ಬ್ರಿಟನ್ ಪ್ರಧಾನಿ ಗಾದಿಯ ರೇಸ್ ನಲ್ಲಿ ರಿಷಿ ಸುನಕ್ ಅನ್ನು ಹಿಂದಿಕ್ಕಿ ಮೂರನೇ ಮಹಿಳಾ ಪ್ರಧಾನಿಯಾದ ಲಿಜ್ ಟ್ರಸ್

ಲಂಡನ್: ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ಸದಸ್ಯರು ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗಿ ಲಿಜ್ ಟ್ರಸ್ ಅವರನ್ನು ಆಯ್ಕೆ ಮಾಡಿದ್ದಾರೆ. ಬ್ರಿಟನ್ ನ ಪ್ರಧಾನಿ ರೇಸ್ ನಲ್ಲಿ ಮಾಜಿ ಚಾನ್ಸೆಲರ್ ರಿಷಿ ಸುನಕ್‌ ಕೂಡಾ ಇದ್ದರು. ಬ್ರಿಟನ್ ಗಂಭೀರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ಈ ಸಮಯದಲ್ಲಿ ಯಾರೇ ಪ್ರಧಾನಿಯಾದರೂ ಅದು ಮುಳ್ಳಿನ ಮೇಲಿನ ನಡಿಗೆಯಾಗಿರುತ್ತದೆ. ಪ್ರಧಾನಿ ಗಾದಿಗೆ ನಡೆದ ಚುನಾವಣೆಯಲ್ಲಿ 47 ವರ್ಷದ ಟ್ರಸ್, ಶೇಕಡಾ 57.4 ಮತಗಳನ್ನು ಗಳಿಸಿ ರಿಷಿ ಸುನಕ್‌ ವಿರುದ್ದ ಮೇಲುಗೈ ಸಾಧಿಸಿದರು. ಈಕೆ ಆರು […]

ಮಹಾನ್ ವ್ಯಕ್ತಿಗಳ ಜೀವನದಿಂದ ಸ್ಪೂರ್ತಿ ಪಡೆದು ಶಿಕ್ಷಕರು ಉತ್ತಮ ಸಮಾಜ ರೂಪಿಸಬೇಕು: ಎಸ್.ಅಂಗಾರ

ಉಡುಪಿ: ಡಾ. ಎಸ್.ರಾಧಾಕೃಷ್ಣನ್ ಸೇರಿದಂತೆ ಅನೇಕ ಹಿರಿಯ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಪಾಲನೆ ಮಾಡುವುದರೊಂದಿಗೆ ಶಿಕ್ಷಕರು ಉತ್ತಮ ಸಾಧನೆಗಳನ್ನು ಮಾಡಿ, ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಬೆಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು ಸೋಮವಾರ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ ಉಡುಪಿ ಜಿಲ್ಲೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ತಾಲೂಕು ಹಾಗೂ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣಾ ಸಮಿತಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ, ರಜತಾದ್ರಿಯ ಅಟಲ್ […]

ರಾಜ್ಯದಲ್ಲೇ ಪ್ರಥಮ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಉದ್ಘಾಟನೆ

ಉಡುಪಿ: ದೇಶದ ರಕ್ಷಣೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದ್ದು, ದೇಶಸೇವೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಮನೆಯಿಂದಲೂ ಕನಿಷ್ಠ ಒಬ್ಬರಾದರೂ ಸೈನಿಕ ಸೇವೆಗೆ ಸೇರ್ಪಡೆಗೊಳ್ಳುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು. ಅವರು ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕಿದಿಯೂರು ಹೋಟೆಲ್ ನ ಶೇಷಶಯನ ಹಾಲ್ ನಲ್ಲಿ ಆಯೋಜಿಸಿದ್ದ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸರ್ಕಾರ ಯುವಜನರನ್ನು ರಕ್ಷಣಾ ಪಡೆಗಳಲ್ಲಿ […]