ಕಿನ್ನಿಗೋಳಿ: ಮೂರುಕಾವೇರಿ ಬಳಿ ಖಾಸಗಿ ಬಸ್ ಗೆ ಲಾರಿ ಢಿಕ್ಕಿ; ಪ್ರಯಾಣಿಕರು ಸುರಕ್ಷಿತ
ಕಿನ್ನಿಗೋಳಿ: ಇಲ್ಲಿಗೆ ಸಮೀಪದ ಮೂರುಕಾವೇರಿ ಎಂಬಲ್ಲಿ ಮೂಡಬಿದ್ರೆ ಮಾರ್ಗವನ್ನು ಕಟೀಲು ಮಾರ್ಗಕ್ಕೆ ಸಂಪರ್ಕಿಸುವ ಅಡ್ಡರಸ್ತೆಯ ಬಳಿ ಕಟೀಲು ಮಾರ್ಗಕ್ಕೆ ಸಾಗುತ್ತಿದ್ದ ಲಾರಿಯೊಂದಕ್ಕೆ ಕಿನ್ನಿಗೋಳಿ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಒಂದು ಢಿಕ್ಕಿ ಹೊಡೆದಿದೆ. ಬಸ್ಸಿನ ಎದುರುಗಡೆ ಗಾಜು ಪುಡಿಯಾಗಿದ್ದರೂ, ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಭಗವದ್ಗೀತೆಯ ಶ್ರೀಕೃಷ್ಣನ ಸಂದೇಶಗಳು ಸಾರ್ವಕಾಲಿಕ: ರಘುಪತಿ ಭಟ್
ಉಡುಪಿ: ಭಗವದ್ಗೀತೆಯ ಮೂಲಕ ಶ್ರೀಕೃಷ್ಣ ಸಾರಿರುವ ಸಂದೇಶಗಳು ಸರ್ವಕಾಲಕ್ಕೂ ವಿಶ್ವಕ್ಕೆ ಅನ್ವಯವಾಗಲಿವೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು. ಅವರು ಶುಕ್ರವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಮತ್ತು ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಸಹಕಾರದೊಂದಿಗೆ ಆಯೋಜಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾವಿರಾರು ವರ್ಷಗಳ ಹಿಂದೆ ಶ್ರೀ ಕೃಷ್ಣ ಭೋದಿಸಿದ ಭಗವದ್ಗೀತೆಯಲ್ಲಿ ಮನುಷ್ಯನ ಸುಗಮ ಜೀವನ ವಿಧಾನ ಆಡಳಿತ ವ್ಯವಸ್ಥೆ ಸಂದೇಶಗಳು […]
ನಿಟ್ಟೆ: ನಿಟ್ಟೆ ಸಮೂಹದ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆ
ನಿಟ್ಟೆ: ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಲಯದ ವತಿಯಿಂದ ನಿಟ್ಟೆ ಕ್ಯಾಂಪಸ್ ನ ಸದಾನಂದ ಸಭಾಂಗಣದಲ್ಲಿ ಆಗಸ್ಟ್ 19 ರಂದು ಶ್ರೀ ಕೃಷ್ಣಜನ್ಮಾಷ್ಟಮಿ ಹಬ್ಬವನ್ನು ವಿಜೃಂಭಣೆ ಹಾಗೂ ವಿಭಿನ್ನವಾಗಿ ಆಚರಿಸಲಾಯಿತು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್, ಕ್ಯಾಂಪಸ್ ಮೈಂಟೆನೆನ್ಸ್ ಎಂಡ್ ಡೆವಲಪ್ಮೆಂಟ್ ನ ನಿರ್ದೇಶಕ ಪ್ರೊ.ಯೋಗೀಶ್ ಹೆಗ್ಡೆ, ನಿಟ್ಟೆ ವಿದ್ಯಾಸಂಸ್ಥೆಯ ಹಿತೈಶಿ ಶ್ರೀ ಅಶೋಕ್ ಅಡ್ಯಂತಾಯ, ವಿದ್ಯಾರ್ಥಿ ನಿಲಯಗಳ ಚೀಫ್ ವಾರ್ಡನ್ ಗಳಾದ ಡಾ.ವೀಣಾದೇವಿ ಶಾಸ್ತ್ರೀಮಠ್, ಡಾ.ವಿಶ್ವನಾಥ್, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ […]
ಜ್ಞಾನ ಸುಧಾ ಕಾಲೇಜಿನ ವಿದ್ಯಾರ್ಥಿನಿ ಚೆಸ್ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ಕಾರ್ಕಳ: ಜ್ಞಾನಸುಧಾ ಪ.ಪೂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕು. ಅರುಂದತಿ.ಜಿ.ವಿ ಇವರು ಶ್ರೀ ಮೂಕಾಂಬಿಕ ದೇವಳ ಸ್ವತಂತ್ರ ಪ.ಪೂ. ಕಾಲೇಜು ಕೊಲ್ಲೂರಿನಲ್ಲಿ ನಡೆದ ಪದವಿ ಪೂರ್ವ ವಿಭಾಗದ ಉಡುಪಿ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ 5ನೇ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಶ್ರೀ ಗಣೇಶ್ ವಿ.ಜಿ ಮತ್ತು ಶ್ರೀಮತಿ ವೀಣಾ ದಂಪತಿಗಳ ಪುತ್ರಿ. ರಾಜ್ಯಮಟ್ಟಕ್ಕೆ ಆಯ್ಕೆಗೊಂಡ ವಿದ್ಯಾರ್ಥಿನಿಗೆ ಜ್ಞಾನಸುಧಾ ಪರಿವಾರ ಶುಭಕೋರಿದೆ.
ಶ್ರೀಕೃಷ್ಣಜನ್ಮಾಷ್ಟಮಿ ಸ್ಪರ್ಧಾ ಫಲಿತಾಂಶ
ಉಡುಪಿ: ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ಫಲಿತಾಂಶಗಳು ಇಂತಿವೆ: ಮುದ್ದು ಕೃಷ್ಣ ಸ್ಪರ್ಧೆ: 0-1 ವಿಭಾಗ ಪ್ರಥಮ- ಪ್ರನೂಷ್ ಆಚಾರ್ಯ ದ್ವಿತೀಯ- ಮೈಥಿಲಿ ರಾವ್, ಸಿಯಾ ರಾವ್, ವಿಧಾತ್ರಿ ಭಟ್ ತೃತೀಯ: ಇಂಚರಾ ಭಟ್ 1-3 ವಿಭಾಗ ಪ್ರಥಮ: ಶೌರಿ ಪ್ರಶಾಂತ್ ದ್ವಿತೀಯ- ಶ್ರೀನಿವಾಸ್ ಶಣೈ ತೃತೀಯ: ಸದ್ಗುಣಿ, ಅವನಿ ಕೆದಿಲಾಯ, ಮೇಧಾ ಬಾಲಕೃಷ್ಣ ವಿಭಾಗ (3-6) ಪ್ರಥಮ-ಚರಣ್ಯ ದ್ವಿತೀಯ: ಶಿವಣ್ಯ ಪೂಜಾರಿ ತೃತೀಯ: ತ್ರಿಶಾ ಕಿಶೋರ ಕೃಷ್ಣ ವಿಭಾಗ (6-10) ಪ್ರಥಮ-ಪ್ರತ್ಯೂಷ ನಾಯಕ್ ದ್ವಿತೀಯ: […]