ಗಾಯಕ ಪ್ರದೀಪ್ ಕುಕ್ಕುಡೆಯವರ ಹೇ ಶಿವನಂದನ ಭಕ್ತಿ ಗೀತೆ ಬಿಡುಗಡೆ

ಉಡುಪಿ: ಗಾಯಕ ಪ್ರದೀಪ್ ಆರ್ ಕುಕ್ಕುಡೆಯವರ ಸುಮಧುರ ಕಂಠದಲ್ಲಿ ಹೇ ಶಿವನಂದನ ಭಕ್ತಿ ಗೀತೆಯು ಆಗಸ್ಟ್ 31 ಗಣೇಶ ಚತುರ್ಥಿಯಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಸ್ವರಂ ಸ್ಟುಡಿಯೋ ಅಂಬಲಪಾಡಿ ಧ್ವನಿ ಮುದ್ರಣ ಹಾಗೂ ಅನಿಶ್ ಕೊಂಡಾಡಿ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ವಾಯಲಿನ್ ನಲ್ಲಿ ವೈಭವ್ ಪೈ ಮಣಿಪಾಲ್, ಹಾರ್ಮೋನಿಯಂನಲ್ಲಿ ಆಕಾಶ್ ಗುಜ್ಜರಬೆಟ್ಟು, ತಬಲಾದಲ್ಲಿ ಪ್ರಜ್ವಲ್ ಆಚಾರ್ಯ ಸಹಕಾರ ನೀಡಿದ್ದಾರೆ.
ಸೆಪ್ಟೆಂಬರ್ 4ರಂದು ಯಶಸ್ವಿ-ಭವಿಷ್ಯದ ಧ್ರುವತಾರೆ ವೃತ್ತಿ ಮಾರ್ಗದರ್ಶನ ಯೋಜನೆ ಉದ್ಘಾಟನೆ

ಉಡುಪಿ: ಇಂದಿನ ದಿನದಲ್ಲಿ ಶಿಕ್ಷಣ ಕ್ಷೇತ್ರದ ವಾಣಿಜ್ಯೀಕರಣ ನಡೆಯುತ್ತಿದ್ದು, ಬಡವರು ಉತ್ತಮ ಶಿಕ್ಷಣದ ಅವಕಾಶದಿಂದ ವಂಚಿತರಾಗುವಂತಹ ಪರಿಸ್ಥಿತಿ ಬಂದೊದಗಿದೆ. ಒಳ್ಳೆಯ ಅಂಕ ಪಡೆದು ಉನ್ನತ ಶಿಕ್ಷಣದ ಕನಸು ಕಾಣುವ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳ ಮಧ್ಯವರ್ತಿಗಳ ಕೈಗೆ ಸಿಲುಕಿ ಲಕ್ಷಾಂತರ ರೂಪಾಯಿ ವ್ಯಯ ಮಾಡುತ್ತಿರುವ ಘಟನೆಗಳು ಹಲವಿವೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಿಕ್ಸೂಚಿಯಾಗುವ ನಿಟ್ಟಿನಲ್ಲಿ ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘ ಮತ್ತು ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ […]
ಮೊದಲನೆ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇಕಡಾ 13.5 ರಷ್ಟು ಬೆಳವಣಿಗೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕ (ಕ್ಯೂ1)ದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 13.5 ರಷ್ಟು ಬೆಳವಣಿಗೆಯಾಗಿದೆ. ಬುಧವಾರ ಬಿಡುಗಡೆಯಾದ ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ತಾತ್ಕಾಲಿಕ ಅಂದಾಜಿನ ಪ್ರಕಾರ, 2022-23ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕ (ಕ್ಯೂ1)ದಲ್ಲಿ ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ವಲಯವು ಶೇಕಡಾ 4.5 ರಷ್ಟು ಏರಿಕೆಯಾಗಿದೆ. ಉತ್ಪಾದನಾ ವಲಯವು ಶೇಕಡಾ 4.8 ರಷ್ಟು ಮತ್ತು ನಿರ್ಮಾಣ ವಲಯವು ಶೇಕಡಾ 16.8 ರಷ್ಟು ಬೆಳವಣಿಗೆಯಾಗಿದೆ. ಪ್ರಸಾರಕ್ಕೆ ಸಂಬಂಧಿಸಿದ […]
ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐ.ಎನ್.ಎಸ್ ವಿಕ್ರಾಂತ್ ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ

ಕೊಚ್ಚಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿಸ್ವದೇಶಿ ವಿನ್ಯಾಸ ಮತ್ತು ನಿರ್ಮಿತ ಮೊದಲ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಗೆ ಚಾಲನೆ ನೀಡಲಿದ್ದಾರೆ. ಭಾರತೀಯ ನೌಕಾಪಡೆಯ ಆಂತರಿಕ ಯುದ್ಧನೌಕೆ ವಿನ್ಯಾಸ ಕಚೇರಿಯಿಂದ ವಿನ್ಯಾಸಗೊಳಿಸಲ್ಪಟ್ಟಿರುವ ಮತ್ತು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಿಂದ ನಿರ್ಮಿಸಲ್ಪಟ್ಟಿರುವ ಐ.ಎನ್.ಎಸ್ ವಿಕ್ರಾಂತ್ ಅನ್ನು ಅತ್ಯಾಧುನಿಕ ಯಾಂತ್ರೀಕೃತಗೊಂಡ ವೈಶಿಷ್ಟ್ಯಗಳೊಂದಿಗೆ ನಿರ್ಮಿಸಲಾಗಿದೆ ಮತ್ತು ಇದು ಭಾರತದ ಕಡಲ ಇತಿಹಾಸದಲ್ಲಿ ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ಹಡಗಾಗಿದೆ. ವಿಕ್ರಾಂತ್ ಕಾರ್ಯಾರಂಭದೊಂದಿಗೆ, ಭಾರತವು ಎರಡು ಕಾರ್ಯಾಚರಣೆಯ […]
ಜಿಲ್ಲೆಯಲ್ಲಿ ಸಂಭ್ರಮದ ಗಣೇಶೋತ್ಸವ

ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮೋಲ್ಲಾಸದ ಗಣೋಶೋತ್ಸವ ಜರುಗಿದ್ದು, ವಿವಿಧೆಡೆಯ ಗಣಪನ ಹಬ್ಬದ ದೃಶ್ಯಗಳು