ಮಣಿಪಾಲ: ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದಲ್ಲಿ ಮಹಿಳೆಯರಿಗಾಗಿ ವಿವಿಧ ಕೋರ್ಸ್ ಗಳ ಉಚಿತ ತರಬೇತಿಗಳು

ಮಣಿಪಾಲ: ಇಲ್ಲಿನ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ, ಸ್ಕಿಲ್ ಇಂಡಿಯಾ ತರಬೇತಿ ಕೇಂದ್ರದಲ್ಲಿ ಯುವತಿಯರು ಮತ್ತು ಮಹಿಳೆಯರಿಗಾಗಿ ಫ್ಯಾಶನ್ ಡಿಸೈನಿಂಗ್, ಮಹಿಳೆಯ ಉಡುಪುಗಳ ವಿನ್ಯಾಸ, ಎಂಬ್ರಾಯಡರಿ ಮತ್ತು ಟೈಲರಿಂಗ್ ಕೋರ್ಸ್ ಗಳ ತರಬೇತಿಗಳನ್ನು 3 ತಿಂಗಳುಗಳ ಕಾಲ ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಆಸಕ್ತರು ಕೂಡಲೇ ಸಂಪರ್ಕಿಸಿ ವಿಳಾಸ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ, ರೂಮನ್ ಟೆಕ್ನಾಲಜೀಸ್ ಪ್ರೈ.ಲಿ, 3 ನೇ ಮಹಡಿ, ರಿಲಾಯನ್ಸ್ ಟ್ರೆಂಡ್ ನ ಮೇಲೆ, ಲಕ್ಷ್ಮೀಂದ್ರನಗರ, ಮಣಿಪಾಲ ದೂರವಾಣಿ 9535040711, ವಾಟ್ಸಾಪ್ 9591229792 ಸಮಯ […]

ಸಾರ್ವಜನಿಕ ಶೌಚಾಲಯಗಳ ಸ್ವಚ್ಚತಾ ಅಭಿಯಾನದ ಮೂಲಕ ವಿಶಿಷ್ಟ ರೀತಿಯ ಸ್ವಾತಂತ್ರ್ಯೋತ್ಸವ ಆಚರಣೆ

ಉಡುಪಿ: ನಗರಸಭಾ ಸದಸ್ಯ ವಿಜಯ್ ಕೊಡವೂರು ನೇತೃತ್ವದಲ್ಲಿ ಹಿರಿಯ ನಾಗರಿಕರೊಂದಿಗೆ ಸಾರ್ವಜನಿಕ ಕಚೇರಿಗಳ ಶೌಚಾಲಯಗಳನ್ನು ಸ್ವಚ್ಛ ಮಾಡುವ ಮೂಲಕ  ಸ್ವಾತಂತ್ರೋತ್ಸವವನ್ನು ವಿಶಿಷ್ಟ ರೀತಿಯಲ್ಲಿ  ಆಚರಿಸಲಾಯಿತು. ಉಡುಪಿ ನಗರ ವ್ಯಾಪ್ತಿಯ ಒಳಗಡೆ ಇರುವ ಸರಕಾರಿ ಶೌಚಾಲಯಗಳು, ಸರಕಾರಿ ಪರಿಸರಗಳು ನಾಚಿಗೆ ತರುವ ರೀತಿಯಲ್ಲಿ ಇರುವುದನ್ನು ಗಮನಿಸಿ ಉಡುಪಿಯ ಎಪಿಎಂಸಿ ಮಾರುಕಟ್ಟೆಯ ಶೌಚಾಲಯವನ್ನು ಸ್ವಚ್ಛ ಪಡಿಸುವ ಕಾರ್ಯವನ್ನು ಹಿರಿಯ ನಾಗರಿಕರೊಂದಿಗೆ ಸೇರಿಕೊಂಡು ನಡೆಸಲಾಯಿತು. ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ನಗರಸಭಾ ಸದಸ್ಯರ ಕಾರ್ಯವನ್ನು ತರಕಾರಿ ಮಾರಾಟ ಮಾಡುವ ವ್ಯಾಪಾರಸ್ಥರು ಶ್ಲಾಘಿಸಿದರು. ಪ್ರತೀ […]

ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 21ನೇ ಮಹಾಸಭೆಯ ಪ್ರಯುಕ್ತ ಭಕ್ತಿ ಸಿಂಚನ ಕಾರ್ಯಕ್ರಮ

ಉಡುಪಿ: ಪರ್ಕಳದ ಶ್ರೀ ದುರ್ಗಾ ಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 21 ನೇ ಮಹಾಸಭೆಯ ಪ್ರಯುಕ್ತ ಭಕ್ತಿ ಸಿಂಚನ ಕಾರ್ಯಕ್ರಮವು ಮಣಿಪಾಲದ ನರಸಿಂಗೆಯ ನರಸಿಂಹ ಸಭಾಭವನದಲ್ಲಿ ಅಗಸ್ಟ್ 21 ರಂದು ಅಪರಾಹ್ನ 2 ಘಂಟೆಯಿಂದ ನಡೆಯಲಿದೆ. ಕಲರ್ಸ್ ಕನ್ನಡದ ‘ಕನ್ನಡ ಕೋಗಿಲೆ’ ಖ್ಯಾತಿಯ ಗುಲ್ಬರ್ಗಾದ ಅನಂತರಾಜ್ ಮಿಸ್ತ್ರೀ, ಹಾಗೂ ಶ್ರೀಮತಿ ದಿವ್ಯಾ ಗಿರಿಧರ್ ಬಳಗದವರಿಂದ ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಲಿದೆ ಎಂದು ಕಛೇರಿ ಪ್ರಕಟಣೆ ತಿಳಿಸಿದೆ.