ಗಣೇಶ ಚತುರ್ಥಿ ಆಚರಣೆ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವಾಭಾವಿ ಸಭೆ

ಉಡುಪಿ: ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೌರಿ ಗಣೇಶ ಚತುರ್ಥಿ ಸಂದರ್ಭದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕೂರ್ಮಾ ರಾವ್ ನೇತೃತ್ವದಲ್ಲಿ ಸಭೆ ನಡೆಯಿತು. ಜಿಲ್ಲೆಯಲ್ಲಿ ಆಗಸ್ಟ್ 31 ರಿಂದ ಆರಂಭವಾಗುವ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ವಿಸರ್ಜನೆ ಕಾರ್ಯಕ್ರಮಗಳಿಗೆ ಅಗತ್ಯ ಅನುಮತಿಗಳನ್ನು ನೀಡುವಾಗ ಕಂದಾಯ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಗಳ ನಡುವೆ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ […]
ಉನ್ನತಿ ಕೆರಿಯರ್ ಅಕಾಡೆಮಿಯಲ್ಲಿ ಬಿಎಫ್ಎಸ್ಐ ಐಟಿ ಎವಿಯೇಷನ್-ಟ್ರಾವೆಲ್ ಟೂರಿಸಂ ಕೋರ್ಸ್ ಗಳು

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿರುವ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಕಳೆದ 3 ವರ್ಷಗಳಲ್ಲಿ 3000ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಿರುತ್ತದೆ. ಇದೀಗ ಸಂಸ್ಥೆಯು ಖಚಿತ ಉದ್ಯೋಗಾವಕಾಶ ಹೊಂದಿರುವ ಬ್ಯಾಂಕಿಂಗ್ ಫೈನಾನ್ಶಿಯಲ್ ಕ್ಷೇತ್ರದ ಕೆವೈಸಿ- ಎಎಂಎಲ್, ಕಸ್ಟಮರ್ ಸರ್ವಿಸ್, ಡಿಜಿಟಲ್ ಬ್ಯಾಂಕಿಂಗ್ ಕೋರ್ಸ್ ಗಳನ್ನು, ಇನ್ಫಾರ್ಮೇಷನ್ ಟೆಕ್ನೋಲಜಿ ಕ್ಷೇತ್ರದಲ್ಲಿ ಫ್ರಂಟ್ ಎಂಡ್ ಡೆವಲಂಪ್ಮೆಂಟ್, ಬ್ಯಾಕ್ ಎಂಡ್ ಡೆವಲಂಪ್ಮೆಂಟ್, ಕ್ಲೌಡ್ ಕಂಪ್ಯೂಟಿಂಗ್ (ಫುಲ್ ಸ್ಟ್ಯಾಕ್ ಡೆವಲಪರ್) ಕೋರ್ಸ್ ಗಳನ್ನು, […]
ಕನ್ನರ್ಪಾಡಿ: ಆಗಸ್ಟ್ 31ರಿಂದ ಸೆಪ್ಟೆಂಬರ್ 4 ರವರೆಗೆ ಹದಿನೇಳನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಕಿನ್ನಿಮೂಲ್ಕಿ: ಕನ್ನರ್ಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಹದಿನೇಳನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಆಗಸ್ಟ್ 31 ಬುಧವಾರದಿಂದ ಸೆಪ್ಟೆಂಬರ್ 4 ರವಿವಾರದವರೆಗೆ ರಾ.ಹೆ 66 ಸ್ವಾಗತಗೋಪುರದ ಬಳಿಯ ಗಣಪತಿ ಮೈದಾನದ ಬಳಿ ಜರುಗಲಿರುವುದು.