ಹಿರಿಯಡ್ಕ: ಆಗಸ್ಟ್ 13 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ

ಹಿರಿಯಡ್ಕ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವವು ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಆಗಸ್ಟ್ 13 ಶನಿವಾರದಂದು ಬೆಳಿಗ್ಗೆ 10.30 ಗಂಟೆಗೆ ಕಾಲೇಜಿನ ಪ್ರಾಂಗಣದಲ್ಲಿ ನಡೆಯಲಿದ್ದು, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ನಾಯಕ್, ಉಪಾಧ್ಯಕ್ಷೆ ಬೊಮ್ಮರಬೆಟ್ಟು ಶ್ರೀಮತಿ ಲತಾ ಸುರೇಶ್, ಬೊಮ್ಮರಬೆಟ್ಟು ಕುದಿ ವಸಂತ ಶೆಟ್ಟಿ, ಸುರೇಶ್ ನಾಯಕ್ ಉಪಸ್ಥಿತರಿರಲಿದ್ದಾರೆ. ಶ್ರೀಮತಿ ಸುಜಯಾ ಕೆ.ಎಸ್. […]

ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆಯ ವತಿಯಿಂದ ಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ಸಹಾಯ

ಉಡುಪಿ: ದಿ. ಅಡುಗೆ ಚಂದ್ರ ಮರಕಾಲ ಬಿಲ್ಲಾಡಿ, ಇವರು ಸುಮಾರು 7 ವರುಷದ ಹಿಂದೆ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದು, ಇವರ ಕುಟುಂಬ ಅತೀ ಬಡತನದಲ್ಲಿದ್ದು ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಇವರ ಮಗಳು ಅನ್ವಿ 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಇವಳ ವಿದ್ಯಾಭ್ಯಾಸಕ್ಕಾಗಿ 10,000 ರೂಗಳ ಮೊತ್ತವನ್ನು ಹಾಗೂ ಬಿಲ್ಲಾಡಿ ಬೆಣಗಲ್ ಅಣಿ ಬಾಬಣ್ಣಿ ನಾಯ್ಕರವರ ಪತ್ನಿ ಸಂಜೀವಿ ಬಾಯಿಯವರ ಎರಡೂ ಕಿಡ್ನಿ ವೈಫಲ್ಯವಾಗಿದ್ದು, ಇವರ ಚಿಕಿತ್ಸೆಗೆ ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದ್ದು, ಅವರ ಮನೆಗೆ ಭೇಟಿ ನೀಡಿ […]

24ನೇ ವರ್ಷದ ತ್ರಿಶಾ ದಿನಾಚರಣೆ: ಎರಡು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ನಡೆಸಿದ ಸಾಧನೆ

ಉಡುಪಿ: ಬದುಕಿನಲ್ಲಿ ಇದಿರಾದ ಕಾಠಿಣ್ಯವನ್ನೆಲ್ಲಾ ಸವಾಲಾಗಿ ಸ್ವೀಕರಿಸಿ ಎರಡು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ವಿದ್ಯಾರ್ಥಿ ಸಂದೋಹವನ್ನು ಸಲಹಿದ ಮತ್ತು ಸಲಹುತ್ತಿರುವ ತ್ರಿಶಾ ಸಂಸ್ಥೆಯು 24 ವರುಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ಆಯೋಜಿಸಿದ್ದ ತ್ರಿಶಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿ.ಎ ಗೋಪಾಲಕೃಷ್ಣ ಭಟ್, ಈ ಸುಧೀರ್ಘ ಪಯಣದಲ್ಲಿ ಸೋಲು-ಗೆಲುವುಗಳನ್ನು ಜೊತೆ ಸೇರಿಸಿಕೊಂಡು ಮುಂದೆ ಸಾಗುವುದು ಹೇಗೆ ಎನ್ನುವುದನ್ನು ಜೀವನ ಕಲಿಸಿಕೊಟ್ಟಿದೆ ಎಂದು ತಮ್ಮ ಜೀವನದ […]

ದಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮೆಟೆಡ್ ನೂತನ ಅಧ್ಯಕ್ಷರಾಗಿ ಕೆ.ಉದಯ ಕುಮಾರ್ ಶೆಟ್ಟಿ ಪದಗ್ರಹಣ

ಬೆಂಗಳೂರು: ಕರ್ನಾಟಕ ಸರಕಾರ ಸ್ವಾಮ್ಯದ, 77 ವರ್ಷಗಳ ಇತಿಹಾಸವಿರುವ ದಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಇದರ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿಯವರ ಪದಗ್ರಹಣ ಸಮಾರಂಭವು ಬೆಂಗಳೂರು ಯಶವಂತಪುರದ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆಯಿತು. ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು, ಒಳನಾಡ ಜಲಸಾರಿಗೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಇವರು ಕೆ.ಉದಯ ಕುಮಾರ್ ಶೆಟ್ಟಿಯವರ ಪದಗ್ರಹಣವನ್ನು ನೆರವೇರಿಸಿ, ಅಭಿನಂದಿಸಿದರು. ಸಂಸ್ಥೆಯ ನೂತನ ಅಧ್ಯಕ್ಷರಾಗಿ ಜಬಾಬ್ದಾರಿ ಸ್ವೀಕರಿಸಿದ […]

ಸೌತ್‌ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ನೂತನ ಪರಿಕಲ್ಪನೆ: ತ್ರಿವರ್ಣದ ಬೆಳಕಿನ ರಂಗಲ್ಲಿ ಮಿಂದೇಳಲಿದೆ ಕನಕ ಗೋಪುರ!!

ಉಡುಪಿ: ಶ್ರೀಕೃಷ್ಣ ಮಠ ಹಾಗೂ ಪರ್ಯಾಯ ಶ್ರೀ ಕೃಷ್ಣಾಪುರ ಮಠ ಉಡುಪಿ ಆಶ್ರಯದಲ್ಲಿ ಸೌತ್‌ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ನೇತೃತ್ವದಲ್ಲಿ ಪಂಚಮಿ ಟ್ರಸ್ಟ್ ಹಾಗೂ ಗಾಂಧಿ ಹಾಸ್ಪಿಟಲ್ ಸಹಯೋಗದೊಂದಿಗೆ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರಥಮ ಬಾರಿಗೆ ಉಡುಪಿಯ ರಥಬೀದಿಯಲ್ಲಿರುವ ಕನಕ ಗೋಪುರವು “ತ್ರಿವರ್ಣ” ಬಣ್ಣದ ಬೆಳಕಿನೊಂದಿಗೆ ಝಗಮಗಗೊಳ್ಳಲಿದೆ. ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜುಲೈ 13 ಶನಿವಾರದಂದು 6 ಗಂಟೆಗೆ ಕನಗೋಪುರದ ಎದುರು ಉದ್ಘಾಟನೆ […]