ಪಡುಬಿದ್ರೆ: ರೋಟರಿ ಸಮುದಾಯದಳದ ಪದಪ್ರಧಾನ ಸಮಾರಂಭ
ಪಡುಬಿದ್ರೆ: ರೋಟರಿ ಕ್ಲಬ್ಬಿನ ಅಂಗಸಂಸ್ಥೆಯಾದ ಪಡುಬಿದ್ರೆ ರೋಟರಿ ಸಮುದಾಯದಳದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ರೋಟರಿ ಜಿಲ್ಲಾ ಉಪಸಭಾಪತಿ ರೋ. ಸಚ್ಚಿದಾನಂದ ನಾಯಕ್ ಅವರ ಉಪಸ್ಥಿತಿಯಲ್ಲಿ ನೆರವೇರಿತು. ಪದಪ್ರಧಾನ ಮಾಡಿ ಮಾತನಾಡಿದ ಅವರು, ರೋಟರಿಯ ವ್ಯಕ್ತಿತ್ವ ಬೆಳೆಸುವ ಕಾರ್ಯದಿಂದ ವ್ಯಕ್ತಿ ನಿರ್ಮಾಣ, ಜನಸೇವೆಯಿಂದ ಸಧೃಡ ಸಮಾಜ ನಿರ್ಮಾಣ, ಮತ್ತು ದಾನಿಗಳಿಂದ ಮನುಕುಲದ ಸಾಂತ್ವನಕಾರ್ಯ ನಿರಂತರವಾಗಿ ನಡೆಯುತ್ತಿದೆ. ಸಮುದಾಯದಳವು ರೋಟರಿಯ ಪ್ರತಿಬಿಂಬ. ನಮ್ಮ ಸರ್ವತೋಮುಖ ಬೆಳವಣಿಗೆಗೆ ರೋಟರಿ ಸಂಸ್ಥೆ ಸಹಕಾರಿ ಎಂದು ಹೇಳಿದರು. ವಲಯ 5ರ ಆರ್.ಸಿ.ಸಿ […]
ರಾಷ್ಟ್ರವ್ಯಾಪಿ ನಿದ್ರಾ ಸ್ಪರ್ಧೆಯಲ್ಲಿ ಗೆದ್ದು 5 ಲಕ್ಷ ರೂಪಾಯಿ ಬಹುಮಾನ ಪಡೆದ ತ್ರಿಪರ್ಣ ಚಕ್ರವರ್ತಿ
ಕೊಲ್ಕತ್ತಾ: ಇಲ್ಲಿನ ಹೂಗ್ಲಿಯಲ್ಲಿ ಸ್ಥಳೀಯ ಬಾಲಕಿಯೊಬ್ಬಳು ರಾಷ್ಟ್ರವ್ಯಾಪಿ ನಿದ್ರಾ ಸ್ಪರ್ಧೆಯಲ್ಲಿ ಗೆದ್ದು 5 ಲಕ್ಷ ರೂಪಾಯಿ ನಗದು ಬಹುಮಾನ ಪಡೆದಿದ್ದಾಳೆ. ಬಾಲ್ಯದಿಂದಲೂ ನಿದ್ರಿಸುವುದರಲ್ಲಿ ಎತ್ತಿದ ಕೈ ಹೊಂದಿದ್ದ ತ್ರಿಪರ್ಣ ಚಕ್ರವರ್ತಿ ಎನ್ನುವ ಹುಡುಗಿ, ಖಾಸಗಿ ಮ್ಯಾಟ್ರೆಸ್ ಕಂಪನಿ ನಡೆಸಿದ ಸ್ಪರ್ಧೆಯಲ್ಲಿ ದೇಶದ ಅತ್ಯುತ್ತಮ ನಿದ್ದೆಗಾರ್ತಿ ಆಗಿ ಹೊರಹೊಮ್ಮಿದ್ದಾಳೆ. ಸುಮಾರು 5.5 ಲಕ್ಷಕ್ಕೂ ಹೆಚ್ಚು ಸಹ ಸ್ಪರ್ಧಿಗಳನ್ನು ಸೋಲಿಸಿ ತ್ರಿಪರ್ಣ ಈ ಬಹುಮಾನ ಗೆದ್ದಿದ್ದಾಳೆ. ಸತತ 100 ದಿನಗಳ ಕಾಲ ದಿನಕ್ಕೆ 9 ಗಂಟೆಗಳ ಕಾಲ ನಿದ್ರಿಸುವುದು ಸ್ಪರ್ಧೆಯ […]
ಉಡುಪಿ: ಸೆ.8ರಂದು ಯುವ ವಿಕಲಚೇತನರಿಗಾಗಿ ಮಿನಿ ಉದ್ಯೋಗ ಮೇಳ
ಉಡುಪಿ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಉಡುಪಿ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆ ಇವರ ಸಹಯೋಗದಲ್ಲಿ ಯುವ ವಿಕಲಚೇತನರಿಗೆ ಮಿನಿ ಉದ್ಯೋಗ ಮೇಳವು ಸೆ.8ರಂದು ಬೆಳಗ್ಗೆ 10.30ಕ್ಕೆ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ 18ರಿಂದ 35 ವರ್ಷದೊಳಗಿನ ವಿಕಲಚೇತನ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್ ಹಾಗೂ ಆಧಾರ್ […]
ಮೌಲಾನ ಆಜಾದ್ ಮಾದರಿ ಶಾಲೆ: ಅತಿಥಿ ಶಿಕ್ಷಕರ ನೇಮಕಾತಿ
ಮಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಮೌಲಾನ ಆಜಾದ್ ಮಾದರಿ ಶಾಲೆಗೆ 2022-23ನೇ ಸಾಲಿಗೆ ಅತಿಥಿ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಕಲ್ಲಾಪು ಪಟ್ಲದ ಮೌಲಾನಾ ಆಜಾದ್ ಮಾದರಿ ಶಾಲೆಗೆ ವಿಜ್ಞಾನ ಮತ್ತು ಗಣಿತ ಶಿಕ್ಷಕರು ಹಾಗೂ ಉಳಾಯಿಬೆಟ್ಟು ಮೌಲಾನಾ ಆಜಾದ್ ಮಾದರಿ ಶಾಲೆಗೆ ಕನ್ನಡ ಮತ್ತು ವಿಜ್ಞಾನ ಶಿಕ್ಷಕರ ಅವಶ್ಯಕತೆ ಇರುವುದರಿಂದ ಸದರಿ ವಿಷಯಗಳಲ್ಲಿ ಬಿ.ಎ/ ಬಿ.ಎಡ್, ಬಿ.ಎಸ್ಸಿ/ ಬಿ.ಎಡ್ (ಪಿಸಿಎಂ/ಸಿಬಿ.ಝಡ್) ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ತಮ್ಮ ಬಯೋಡಾಟಾ ವನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ […]
ಮಕ್ಕಳ ಪ್ರತಿಭೆಗೆ ತಕ್ಕ ಪ್ರೋತ್ಸಾಹ ದೊರೆತಲ್ಲಿ ಶ್ರೇಷ್ಠ ಸಾಧಕರಾಗುವುದು ನಿಶ್ಚಿತ : ಡಾ. ಶಿವರಾಮ್ ಶೆಟ್ಟಿ ತಲ್ಲೂರು
ಉಡುಪಿ : ಇಂದು ಟಿವಿ, ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಮಕ್ಕಳ ಪ್ರತಿಭೆಗೆ ಹೆಚ್ಚಿನ ಅವಕಾಶ ಸಿಗುತ್ತಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ನೀಡಿದರೆ ಭವಿಷ್ಯದಲ್ಲಿ ದೇಶಕ್ಕೆ ಒಬ್ಬ ಶ್ರೇಷ್ಠ ಸಾಧಕನನ್ನು ನೀಡಿದಂತಾಗುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಶಿವರಾಮ ಶೆಟ್ಟಿ ತಲ್ಲೂರು ಹೇಳಿದರು. ಅವರು ಭಾನುವಾರ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ವತಿಯಿಂದ ಹಮ್ಮಿಕೊಂಡ ಕರ್ನಾಟಕ ಮಕ್ಕಳ ಸಮ್ಮೇಳನದ ಸಮಾರೋಪ […]