ದೇಶಕ್ಕಾಗಿ ಹೋರಾಡಿದ ಸ್ಥಳೀಯ ನಾಯಕರನ್ನು ಗುರುತಿಸಿ ಗೌರವಿಸಿ: ಸಾರ್ಜೆಂಟ್‌ ಶ್ರೀಕಾಂತ್‌ ಶೆಟ್ಟಿ

ಕಾರ್ಕಳ: ಸ್ವಾತಂತ್ರ್ಯ ಹೋರಾಟಕ್ಕೆ ದುಡಿದು ಮಡಿದ ಸ್ಥಳೀಯ ಮಹಾತ್ಮರನ್ನು ಸ್ಮರಿಸುವುದು ನಮ್ಮ ಆದ್ಯತೆಯಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಸೈನಿಕ ಸಂಘದ ಉಪಾಧ್ಯಕ್ಷ, ಭಾರತೀಯ ವಾಯು ಸೇನೆಯ ಮಾಜಿ ಸೈನಿಕ ಸಾರ್ಜೆಂಟ್‌ ಶ್ರೀಕಾಂತ್‌ ಶೆಟ್ಟಿ.ಬಿ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ನಡೆದ 76ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಗೈದು ಮಾತನಾಡಿದರು. ನಮ್ಮ ಸುತ್ತ ಮುತ್ತಲು ದೇಶಕ್ಕಾಗಿ ಹೋರಾಡಿದ ಮಹನೀಯರನ್ನು ಗುರುತಿಸಿ ಗೌರವಿಸುವ ಕಾರ್ಯವಾಗಬೇಕು. ಅನೇಕ ಮಹನೀಯರ ಸಾಹಸಗಳನ್ನು ಸಾದರ ಪಡಿಸುತ್ತಾ, ದೇಶದ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಹುಮ್ಮಸ್ಸನ್ನು […]

ನಭದಲ್ಲೂ ಹಾರಾಡಿತು ತ್ರಿವರ್ಣಧ್ವಜ: ಭೂಮಿಯಿಂದ 30 ಕಿಲೋಮೀಟರ್ ಎತ್ತರದಲ್ಲಿ ರಾರಾಜಿಸಿತು ತಿರಂಗಾ; ಸ್ಪೇಸ್ ಕಿಡ್ಜ್ ಇಂಡಿಯಾ ಸಾಧನೆ

ನವದೆಹಲಿ: ಸ್ಪೇಸ್ ಕಿಡ್ಜ್ ಇಂಡಿಯಾವು ಸೋಮವಾರ ಸ್ವಾತಂತ್ರ್ಯ ದಿನದಂದು ಭೂಗ್ರಹದಿಂದ ಸುಮಾರು 30 ಕಿಲೋಮೀಟರ್ ಎತ್ತರದಲ್ಲಿ ಭಾರತದ ಧ್ವಜವನ್ನು ಹಾರಿಸಿತು. ಧ್ವಜವನ್ನು ಭೂಗ್ರಹದಿಂದ 1 ಲಕ್ಷದ 6 ಸಾವಿರ ಅಡಿ ಎತ್ತರಕ್ಕೆ ಬಲೂನ್‌ ಮೂಲಕ ನಭಕ್ಕೆ ಕಳುಹಿಸಲಾಯಿತು. ಈ ಕಾರ್ಯಕ್ರಮವು ಆಜಾದಿ ಕಾ ಅಮೃತ್ ಮಹೋತ್ಸವ ಘೋಷಣೆಯ ಭಾಗವಾಗಿತ್ತು ಮತ್ತು ಐತಿಹಾಸಿಕ ವಾರ್ಷಿಕೋತ್ಸವವನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಹರ್ ಘರ್ ತಿರಂಗ ಅಭಿಯಾನದಡಿಯಲ್ಲಿ ನಡೆಯಿತು. ಸ್ಪೇಸ್ ಕಿಡ್ಜ್ ಇಂಡಿಯಾ ಸಂಸ್ಥೆಯು ‘ದೇಶಕ್ಕಾಗಿ ಯುವ […]

ಪೂರ್ವ ಸ್ವಾಮ್ಯದ ಕಾರುಗಳ ವಾಹನ ವಿತರಕರ ಸಂಘದ ನೂತನ ಕಚೇರಿ ಉದ್ಘಾಟನೆ

ಉಡುಪಿ: ಪೂರ್ವ ಸ್ವಾಮ್ಯದ ಕಾರುಗಳ ವಾಹನ ವಿತರಕರ ಸಂಘದ ನೂತನ ಕಚೇರಿಯ ಉದ್ಘಾಟನೆ ಸೋಮವಾರದಂದು ನೆರವೇರಿತು. ಸದಾಶಿವ ಶೆಟ್ಟಿ ಕಚೇರಿಯನ್ನು ಉದ್ಘಾಟಿಸಿದರು. ಹೆಚ್ ಜಯರಾಜ್ ಕೋಟ್ಯಾನ್ ಮತ್ತು ಅಶ್ರಫ್ ಉಡುಪಿ ಕಾರ್ಸ್ ಇವರು ದೀಪ ಬೆಳಗಿಸಿದರು. ಕಾರ್ಯಕ್ರಮದಲ್ಲಿ  ವಸಂತ ಗಣೇಶ್ ಕಾರ್ಸ್, ಜಿಯಾದ್ ಉಡುಪಿ ಕಾರ್ಸ್, ಪಾಯಸ್ ಕಾರ್ಕಳ, ಪೌಲ್ ಕೆಪಿ ಕಾರ್ಸ್, ಆಲ್ವಿನ್, ಝುನೈದ್ ಟ್ರಕ್ ಪಾಯಿಂಟ್ ಮುಂತಾದವರು ಉಪಸ್ಥಿತರಿದ್ದರು. ಉದಯ್ ಕಿರಣ್ ವಂದಿಸಿದರು, ರಜಾಕ್ ಮಾಸ್ಟರ್ ನಿರೂಪಿಸಿದರು.