ವೈದ್ಯಕೀಯ ಗುಣಗಳಿರುವ ‘ಸ್ವರ್ಗದ ಹಣ್ಣಿನ’ ಬೀಜಗಳಿಂದ ವರ್ಷಕ್ಕೆ 2 ಲಕ್ಷ ಸಂಪಾದಿಸುವ ಕೇರಳದ ರೈತನ ಯಶೋಗಾಥೆ!

ಎರ್ನಾಕುಲಂ: 2018 ರಲ್ಲಿ ಕೇರಳದ ವೈಕೋಮ್‌ನ ಕಾರ್ಯಕ್ರಮವೊಂದರಲ್ಲಿ ಹೊರಭಾಗದಲ್ಲಿ ಮುಳ್ಳುಗಳನ್ನು ಹೊಂದಿರುವ ಹೊಳೆಯುವ ಕೆಂಪು-ಕಿತ್ತಳೆ ಬಣ್ಣದಲ್ಲಿರುವ ಕಲ್ಲಂಗಡಿ ಗಾತ್ರದ ಹಣ್ಣು, ಜೊಜೊ ಪುನ್ನಕಲ್ ಅವರ ಗಮನವನ್ನು ಸೆಳೆಯಿತು. ಹಣ್ಣಿನ ಬಗ್ಗೆ ಕುತೂಹಲಗೊಂಡು ಕೆಲವು ಬೀಜಗಳನ್ನು ಸಂಗ್ರಹಿಸಿ ಅದನ್ನು ತಮ್ಮ ತೋಟದಲ್ಲಿ ಬೆಳೆದ ಜೊಜೋ ಅವರು ಇಂದು ಅದರ ಬೀಜ ಮಾತ್ರದಿಂದಲೇ ವರ್ಷಕ್ಕೆ 2 ಲಕ್ಷ ರೂ ಸಂಪಾದನೆ ಮಾಡುತ್ತಿದ್ದಾರೆ! ಎರ್ನಾಕುಲಂನ ಜೋಜೋ ಪುನ್ನಕಲ್ ಅವರು ಕಳೆದ ನಾಲ್ಕು ವರ್ಷಗಳಿಂದ ವಿಯೆಟ್ನಾಂನ ವಿಲಕ್ಷಣ ಮತ್ತು ಪೌಷ್ಟಿಕಾಂಶಗಳುಳ್ಳ ಗ್ಯಾಕ್ ಹಣ್ಣನ್ನು […]

ಪಡಿತರ ಪಡೆಯಲು ಆಧಾರ್ ಬಯೋ ಮೆಟ್ರಿಕ್-ಓ.ಟಿ.ಪಿ ದ್ವಿ ದೃಢೀಕರಣ ಅಗತ್ಯ

ಉಡುಪಿ: ಭಾರತ ಸರ್ಕಾರದ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಮಂತ್ರಾಲಯದ ಆದೇಶದ ಮೇರೆಗೆ ಸೆಪ್ಟೆಂಬರ್ 2022 ಮಾಹೆಯಿಂದ ಅಂತ್ಯೋದಯ ಅನ್ನ (ಎ.ಎ.ವೈ) ಹಾಗೂ ಆದ್ಯತಾ (ಪಿ.ಎಚ್.ಎಚ್) ಪಡಿತರ ಚೀಟಿದಾರರು ಎನ್.ಎಫ್.ಎಸ್.ಎ ಮತ್ತು ಪಿ.ಎಂ.ಜೆ.ಕೆ.ವೈ ಯೋಜನೆಯ ಆಹಾರ ಧಾನ್ಯ ಪಡೆಯಲು ಪ್ರತ್ಯೇಕವಾಗಿ ಎರಡು ಬಾರಿ ಆಧಾರ್ ಆಧಾರಿತ ಬಯೋ ಮೆಟ್ರಿಕ್ / ಓ.ಟಿ.ಪಿ ದೃಢೀಕರಣದ ಮೂಲಕ ಪಡಿತರ ಪಡೆಯಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಶುಲ್ಕ ದೂರವಾಣಿ ಸಂಖ್ಯೆ 1967 ಅಥವಾ 14445 ನ್ನು ಸಂಪರ್ಕಿಸಬಹುದಾಗಿದೆ ಎಂದು […]

ಎಕ್ಸ್ಪರ್ಟ್ ಪದವಿ ಪೂರ್ವಕಾಲೇಜಿನ ನವೀಕೃತ ಕಚೇರಿ ಉದ್ಘಾಟನೆ

ಮಂಗಳೂರು: ಕೊಡಿಯಾಲ್‌ಬೈಲ್‌ ನಲ್ಲಿರುವ ಎಕ್ಸ್ಪರ್ಟ್ ಪದವಿ ಪೂರ್ವಕಾಲೇಜಿನ ನವೀಕೃತ ಕಚೇರಿಯನ್ನು ಮಂಗಳೂರಿನ ಖ್ಯಾತ ನೇತ್ರ ತಜ್ಞ ಡಾ.ವಿಷ್ಣುಪ್ರಭು ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯು ಕಳೆದ ಕೆಲವು ದಶಕಗಳಿಂದ ಉತ್ತಮ ಗುಣಮಟ್ಟದ ಮೌಲ್ಯಾತ್ಮಕ ಶಿಕ್ಷಣವನ್ನು ಕೊಡುವಲ್ಲಿ ಅಪಾರವಾದ ಪರಿಶ್ರಮ ಪಟ್ಟಿದೆ ಎಂದ ಅವರು, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ. ಎಲ್. ನಾಯಕ್ ಹಾಗೂ ಉಪಾಧ್ಯಕ್ಷೆ ಡಾ.ಉಷಾಪ್ರಭಾ ನಾಯಕ್‌ ರವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿಎಕ್ಸ್ಪರ್ಟ್ ಶಿಕ್ಷಣ […]

ಬೆಳ್ಮಣ್: ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ನಟ ವಿಜಯ ರಾಘವೇಂದ್ರ ಭಾಗಿ

ಬೆಳ್ಮಣ್: ಶನಿವಾರದಂದು ಇಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಚಿತ್ರ ನಟ ವಿಜಯ ರಾಘವೇಂದ್ರ ಭಾಗವಹಿಸಿದರು. ಈ ಸಂದರ್ಭದಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಅವರನ್ನು ಆದರದಿಂದ ಬರಮಾಡಿಕೊಂಡರು. ಬೆಳ್ಮಣ್ ಬಿಲ್ಲವರ ಸಂಘದ ವತಿಯಿಂದ ವಿಜಯ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ: ಬ್ರಹ್ಮಾವರ ಬೋರ್ಡ್ ಹೈಸ್ಕೂಲ್ ಗೆ ಪ್ರಥಮ ಸ್ಥಾನ

ಬ್ರಹ್ಮಾವರ: ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಉಡುಪಿ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸ.ಪ.ಪೂ.ಕಾಲೇಜು (ಬೋರ್ಡ್ ಹೈಸ್ಕೂಲ್) ಬ್ರಹ್ಮಾವರದ ವಿದ್ಯಾರ್ಥಿಗಳು ಅಭಿನಯಿಸಿದ, ರೋಹಿತ್ ಎಸ್ ಬೈಕಾಡಿ ನಿರ್ದೇಶನದ ‘ಸಾಂಕ್ರಾಮಿಕ ಅವಾಂತರ’ ನಾಟಕ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಉತ್ತಮ ನಾಟಕ ರಚನೆಕಾರ ಪ್ರಶಸ್ತಿ ಶಿಕ್ಷಕ ವರದರಾಜ್ ಬಿರ್ತಿಗೆ ಲಭ್ಯವಾಗಿದೆ. ವಿಭಾಗೀಯ ಮಟ್ಟದ ಸ್ಪರ್ಧೆ ಹಾಸನದಲ್ಲಿ ನಡೆಯಲಿದೆ.