ಮಂಗಳೂರು: “ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್” ಅಭಿಯಾನಕ್ಕೆ ಚಾಲನೆ

ಮಂಗಳೂರು: ತುಳು ಬಾಷೆಗೆ ಮಾನ್ಯತೆ ಸಿಗಬೇಕು ಮತ್ತು ತುಳು ಭಾಷೆಯನ್ನು 8 ನೇ ಪರಿಚ್ಚೇದಕ್ಕೆ ಸೇರಿಸಬೇಕು ಎಂಬ ತುಳುವರ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಪೋಸ್ಟ್ ಕಾರ್ಡ್ ಮೂಲಕ ತಿಳಿಸುವ ವಿಭಿನ್ನ ಯೋಜನೆಯನ್ನು ತುಳುವೆರ್ ಕುಡ್ಲ ತುಳು ಸಂಘಟನೆ, ತುಳುನಾಡು ವಾರ್ತೆ ವಾರ ಪತ್ರಿಕೆ ಮತ್ತು ನಮ್ಮ ಟಿ.ವಿ ಸಹಯೋಗದಲ್ಲಿ ಸೆಪ್ಟೆಂಬರ್ 1 ಗುರುವಾರದಂದು ತುಳುನಾಡಿನ ತುತ್ತ ತುದಿಯಾದ ಬೆಳ್ತಂಗಡಿ ತಾಲೂಕಿನ ಬಂಜಾರು ಮಲೆ ಎಂಬ ಪ್ರದೇಶದಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಈ ಅಭಿಯಾನವು 1 ಲಕ್ಷಕ್ಕೂ ಅಧಿಕ […]

ಗಣೇಶ ಹಬ್ಬದ ಪ್ರಯುಕ್ತ ಚಿಣ್ಣರ ಹುಲಿವೇಷ

ಕೊಡವೂರು: ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿಗೆ ಸಹಕಾರವಾಗಿ ಗಣೇಶ ಹಬ್ಬದ ಪ್ರಯುಕ್ತ ಚಿಣ್ಣರ ಹುಲಿವೇಷವನ್ನು ಆಗಸ್ಟ್ 31 ಗಣೇಶ ಹಬ್ಬದ ದಿನದಂದು ಆಯೋಜಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ದಿವ್ಯಾಂಗರ ರಕ್ಷಣೆಗೆ, ದುರ್ಬಲರಿಗೆ, ಕ್ಯಾನ್ಸರ್ ಪೀಡಿತರಿಗೆ, ಔಷಧೀಯ ವೆಚ್ಚಕ್ಕಾಗಿ ಕೊಡವೂರು ಮಕ್ಕಳ ಸಮಿತಿಯು ಹುಲಿ ವೇಷದ ಮೂಲಕ ನಿಮ್ಮ ಮುಂದೆ ಬರಲಿದ್ದಾರೆ. ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ…. ಹರೀಶ್ ಕೊಪ್ಪಲ್ ತೋಟ, ಅಧ್ಯಕ್ಷರು ದಿವ್ಯಾಂಗ ರಕ್ಷಣಾ ಸಮಿತಿ ಹಾಗೂ ವಿಜಯ್ ಕೊಡವೂರು, ನಗರ ಸಭಾ ಸದಸ್ಯರು. ಗೂಗಲ್ ಪೇ 9743491112

ದೀಪಾವಳಿ ವೇಳೆಗೆ ನಾಲ್ಕು ಮೆಟ್ರೋ ನಗರಗಳಲ್ಲಿ 5ಜಿ ಸೇವೆ: ಅಮೇರಿಕಾದ ತಂತ್ರಜ್ಞಾನ ದೈತ್ಯರೊಂದಿಗೆ ರಿಲಯನ್ಸ್ ಜಿಯೋ ಪಾಲುದಾರಿಕೆ

ರಿಲಯನ್ಸ್ ಜಿಯೋ ಭಾರತದ ಪ್ರಮುಖ ಮೆಟ್ರೋ ನಗರಗಳಲ್ಲಿ ದೀಪಾವಳಿಯ ವೇಳೆಗೆ 5ಜಿ ಸೇವೆಗಳನ್ನು ಹೊರತರಲು ಮೆಟಾ, ಗೂಗಲ್, ಮೈಕ್ರೋಸಾಫ್ಟ್ ಮತ್ತು ಇಂಟೆಲ್‌ನಂತಹ ವಿಶ್ವದ ಕೆಲವು ಪ್ರಮುಖ ತಂತ್ರಜ್ಞಾನ ದೈತ್ಯರೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ತಲ್ಲೀನತೆಯ ತಂತ್ರಜ್ಞಾನಕ್ಕಾಗಿ ಕಂಪನಿಯು, ಮಾರ್ಕ್ ಜುಕರ್‌ಬರ್ಗ್ ನೇತೃತ್ವದ ಮೆಟಾ ( ಫೇಸ್‌ಬುಕ್) ಜೊತೆ ಪಾಲುದಾರಿಕೆ ಹೊಂದಿದ್ದರೆ, ಕೈಗೆಟುಕುವ ದರದ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಅಭಿವೃದ್ಧಿಪಡಿಸಲು ಗೂಗಲ್ ನೊಂದಿಗೆ ಸಹಯೋಗ ಹೊಂದಿದೆ. ತನ್ನ ಲಕ್ಷಾಂತರ ಬಳಕೆದಾರರಿಗೆ ಕ್ಲೌಡ್-ಸಕ್ರಿಯಗೊಳಿಸಿದ ಅಪ್ಲಿಕೇಶನ್‌ಗಳು ಮತ್ತು ಪರಿಹಾರಗಳ ರೋಮಾಂಚಕ ಪರಿಸರ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು […]

ಕದಳಿ ಮಹಿಳಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ವಚನ ದಿನ ಆಯೋಜನೆ

ಕಾರ್ಕಳ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಇದರ ಕಾರ್ಕಳ ತಾಲೂಕು ಘಟಕ ಹಾಗೂ ಕದಳಿ ಮಹಿಳಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಆ.29 ರಂದು ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಜಯಂತಿ ಪ್ರಯುಕ್ತ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕೈರಬೆಟ್ಟುವಿನಲ್ಲಿ ಮಕ್ಕಳಿಗೆ ವಚನಗಳಲ್ಲಿ ನಿಸರ್ಗದ ಪರಿಕಲ್ಪನೆ – ವಚನಸ್ಪರ್ಧೆ – ಗಾಯನ ಮತ್ತು ಅದರ ವಿಶ್ಲೇಷಣೆ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು. ಸುಮಾರು 20 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕದಳಿ ಮಹಿಳಾ […]

ಅಗ್ನಿಪಥ್‌ಗೆ ಪೂರಕವಾದ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಉದ್ಘಾಟನೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಅಗ್ನಿಪಥ್‌ಗೆ ಪೂರಕವಾದ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಉಡುಪಿ ಇದರ ಉದ್ಘಾಟನಾ ಸಮಾರಂಭ ಹಾಗೂ ಅರ್ಹತಾ ಪತ್ರ ವಿತರಣೆ ಕಾರ್ಯಕ್ರಮವು ಸೆಪ್ಟಂಬರ್ 5 ರಂದು ಮಧ್ಯಾಹ್ನ 2.30 ಕ್ಕೆ ಉಡುಪಿ ಕಿದಿಯೂರು ಹೋಟೆಲ್‌ನ ಶೇಷಶಯನ ಹಾಲ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಭಾರತ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ […]