ಶೇಕಡಾ 100 ಸಾಲ ವಸೂಲಾತಿ ಸಾಧನೆ: ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಪ್ರಶಸ್ತಿ

ಉಡುಪಿ: ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಮತ್ತೆ ಪ್ರಶಸ್ತಿ ದೊರೆತಿದೆ. ಶೇಕಡಾ 100 ಸಾಲ ವಸೂಲಾತಿಯಲ್ಲಿ ನಿರಂತರವಾಗಿ ಹಲವಾರು ವರ್ಷಗಳಿಂದ ಪ್ರಶಸ್ತಿಯನ್ನು ಗಳಿಸಿಕೊಂಡು ಬಂದ ನೆಲ್ಲಿಕಾರು ವ್ಯವಸಾಯ ಸಹಕಾರ ಸಂಘವು ಈ ಬಾರಿ ಮತ್ತೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕ್ ಅಧ್ಯಕ್ಷ ಮಾಪಾಲು ಜಯವರ್ಮ ಜೈನ್ ಮತ್ತು ಕಾರ್ಯನಿರ್ವಹಣಾಧಿಕಾರಿ ಜಯರಾಜ್ ಇವರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಎಮ್. ಎನ್ ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

ಮುಂಡ್ಕಿನಜೆಡ್ಡು: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಗೋಪಾಲಕೃಷ್ಣ ಮಂದಿರದಲ್ಲಿ ವಿವಿಧ ಸ್ಪರ್ಧೆಗಳು

ಉಡುಪಿ: ಮುಂಡ್ಕಿನಜೆಡ್ಡು ಶ್ರೀಗೋಪಾಲಕೃಷ್ಣ ಮಂದಿರದಲ್ಲಿ ಜುಲೈ18 ಗುರುವಾರದಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಂದಿರದಲ್ಲಿ ರಾತ್ರಿ 8 ಗಂಟೆಗೆ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಜರುಗಲಿದೆ. ಜುಲೈ19 ಶುಕ್ರವಾರದಂದು ಸಂಜೆ 3 ಗಂಟೆಯಿಂದ ಮೊಸರು ಕುಡಿಕೆ ಹಬ್ಬದ ಪ್ರಯುಕ್ತ ಮುದ್ದುಕೃಷ್ಣ ರಸಪ್ರಶ್ನೆ ಸ್ಪರ್ಧೆ (ಕಿರಿಯ ಮತ್ತು ಹಿರಿಯ ವಿಭಾಗ), ಸಂಗೀತ ಕುರ್ಚಿ ಸ್ಪರ್ಧೆ(ಕಿರಿಯ, ಹಿರಿಯ, ಮಹಿಳೆ ಮತ್ತು ಪುರುಷರ ವಿಭಾಗ), ಪುಲ್ ಅಪ್ ಸ್ಪರ್ಧೆ, ಇಡ್ಲಿ ತಿನ್ನುವ ಸ್ಪರ್ಧೆ (ಕಿರಿಯ ಹಿರಿಯ ಮತ್ತು ಪುರುಷರ ವಿಭಾಗ), ಮೊಸರು ಕುಡಿಕೆ ಒಡೆಯುವ […]