ಮಣಿಪಾಲಿನಲ್ಲಿ ಪರಿಚಯಿಸುತ್ತಿದ್ದೇವೆ “ಲೆಟ್ಸ್ ಸೆಲೆಬ್ರೇಟ್”: ಪಾರ್ಟಿಗೆ ಬೇಕಾಗುವ ಸಾಮಾಗ್ರಿಗಳ ಮಳಿಗೆ

ಮನೆಯಲ್ಲಿ ಹುಟ್ಟುಹಬ್ಬ, ಸಂಗೀತ, ಮೆಹಂದಿ, ಸೀಮಂತ ಅಥವಾ ಇನ್ನಿತರ ಯಾವುದೇ ಪಾರ್ಟಿಗಳಿದ್ದಲ್ಲಿ ಅದಕ್ಕೆ ಬೇಕಾಗುವ ಎಲ್ಲಾ ಸಾಮಾಗ್ರಿಗಳನ್ನು ಸರಬರಾಜು ಮಾಡುವ ‘ಲೆಟ್ಸ್ ಸೆಲೆಬ್ರೇಟ್’ ಅನ್ನು ಪರಿಚಯಿಸುತ್ತಿದ್ದೇವೆ. ಪಾರ್ಟಿಗಳಿಗೆ ಬೇಕಾದ ಬಲೂನ್ ಅಲಂಕಾರ, ಪಾರ್ಟಿ ಪರಿಕರಗಳು ಮತ್ತು ಸೆಟಪ್ ಗಳನ್ನು ಕಸ್ಟಮೈಸ್ ಮಾಡಿಕೊಡಲಾಗುವುದು. ಬಲೂನ್ ಹೂಗುಚ್ಛಗಳು, ಚಾಕೊಲೇಟ್ ಟವರ್‌ಗಳು, ಬೆಳಗುವ ಬಲೂನ್ ಮತ್ತು ರಿಬ್ಬನ್ ಗಳು ಮತ್ತು ಹಲವು ರೀತಿಯ ಪಾರ್ಟಿ ಉತ್ಪನ್ನಗಳು ನಮ್ಮಲ್ಲಿ ಲಭ್ಯವಿದೆ. ಮಾತ್ರವಲ್ಲ, ಕೇವಲ ಪಾರ್ಟಿ ಸರಬರಾಜುಗಳಿಗಿಂತ ಹೆಚ್ಚಿನದನ್ನು ನಾವು ನೀಡುತ್ತೇವೆ. ಪಾರ್ಟಿ ಸೆಟ್ […]

ತುಳುನಾಡಿನ ಪುಟಾಣಿ ಗಾನ ಕೋಗಿಲೆಗಳಿಗಾಗಿ ಟಿವಿ ಸಿಂಗಿಂಗ್ ರಿಯಾಲಿಟಿ ಶೋ: ಹಾಡು ನೀ ಹಾಡು…

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾವಂತ ಪುಟಾಣಿ ಹಾಡುಗಾರರಿಗೆ ಕಾದಿದೆ ಇಲ್ಲೊಂದು ಸುವರ್ಣಾವಕಾಶ. ಈ ಸುವರ್ಣಾವಕಾಶವೇ “ಹಾಡು ನೀ ಹಾಡು”. ಭಾಗವಹಿಸುವ ಪುಟಾಣಿಗಳು 5 ರಿಂದ 10 ನೇ ತರಗತಿ ಮಕ್ಕಳಾಗಿದ್ದು ಉಡುಪಿ ಅಥವಾ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಾಗಿರಬೇಕು. ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರತಿಭೆಗೆ ತಕ್ಕ ವೇದಿಕೆಯ ಜೊತೆಗೆ ಅವಕಾಶಗಳ ಮಹಾಪುರವನ್ನು ಒದಗಿಸುವುದೇ ಈ ಬೃಹತ್ ಪ್ರತಿಭಾನ್ವೇಷಣೆಯ ಮೂಲ ಉದ್ದೇಶ. ಆಯ್ಕೆಗೊಂಡ ಹಾಡುಗಾರರಿಗೆ ಜಿಲ್ಲೆಯ ಹೆಸರಾಂತ ಸಂಗೀತ ಪ್ರಾವೀಣ್ಯರಿಂದ ಮಾರ್ಗದರ್ಶನದ ಜೊತೆಗೆ ಯಶಸ್ಸಿನ ಹಾದಿಯಲಿ ಕೈ […]

ತನ್ನ ಎರಡೂ ಕೈಗಳಿಂದ ಬರೆಯಬಲ್ಲ ಮಂಗಳೂರಿನ ಆದಿ ಸ್ವರೂಪ ಸಾಮರ್ಥ್ಯಕ್ಕೆ ಮೂಗಿನ ಮೇಲೆ ಬೆರಳಿಟ್ಟ ನೆಟ್ಟಿಗರು!

ಮಂಗಳೂರು: ಬಲ ಮತ್ತು ಎಡಗೈಗಳನ್ನು ಏಕಕಾಲದಲ್ಲಿ ಬಳಸಿ ಬರೆಯುವ ವಿಶಿಷ್ಟ ಬಹುಮುಖ ಸಾಮರ್ಥ್ಯ ಹೊಂದಿರುವ ಮಂಗಳೂರಿನ ಆದಿ ಸ್ವರೂಪಾ ವೀಡಿಯೋ ಒಂದನ್ನು ಟ್ವಿಟರ್ ಬಳಕೆದಾರರೊಬ್ಬರು ಮರುಹಂಚಿಕೊಂಡಿದ್ದು, ಇದನ್ನು ನೋಡಿದ ನೆಟ್ಟಿಗರೆಲ್ಲಾ ಮೂಗಿನ ಮೇಲೆ ಬೆರಳಿಟ್ಟುಕೊಂಡು ಆದಿ ಸ್ವರೂಪ ಪ್ರತಿಭೆಯನ್ನು ಮನಸಾರೆ ಕೊಂಡಾಡುತ್ತಿದ್ದಾರೆ. ಸ್ವಯಂ-ಶಿಕ್ಷಣವನ್ನು ಪಡೆದು ತನ್ನ ಈ ಸಾಮರ್ಥ್ಯವನ್ನು ತಾನೇ ನಿರ್ಮಿಸಿಕೊಂಡಿರುವ ಆದಿ ಸ್ವರೂಪಾ ಈಗಾಗಲೇ ಒಂದು ನಿಮಿಷದಲ್ಲಿ ತನ್ನ ಎರಡೂ ಕೈಗಳನ್ನು ಏಕಕಾಲದಲ್ಲಿ ಅತಿ ಹೆಚ್ಚು ಪದಗಳನ್ನು ಬರೆದು ವಿಶ್ವದಾಖಲೆಯನ್ನು ನಿರ್ಮಿಸಿದ್ದಾಳೆ. ಇದರ ಜೊತೆಗೆ, ಆದಿ […]

ಸಿ.ಎ ಫೌಂಡೇಶನ್‌ ಅರ್ಹತಾ ಪರೀಕ್ಷೆ: ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನ 3 ವಿದ್ಯಾರ್ಥಿಗಳು ತೇರ್ಗಡೆ

ಕಾರ್ಕಳ: ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ ನಡೆಸುವ ಸಿ.ಎ ಫೌಂಡೇಶನ್‌ ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅಶ್ವಿತಾ, ಅಮರ್‌.ಎ.ಎಂ ಹಾಗೂ ಅಭಿಷೇಕ್‌ ಲಕ್ಷ್ಮಣ್‌ ನಾಯ್ಕ್‌ ಇವರು ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ವರ್ಷದ ಸಿ.ಎ ಫೌಂಡೇಶನ್‌ ಫಲಿತಾಂಶದಲ್ಲಿಯೇ ಅರ್ಹತೆ ಪಡೆದಿರುವುದು ಪ್ರಶಂಸನೀಯ. ಮುಂದಿನ ಸಿ.ಎ ಮತ್ತು ಸಿ.ಎಸ್‌.ಇ.ಇ.ಟಿ ಪರೀಕ್ಷೆಯನ್ನು ಗುರಿಯಾಗಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಅಶ್ವಿತಾ, ಅಮರ್‌ ಎ ಎಂ […]

ಅತ್ಯುತ್ತಮ ಸಾಧನೆ ಮಾಡಿದ ವಿಕಲಚೇತನ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಉಡುಪಿ: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ವಿಕಲಚೇತನರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಂದ ರಾಷ್ಟ್ರ ಪ್ರಶಸ್ತಿಗೆ ವೆಬ್‌ಸೈಟ್ www.awards.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 28 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ಕಚೇರಿ, ರಜತಾದ್ರಿ, ಮಣಿಪಾಲ ದೂ.ಸಂಖ್ಯೆ: 0820-2574810, 2574811 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ […]