ಮಿಸ್ ಇಂಗ್ಲೆಂಡ್ ಸೌಂದರ್ಯ ಸ್ಪರ್ಧೆಯಲ್ಲಿ ಮೇಕ್ಅಪ್ ಇಲ್ಲದೆ ಫೈನಲ್ ಪ್ರವೇಶಿಸಿದ ಮೆಲಿಸಾ ರೌಫ್

ಲಂಡನ್: ಲಂಡನ್‌ನ ಮೆಲಿಸಾ ರೌಫ್ ಎಂಬ 20 ವರ್ಷದ ಯುವತಿ ಇತಿಹಾಸ ಸೃಷ್ಟಿಸಿದ್ದಾಳೆ. ರೌಫ್ ಮಿಸ್ ಇಂಗ್ಲೆಂಡ್ ಸ್ಪರ್ಧೆಯಲ್ಲಿ ಮೇಕ್ಅಪ್ ಇಲ್ಲದೆ ರ‍್ಯಾಂಪ್ ವಾಕ್ ಮಾಡಿದ ಮೊದಲ ಸ್ಪರ್ಧಿಯಾಗಿದ್ದಾರೆ. ಅವರೀಗ ಅಕ್ಟೋಬರ್ 17 ರಂದು ಫೈನಲ್‌ನಲ್ಲಿ 40 ಇತರ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಲಿದ್ದಾರೆ. ಒಬ್ಬರು ತಮ್ಮ ಸ್ವಂತ ಚರ್ಮದಲ್ಲಿ (ತಾವು ಇರುವ ರೀತಿಯಲ್ಲಿ)ಸಂತೋಷವಾಗಿದ್ದಲ್ಲಿ ನಮ್ಮ ಮುಖವನ್ನು ಮೇಕ್ಅಪ್‌ನಿಂದ ಮುಚ್ಚಿಕೊಳ್ಳಬಾರದು ಎಂದೆನ್ನುತ್ತಾರೆ ಮೆಲಿಸಾ. ರಾಜ್ಯಶಾಸ್ತ್ರದ ವಿದ್ಯಾರ್ಥಿನಿಯಾಗಿರುವ ಮೆಲಿಸಾ, ಇತರ ಮಹಿಳೆಯರು ಮತ್ತು ಯುವತಿಯರು ತಮ್ಮ ನೈಸರ್ಗಿಕ ಸೌಂದರ್ಯವನ್ನು ಅನಾವರಣಗೊಳಿಸುವಂತೆ ಅವರನ್ನು […]

ಪ್ರಿಯದರ್ಶಿನಿ ಕೋ.ಆಪರೇಟಿವ್ ಸೊಸೈಟಿಯ ಪಡುಬಿದ್ರೆ ಶಾಖೆ ಉದ್ಘಾಟನೆ

ಪಡುಬಿದ್ರೆ: ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ.ಆಪರೇಟಿವ್ ಸೊಸೈಟಿಯ ಉಡುಪಿ ಜಿಲ್ಲೆಯ ಪ್ರಥಮ ಶಾಖೆಯನ್ನು ಪಡುಬಿದ್ರಿ ಶ್ರೀ ಮಹಾ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ತೆರೆಯಲಾಯಿತು. ನೂತನ ಶಾಖೆಯನ್ನು ಉದ್ಘಾಟಿಸಿದ ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಮಾತನಾಡಿ, ಹಳೆಯಂಗಡಿಯ ಭೀಷ್ಮ ದಿ.ನಾರಾಯಣ ಸನಿಲ್ ರವರ ಆದರ್ಶಗಳ ಮೂಲಕ ಪ್ರಾರಂಭಗೊಂಡ ಪ್ರಿಯದರ್ಶಿನಿ ಕೊ.ಆಪರೇಟಿವ್ ಸೊಸೈಟಿ ಪ್ರಾಮಾಣಿಕತೆಯ ಸೇವೆ ನೀಡುವ ಮೂಲಕ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ […]

ಮರಗಳ ತೆರವು: ಸೆಪ್ಟಂಬರ್ 3 ರಂದು ಕಾರ್ಕಳ ಅರಣ್ಯಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸಭೆ

ಉಡುಪಿ: ಹೆಬ್ರಿ ತಾಲೂಕು ವರಂಗ ಗ್ರಾಮದ ಕಾಡುಹೊಳೆ ಸೇತುವೆಯಿಂದ ಚಟ್ಕಲ್ ಪಾದೆ ಜಂಕ್ಷನ್‌ವರೆಗೆ ಹಾಗೂ ಕಾರ್ಕಳ ತಾಲೂಕು ಕಡ್ತಲ ಗ್ರಾಮದ ಕೈಕಂಬದಿಂದ ದೊಂಡೆರಂಗಡಿಯವರೆಗೆ ದ್ವಿಪಥ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಚಣೆಯಾಗುವ 236 ಮರಗಳನ್ನು ತೆರವುಗೊಳಿಸುವ ಹಿನ್ನೆಲೆ, ಸೆಪ್ಟಂಬರ್ 3 ರಂದು ಮಧ್ಯಾಹ್ನ 3 ಗಂಟೆಗೆ ಕಾರ್ಕಳ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಯಲಿದೆ. ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಸಭೆಯಲ್ಲಿ ಹಾಜರಾಗಿ ಅಥವಾ ಸಭೆ ನಡೆಯುವ ದಿನಾಂಕದ ಒಳಗೆ ವೃಕ್ಷ ಅಧಿಕಾರಿ ಹಾಗೂ ಉಪ […]

ಜೆನೆಕ್ಸ್ಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪರಿಸರ ಸ್ನೇಹಿ ಗಣೇಶನ ಮೂರ್ತಿ ವಿತರಣೆ

ಉಡುಪಿ: ಜೆನೆಕ್ಸ್ಟ್ ಚಾರಿಟೇಬಲ್ ಟ್ರಸ್ಟ್ ಮತ್ತು ಭಾರತಿನಗರ ನಿವಾಸಿಗಳ ವೇದಿಕೆ ವತಿಯಿಂದ ವಿನೂತನ ರೀತಿಯಲ್ಲಿ ಗಣೇಶನ ಹಬ್ಬವನ್ನು ಆಚರಿಸಲಾಗುತ್ತಿದ್ದು, ಮಣ್ಣಿನ ಮತ್ತು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸ್ಥಳದಲ್ಲೇ ಅಚ್ಚು ಮಾಡಿ ಮಕ್ಕಳಿಗೆ ವಿತರಿಸಲಾಗುವುದು.  

ನೋಯ್ಡಾದಲ್ಲಿ ಕೆಡವಲಾದ ಅವಳಿ ಕಟ್ಟಡಗಳ ಜಾಗದಲ್ಲಿ ಬರಲಿದೆ ಗ್ರೀನ್ ಬೆಲ್ಟ್ ಯೋಜನೆ

ನೋಯ್ಡಾ: ಭಾನುವಾರದಂದು ನೋಯ್ಡಾದಲ್ಲಿ ಕೆಡವಲಾದ ಸೂಪರ್‌ಟೆಕ್ ಅವಳಿ ಕಟ್ಟಡಗಳ ಜಾಗದಲ್ಲಿ ಗ್ರೀನ್ ಬೆಲ್ಟ್ ಯೋಜನೆ ಬರಲಿದೆ ಎನ್ನಲಾಗಿದೆ. ನೋಯ್ಡಾದಲ್ಲಿ ಎಮರಾಲ್ಡ್ ಕೋರ್ಟ್ ಯೋಜನೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ಕೆಡವಿದ್ದರಿಂದ ಕಟ್ಟಡ ನಿರ್ಮಾತೃ ಸೂಪರ್‌ಟೆಕ್‌ಗೆ ಸುಮಾರು 1,000 ಕೋಟಿ ರೂಪಾಯಿ ನಷ್ಟವಾಗಿದೆ. 70 ಕೋಟಿಯಲ್ಲಿ ನಿರ್ಮಾಣವಾದ ಕಟ್ಟಡವನ್ನು ನೆಲಸಮಗೊಳಿಸಲು ಸುಮಾರು 21 ಕೋಟಿ ರೂ. ವೆಚ್ಚವಾಗಿದೆ. ಕಟ್ಟಡ ನಿರ್ಮಾಣಕ್ಕೆ 13 ವರ್ಷಗಳು ತಗಲಿದ್ದರೆ ಕೇವಲ 9 ಸೆಕೆಂಡ್ ಗಳಲ್ಲಿ 32 ಮತು 29 ಮಹಡಿಯ ಕಟ್ಟಡಗಳನ್ನು ಕೆಡವಲಾಗಿದೆ. ಅವಳಿ […]