ತ್ರಿಶಾ ವಿದ್ಯಾ ಕಾಲೇಜಿನ ವತಿಯಿಂದ ರಕ್ತದಾನ ಶಿಬಿರ

ಉಡುಪಿ: ತ್ರಿಶಾ ವಿದ್ಯಾ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕ ಮತ್ತು ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕುಂದಾಪುರ ಇದರ ಸಹಯೋಗದಲ್ಲಿ ರಕ್ತದಾನ ಶಿಬಿರವು ಕಾಲೇಜಿನ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿಎ ಗೋಪಾಲಕೃಷ್ಣ ಭಟ್ ರಕ್ತದಾನ ಎನ್ನುವುದು ಜೀವ ಉಳಿಸುವ ಪ್ರಕ್ರಿಯೆಯಾಗಿದ್ದು, ಇಂತಹ ಶಿಬಿರಗಳು ಜನರಲ್ಲಿ ಮಾನವೀಯತೆಯನ್ನು ವೃದ್ಧಿಗೊಳಿಸುತ್ತವೆ ಎಂದರು. ಕಾರ್ಯಕ್ರಮದ ಅತಿಥಿಗಳಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಚೇರ್ಮನ್ ಎಸ್.ಜಯಕರ […]

ಆಪದ್ಭಾಂದವರಂತಿರುವ ಆಟೋ ರಿಕ್ಷಾ ಚಾಲಕರಿಗೂ ಆರ್ಥಿಕ ರಕ್ಷಣೆಯ ಅಗತ್ಯವಿದೆ: ವಿನಯ್ ಕುಮಾರ್ ಸೊರಕೆ

ಮಣಿಪಾಲ: ಹಗಲು ರಾತ್ರಿ ಎನ್ನದೆ ದುಡಿಯುವ, ಯಾವುದೇ ಸಮಯದ ಆಪತ್ತಿನಲ್ಲಿಯೂ ಸಹಾಯಕ್ಕೆ ಬರುವ ಆಟೋ ರಿಕ್ಷಾ ಚಾಲಕರು ಆಪದ್ಭಾಂದವರಿದ್ದಂತೆ. ಹೊತ್ತಲ್ಲದ ಹೊತ್ತಿನಲ್ಲಿಯೂ ನಮ್ಮ ಸಹಾಯಕ್ಕಾಗುವ ಆಟೋ ರಿಕ್ಷಾ ಚಾಲಕರಿಗೂ ಆರ್ಥಿಕ ರಕ್ಷಣೆ ಬೇಕು. ಈ ನಿಟ್ಟಿನಲ್ಲಿ ಆಟೋ ರಿಕ್ಷಾ ನಿರ್ವಾಹಕರ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯು  ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು. ಅವರು ಭಾನುವಾರ ಮಣಿಪಾಲದ ಬಾಳಿಗಾ ಹೋಟೇಲ್ ಬಳಿ ಆಟೋ ನಿರ್ವಾಹಕರ ಸಹಕಾರಿ ಸಂಘದ ನೂತನ ಹವಾನಿಯಂತ್ರಿತ ಸ್ವಂತ […]

ಕಿನ್ನಿಮೂಲ್ಕಿ: ಬಡ ಮೀನುಗಾರರ ತಾತ್ಕಾಲಿಕ ಶೆಡ್ ಏಕಾಏಕಿ ತೆರವು; ನಗರಸಭೆ ನಡೆಗೆ ಸಾರ್ವಜನಿಕರಿಂದ ಆಕ್ರೋಶ

ಉಡುಪಿ: ಉಡುಪಿ ನಗರಸಭೆಯ ಅಮಾನವೀಯ ನಡವಳಿಕೆಯಿಂದಾಗಿ ಕಿನ್ನಿಮೂಲ್ಕಿ ಪರಿಸರದ ಮೀನುಗಾರರು ಬವಣೆ ಅನುಭವಿಸುವಂತಾಗಿದೆ. ಅಕ್ರಮ ನಿರ್ಮಾಣದ ನೆಪದಲ್ಲಿ ಕಿನ್ನಿಮೂಲ್ಕಿ ಪರಿಸರದಲ್ಲಿರುವ ಮೀನುಗಾರರ ತಾತ್ಕಾಲಿಕ ಶೆಡ್ ಅನ್ನು ಏಕಾಏಕಿ ತೆರವುಗೊಳಿಸಿದ್ದು, ನಗರಸಭೆಯ ಈ ನಡೆಗೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಉಡುಪಿಯ ಸ್ವಾಗತ ಗೋಪುರದ ದ್ವಾರದ ಬಳಿ ಬಡ ಮೀನುಗಾರರು ನಾಲ್ಕು ದಶಕಗಳಿಂದ ಮೀನು ಮಾರಾಟ ನಡೆಸುತ್ತಿದ್ದು, ಮಳೆ-ಬಿಸಿಲಿನಿಂದ ರಕ್ಷಣೆಗಾಗಿ ಶೆಡ್ ನಿರ್ಮಿಸಿಕೊಡುವಂತೆ ನಗರಸಭೆಗೆ ಅಹವಾಲು ಮಾಡಿದ್ದರೂ ಕ್ಯಾರೇ ಅನ್ನದ ಅಧಿಕಾರಿಗಳ ನಡೆಗೆ ಬೇಸತ್ತು, ಸ್ಥಳೀಯ ನಗರಸಭಾ ಸದಸ್ಯೆ ತನ್ನ […]