದಾಪುರ ವಿಭಾಗದ ಡಿಎಫ್ ಓ ಆಶೀಶ್ ರೆಡ್ಡಿ ಹೇಳಿದರು. ಅವರು ಉಡುಪಿಯ ಐ.ಎಂ.ಎ ಭವನದಲ್ಲಿ, ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿ ಸಂಘ, ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ ಉಡುಪಿ  ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ […]

ಹಿಂದೂ ಧರ್ಮ ರಕ್ಷಕ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಯ ಅರ್ಥಪೂರ್ಣ ಆಚರಣೆ ನಡೆಯಬೇಕು -ವಿಜಯ್ ಕೊಡವೂರು

ಕೊಡವೂರು: ನಾರಾಯಣ ಗುರುಗಳ 168ನೇ ಜಯಂತಿಯನ್ನು ಕೊಡವೂರು ವಾರ್ಡಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ನಾರಾಯಣ ಗುರುಗಳು ಕಷ್ಟದಿಂದ ಇನ್ನೊಬ್ಬರ ಕಷ್ಟಕ್ಕೆ ಉತ್ತರ ಕೊಟ್ಟವರು. ನಮ್ಮ ಕಷ್ಟಗಳನ್ನು ಅರಿತು ಅದಕ್ಕೆ ಉತ್ತರ ಕೊಡಬೇಕು ಎಂದು ಕೊಡವೂರಿನ ಮಕ್ಕಳ ಸಮಿತಿ ಯೋಚಿಸಿ ಗಣೇಶ ಚತುರ್ಥಿಯ ದಿನ ಹುಲಿವೇಷ ಹಾಕಿ ಬಂದಿರುವಂತಹ ಧನಾತ್ಮಕ ಶಕ್ತಿಯನ್ನು ದೀನರಿಗೆ / ದುರ್ಬಲರಿಗೆ / ಅಂಗವಿಕಲರಿಗೆ/ ನೀಡುವಂತಹ ಕೆಲಸವನ್ನು ನಾರಾಯಣ ಗುರು ಜಯಂತಿಯ ದಿನ ಆಚರಿಸಲಾಯಿತು. ಗುರುಗಳು ಹಿಂದೂ ಧರ್ಮದ ಅನೇಕ ಅಂಕುಡೊಂಕುಗಳನ್ನು ಸುಧಾರಿಸಿದರು. ಮತಾಂತರ ಆಗಿರುವವರನ್ನು […]