ಮುಂದಿನ 6 ತಿಂಗಳಲ್ಲಿ ಇ-ಪಾಸ್‌ಪೋರ್ಟ್ ಸೇವೆ ಆರಂಭ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಹಿತಿ

ನವದೆಹಲಿ: ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಎಲೆಕ್ಟ್ರಾನಿಕ್-ಪಾಸ್‌ಪೋರ್ಟ್‌ಗಳನ್ನು ಹೊರತರಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಡಾ. ಔಸಫ್ ಸಯೀದ್ ಅವರು ಹೈದರಾಬಾದ್‌ನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪಾಸ್‌ಪೋರ್ಟ್ ಪುಸ್ತಕಕ್ಕೆ ಇ-ಚಿಪ್ ಮತ್ತು ಇನ್ನೂ ಕೆಲವು ವೈಶಿಷ್ಟ್ಯಗಳನ್ನು ಸೇರಿಸಲಾಗುವುದು, ಈ ವ್ಯವಸ್ಥೆ ಭಾರತೀಯ ಪಾಸ್‌ಪೋರ್ಟ್‌ಗೆ ಭದ್ರತಾ ನವೀಕರಣವನ್ನು ಒದಗಿಸುತ್ತದೆ ಮತ್ತು ಯಂತ್ರದ ಮೂಲಕ ಓದುವಿಕೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ‘ವಿದೇಶ ಸಂಪರ್ಕ’ ಕಾರ್ಯಕ್ರಮದ ಭಾಗವಾಗಿ ಕಾರ್ಯದರ್ಶಿ ನೇತೃತ್ವದ ಅಧಿಕಾರಿಗಳ ತಂಡವು ಹೈದರಾಬಾದ್‌ಗೆ […]
ತೆಂಕನಿಡಿಯೂರು: ಸಹಾಯ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಸಾಧಕರಿಗೆ ಸನ್ಮಾನ

ಮಲ್ಪೆ: ಸಹಾಯ ಸೌಹಾರ್ದ ಸಹಕಾರಿ ನಿಯಮಿತ ಇದರ ತೆಂಕನಿಡಿಯೂರು ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ, ಮುಳುಗು ತಜ್ಞ ಈಶ್ವರ್ ಮಲ್ಪೆ ನಿತ್ಯಾನಂದ ಒಳಕಾಡು ಅವರನ್ನು ಸಹಕಾರಿ ಸಂಘದ ವತಿಯಿಂದ ಸಮ್ಮಾನಿಸಲಾಯಿತು. ದ.ಕ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ನ ಅಧ್ಯಕ್ಷ ಯಶ್ ಪಾಲ್ ಸುವರ್ಣ, ತೊಟ್ಟಂ ಸೈಂಟ್ ಆನ್ಸ್ ಚರ್ಚ್ ಧರ್ಮಗುರು ಫಾ| ಡೆನಿಸ್ ಡೇಸಾ, ಜಿಲ್ಲಾ ಕೋ- ಆಪರೇಟಿವ್ ಯೂನಿಯನ್ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, […]
ಮಣಿಪಾಲ: ಕಿಡ್ ಝೀ ಮಕ್ಕಳಿಂದ ‘ಹಸಿರು ಉಡುಪಿ ಸ್ವಚ್ಛ ಉಡುಪಿ’ ರ‍್ಯಾಲಿ

ಮಣಿಪಾಲ: ‘ಹಸಿರು ಉಡುಪಿ ಸ್ವಚ್ಛ ಉಡುಪಿ’ ಉದ್ದೇಶದೊಂದಿಗೆ ಆಗಸ್ಟ್ 23 ಮಂಗಳವಾರದಂದು ಕಿಡ್ ಝೀ ಮಣಿಪಾಲ ಶಾಲೆಯ ಮಕ್ಕಳು ರ‍್ಯಾಲಿಯೊಂದನ್ನು ಏರ್ಪಡಿಸಿದ್ದರು. ಶಾಲಾ ಮಕ್ಕಳು ಸಿಂಡಿಕೇಟ್ ವೃತ್ತದಿಂದ ಮಣಿಪಾಲ ಪೋಲೀಸ್ ಸ್ಟೇಷನ್ ವರೆಗೆ ಮೆರವಣಿಗೆ ನಡೆಸಿದರು. ರ‍್ಯಾಲಿಯು ಭೂಮಿ ಉಳಿಸಿ ಮತ್ತು ಪ್ಲಾಸ್ಟಿಕ್ ಬ್ಯಾನ್ ಮಾಡಿ ಎನ್ನುವ ಘೋಷಣೆಯನ್ನೂ ಹೊಂದಿತ್ತು. ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸಲು ಮಣಿಪಾಲ ಎಸ್.ಎಚ್.ಒ ಮಂಜುನಾಥ್, ಪಿ.ಎಸ್.ಐ ಮತ್ತು ಸಿಬ್ಬಂದಿಗಳು ಸಹಕರಿಸಿದರು. ಶಾಲಾ ಮಕ್ಕಳಿಗೂ ಪೊಲೀಸ್ ಇಲಾಖೆಯ ಕಾರ್ಯಗಳನ್ನು […]