ಮಣಿಪಾಲ: ಲಕ್ಷ್ಮೀಂದ್ರ ನಗರದಲ್ಲಿ ಈಸಿ ಬೈ ನೂತನ ಮಳಿಗೆ ಉದ್ಘಾಟನೆ

ಮಣಿಪಾಲ: ಇಲ್ಲಿನ ಲಕ್ಷ್ಮೀಂದ್ರ ನಗರದಲ್ಲಿ ದುಬೈನ ಲ್ಯಾಂಡ್‍ಮಾರ್ಕ್ ಗ್ರೂಪ್ ನ ಬಟ್ಟೆ ಮಳಿಗೆ ಈಸಿ ಬೈ ನ ನೂತನ ಶಾಖೆ ಶುಭಾರಂಭಗೊಂಡಿದೆ. ಕರ್ನಾಟಕದಲ್ಲಿ ಇದು ಈಸಿ ಬೈ ನ 25ನೇ ಮಳಿಗೆ ಮತ್ತು ದೇಶದಲ್ಲಿ 125 ನೇ ಮಳಿಗೆಯಾಗಿದೆ. ಈ ವಿಶಾಲವಾದ ಮಳಿಗೆಯು 8000 ಚದರಡಿ ವಿಸ್ತೀರ್ಣವನ್ನು ಹೊಂದಿದ್ದು, ಇಡೀ ಕುಟುಂಬ ಬಯಸುವ ಅತ್ಯಾಧುನಿಕ ವಸ್ತ್ರಗಳನ್ನು ಒದಗಿಸುತ್ತದೆ. ಇಲ್ಲಿ ಪುರುಷರ, ಮಹಿಳೆಯರ ಮತ್ತು ಮಕ್ಕಳ ಉಡುಪುಗಳ ಪ್ರತ್ಯೇಕ ವಿಭಾಗಗಳನ್ನು ಹೊಂದಿದ್ದು, ಪ್ರತಿಯೊಬ್ಬರಿಗೂ ಬೇಕಾದ ಅಗತ್ಯ ವಸ್ತುಗಳು ಒಂದೇ […]

ಸಿವಿಲ್ ಇಂಜಿನಿಯರ್ ಗಳ ವೃತ್ತಿಪರ ಒಕ್ಕೂಟದ ಸ್ಥಾಪಕಾಧ್ಯಕ್ಷರಾಗಿ ಜೀವನ್ ಶೆಟ್ಟಿ ಆಯ್ಕೆ

ಮೂಲ್ಕಿ: ತಾಲೂಕು ವ್ಯಾಪ್ತಿಯ ಸಿವಿಲ್ ಇಂಜಿನಿಯರ್ ಗಳ ವೃತ್ತಿಪರ ಒಕ್ಕೂಟ ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿ ಇದರ ಸ್ಥಾಪಕ ಅಧ್ಯಕ್ಷರಾಗಿ ಜೀವನ್ ಕೆ ಶೆಟ್ಟಿ ಇವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಾಧಿಕ್ ಅಲಿ, ಕಾರ್ಯದರ್ಶಿಯಾಗಿ ಸುಜಿತ್ ಎಸ್ ಸಾಲ್ಯಾನ್, ಜತೆ ಕಾರ್ಯದರ್ಶಿಯಾಗಿ ವರುಣ್, ಕೋಶಾಧಿಕಾರಿಯಾಗಿ ನವೀನ್ ಪಿರೇರಾ ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ಅನೂಪ್ ಕುಮಾರ್ ಶೆಟ್ಟಿ, ಕೆ.ಹರಿಶ್ಚಂದ್ರ, ಚರಣ್ ಕುಮಾರ್ ಮುಂತಾದವರು ಆಯ್ಕೆಯಾಗಿದ್ದಾರೆ. ಹೊಸದಾಗಿ ಘೋಷಣೆಯಾದ ಮೂಲ್ಕಿ ತಾಲೂಕಿನ ಎಲ್ಲ ಅಭಿವೃದ್ದಿ ಕಾರ್ಯಗಳಿಗೆ ವೇಗ ನೀಡುವ ನಿಟ್ಟಿನಲ್ಲಿ […]

ರೈತ ಉತ್ಪಾದಕ ಕಂಪನಿ ಸ್ಥಾಪನೆಯಿಂದ ಜಸ್ಟೀಸ್ ಕೆ.ಎಸ್. ಹೆಗ್ಡೆಯವರ ಕನಸು ಸಾಕಾರ: ಯೋಗೀಶ್ ಹೆಗ್ಡೆ

ನಿಟ್ಟೆ: ನಿಟ್ಟೆ ಎಂಬ ಹಳ್ಳಿಯ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುವ ಇಂಗಿತ ಹೊಂದಿದ್ದ ಜಸ್ಟೀಸ್ ಕೆ.ಎಸ್. ಹೆಗ್ಡೆ ಅವರ ಕನಸು ಇಂದು ನಿಟ್ಟೆ ರೈತ ಉತ್ಪಾದಕ ಕಂಪನಿ ಉದ್ಘಾಟನೆಯಿಂದ ಸಾಕಾರಗೊಂಡಿದೆ ಎಂದರೆ ತಪ್ಪಾಗದು. ದೇಶದಲ್ಲಿ ಹಳ್ಳಿಗಳ ಅಭಿವೃದ್ದಿ, ಕೃ‍ಷಿ ಹಾಗೂ ರೈತರ ಅಭಿವೃದ್ದಿಗೆ ಬೆಂಬಲ ಸಿಕ್ಕರಷ್ಟೇ ದೇಶದ ಅಭಿವೃದ್ಧಿ ಸಾಧ್ಯ ಎಂದು ನಿಟ್ಟೆ ಕ್ಯಾಂಪಸ್ ಮೈಂಟೆನೆನ್ಸ್ ಎಂಡ್ ಡೆವಲಪ್ಮೆಂಟ್ ನ ನಿರ್ದೇಶಕ ಯೋಗೀಶ್ ಹೆಗ್ಡೆ ಅಭಿಪ್ರಾಯಪಟ್ಟರು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನೆರವಿನೊಂದಿಗೆ ಕೃಷಿ, […]

ರಾಜ್ಯ ಮಟ್ಟದ ಜೂನಿಯರ್ ವಿಭಾಗದ ಈಟಿ ಎಸೆತ: ವೆಂಕಟರಮಣ ಕಾಲೇಜಿನ ಓಂಕಾರ್ ಕಾಮತ್ ಗೆ ಕಂಚಿನ ಪದಕ

ಕುಂದಾಪುರ: ಕರ್ನಾಟಕ ರಾಜ್ಯ ಜೂನಿಯರ್ ಹಾಗೂ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ -2022 ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಜೂನಿಯರ್ ವಿಭಾಗದ ಈಟಿ ಎಸೆತದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಓಂಕಾರ್ ಕಾಮತ್ ಕಂಚಿನ ಪದಕ ಪಡೆಯುವುದರ ಮೂಲಕ ಕೀರ್ತಿಶಾಲಿಯಾಗಿದ್ದಾರೆ. ಸಾಧನೆಗೈದ ವಿದ್ಯಾರ್ಥಿಯನ್ನು ಕಾಲೇಜಿನ ಆಡಳಿತ ಮಂಡಳಿ , ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.  

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಿವೃತ್ತ ಅಪರ ನಿರ್ದೇಶಕ ರಮಾನಂದ ನಾಯಕ್ ರವರಿಗೆ ಗೌರವಾರ್ಪಣೆ

ಉಡುಪಿ: ಸೇವಾ ನಿವೃತ್ತಿ ಹೊಂದಿದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕ ಮತ್ತು ಟೆಕ್ಸೋಕ್ ಕರ್ನಾಟಕ ಸರ್ಕಾರ ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಮಾನಂದ ನಾಯಕ್ ರವರಿಗೆ ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ಉಡುಪಿ ಶಾಖೆಯ ಮಾಜಿ ಅಧ್ಯಕ್ಷ ಸಿಎ ನರಸಿಂಹ ನಾಯಕ್ ರವರು ಇತ್ತೀಚೆಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ನಾಯಕ್ ಮತ್ತು ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.