ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಲ್ಲಾ ಬಾಲಭವನದಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆ
ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಗರದ ಜಿಲ್ಲಾ ಬಾಲಭವನದಲ್ಲಿ ನಡೆದ ದೇಶಭಕ್ತಿ ಗೀತೆ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಪುರಸಭಾ ಸದಸ್ಯ ಟಿ.ಜಿ.ಹೆಗಡೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. 100 ಕ್ಕೂ ಅಧಿಕ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
1984ರ ಅಪರೇಷನ್ ಮೇಘದೂತ್ ಸಮಯದಲ್ಲಿ ಸಿಯಾಚಿನ್‌ನಲ್ಲಿ ಕಾಣೆಯಾದ ಸೈನಿಕನ ಅವಶೇಷ 38 ವರ್ಷಗಳ ನಂತರ ಪತ್ತೆ
ಲಡಾಖ್: ಈಗ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ನಲ್ಲಿರುವ ಸಿಯಾಚಿನ್ ಗ್ಲೇಸಿಯರ್ ಅನ್ನು ವಶಪಡಿಸಿಕೊಂಡ ಮೂವತ್ತೆಂಟು ವರ್ಷಗಳ ನಂತರ, ಭಾರತೀಯ ಸೇನೆಯು 1984 ರಲ್ಲಿ ಆಪರೇಷನ್ ಮೇಘದೂತ್ ಸಮಯದಲ್ಲಿ ಕಾಣೆಯಾಗಿದ್ದ ತನ್ನ ಸೈನಿಕರೊಬ್ಬರ ಅವಶೇಷಗಳನ್ನು ಸೋಮವಾರ ಪತ್ತೆಮಾಡಿದೆ. ಪತ್ತೆಯಾದ ಸೈನಿಕನ ಅವಶೇಷವು19 ಕುಮಾಊಂ ರೆಜಿಮೆಂಟಿನ 20 ಸದಸ್ಯರ ಆರ್ಮಿ ಗಸ್ತಿನ ಭಾಗವಾಗಿದ್ದ ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಸಿಂಗ್ ಅವರದ್ದು ಎಂದು ಗುರುತಿಸಿ, ಉಧಮ್‌ಪುರ ಮೂಲದ ಡಿಫೆನ್ಸ್ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಅಭಿನವ್ ಅವರು ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೇ […]
ಮುಂಡ್ಕಿನಜೆಡ್ಡು ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ; ವಿವಿಧ ಸ್ಪರ್ಧೆಗಳ ಆಯೋಜನೆ
ಉಡುಪಿ: ಮುಂಡ್ಕಿನಜೆಡ್ಡು ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಆಗಸ್ಟ್ 19 ಶುಕ್ರವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾತ್ರಿ 8 ಗಂಟೆಗೆ ಶ್ರೀ ಕೃಷ್ಣನಿಗೆ ವಿಶೇಷ ಪೂಜೆ ಜರುಗಲಿದೆ. ಆಗಸ್ಟ್ 20 ಶನಿವಾರ ಸಂಜೆ ಗಂಟೆ 3 ರಿಂದ ಮೊಸರು ಕುಡಿಕೆ ಹಬ್ಬದ ಪ್ರಯುಕ್ತ ಮುದ್ದುಕೃಷ್ಣ ರಸಪ್ರಶ್ನೆ ಸ್ಪರ್ಧೆ (ಕಿರಿಯ ಮತ್ತು ಹಿರಿಯ ವಿಭಾಗ), ಸಂಗೀತ ಕುರ್ಚಿ ಸ್ಪರ್ಧೆ(ಕಿರಿಯ, ಹಿರಿಯ, ಮಹಿಳೆ ಮತ್ತು ಪುರುಷರ ವಿಭಾಗ), ಪುಲ್ ಅಪ್ ಸ್ಪರ್ಧೆ, ಇಡ್ಲಿ ತಿನ್ನುವ ಸ್ಪರ್ಧೆ (ಕಿರಿಯ ಹಿರಿಯ ಮತ್ತು […]
ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸು ತಯಾರಕರ ಮತ್ತು ಮಾರಾಟಗಾರರ ಸಂಘದಿಂದ 75ನೇ ಸ್ವಾತಂತ್ರ್ಯ ದಿನಾಚರಣೆ
ಉಡುಪಿ: ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಮತ್ತು ಮಾರಾಟಗಾರರ ಸಂಘದ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ಆಗಸ್ಟ್ 15 ರಂದು ಬೆಳಿಗ್ಗೆ 9:00 ಗಂಟೆಗೆ ಆಕಾಶವಾಣಿ ಸರ್ಕಲ್ ಬಳಿಯ ಕೃಷ್ಣಗಿರಿ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಂಘದ ಅಧ್ಯಕ್ಷ ವಿಶ್ವನಾಥ್ ಕುಲಾಲ್ ಧ್ವಜಾರೋಹಣ ನಡೆಸಿದರು. ಆ ಬಳಿಕ ಧ್ವಜ ವಂದನೆ ಮಾಡಿ ರಾಷ್ಟ್ರಗೀತೆಯನ್ನು ಹಾಡಲಾಯಿತು. ಸಂಘದ ಕಾನೂನು ಸಲಹೆಗಾರರಾದ ಶ್ರೀಧರ್ ಪಿ.ಎಸ್ ದೇಶದ ಸ್ವಾತಂತ್ರ್ಯ […]
ಮಣಿಪಾಲ್ ಮ್ಯಾರಥಾನ್ 2023ರ 5 ನೇ ಆವೃತ್ತಿ ದಿನಾಂಕ ಪ್ರಕಟ: ಮುಂದಿನ ವರ್ಷ 12 ಫೆಬ್ರವರಿಯಂದು ಮ್ಯಾರಥಾನ್ ಆಯೋಜನೆ; 15000 ಜನರು ಭಾಗವಹಿಸುವ ನಿರೀಕ್ಷೆ
ಮಣಿಪಾಲ: ಮಂಗಳವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್ ಮ್ಯಾರಥಾನ್ 2023ರ 5 ನೇ ಆವೃತ್ತಿಯನ್ನು ಘೋಷಿಸಿತು. ಮಾಹೆ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಮತ್ತು ಎನ್.ಇ.ಬಿ ಸ್ಪೋರ್ಟ್ಸ್ ಬೆಂಗಳೂರು ಇವರ ಸಹಯೋಗದೊಂದಿಗೆ ಮ್ಯಾರಥಾನ್ ಆಯೋಜಿಸಲಾಗುವುದು. ಮಣಿಪಾಲ್ ಮ್ಯಾರಥಾನ್‌ನ 5 ನೇ ಆವೃತ್ತಿಯು ಬಾಲ್ಯದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. “ಆರಂಭಿಕ ಪತ್ತೆ ಜೀವಗಳನ್ನು ಉಳಿಸುತ್ತದೆ-ಐ ಕ್ಯಾನ್ ಸರ್-ವೈವ್” ಎನ್ನುವ ಅಡಿಬರಹದೊಂದಿಗೆ ಮ್ಯಾರಥಾನ್ ಆಯೋಜನೆಗೊಳ್ಳಲಿದೆ. ಈ ಮ್ಯಾರಥಾನ್ ಮೂಲಕ […]