ಆಗಸ್ಟ್ 12- 25: ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ
ಉಡುಪಿ: ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆಗಳು ಆಗಸ್ಟ್ 12 ರಿಂದ 25 ರ ವರೆಗೆ ನಗರದ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಎಂ.ಜಿ.ಎಂ ಪದವಿ ಪೂರ್ವ ಕಾಲೇಜು, ಕಾರ್ಕಳದ ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜು ಮತ್ತು ಕುಂದಾಪುರದ ಭಂಡಾರಕರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಪರೀಕ್ಷೆಗಳು ಮುಕ್ತಾಯವಾಗುವರೆಗೆ ಸಂಬಂಧಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಿಸ್ತು ಮತ್ತು ಶಾಂತಿಯನ್ನು ಕಾಪಾಡುವ ಸಲುವಾಗಿ, ಪರೀಕ್ಷೆಗಳು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು […]
ಕ್ಷಣಿಕ ಸುಖಕ್ಕಾಗಿ ವ್ಯಸನಗಳ ದಾಸರಾಗದೆ ಉತ್ತಮ ಆರೋಗ್ಯ ಹೊಂದಿ ಭವಿಷ್ಯ ರೂಪಿಸಿಕೊಳ್ಳಿ: ವೀಣಾ ಬಿ.ಎನ್
ಉಡುಪಿ: ದುಶ್ಚಟಗಳು ಮನುಷ್ಯನಿಗೆ ತಾತ್ಕಾಲಿವಾಗಿ ಸುಖ ನೀಡಿದರೂ, ನಂತರದಲ್ಲಿ ಅವನ ಅಮೂಲ್ಯವಾದ ಸಮಯ, ಆರೋಗ್ಯ, ಗೌರವವನ್ನು ಹಾಳು ಮಾಡುವುದರ ಜೊತೆಗೆ ಆರ್ಥಿಕ ನಷ್ಠವನ್ನು ಉಂಟು ಮಾಡುತ್ತದೆ ಇದರಿಂದ ಯುವಜನರು ದೂರ ಇರುವುದು ಒಳಿತು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಕಿವಿ ಮಾತು ಹೇಳಿದರು. ಅವರು ಶುಕ್ರವಾರ ಮಣಿಪಾಲದ ಡಾ. ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕಾಲೇಜಿನಲ್ಲಿ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಡಾ. ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕಾಲೇಜು ಮಣಿಪಾಲ ಹಾಗೂ ರಾಜ್ಯ ಮದ್ಯಪಾನ […]
ಆಗಸ್ಟ್ 06: ಇಂಧನ ಸಚಿವರ ಪ್ರವಾಸ ಕಾರ್ಯಕ್ರಮ
ಉಡುಪಿ: ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಅವರು ಆಗಸ್ಟ್ 6 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಅಂದು ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ನಂತರ ಕಾರ್ಕಳ ಪ್ರಯಾಣ ಬೆಳಸಿ ವಾಸ್ತವ್ಯ ಮಾಡಲಿದ್ದಾರೆ.
ಕಾನೂನು ಪ್ರಾಣಿ ಕಲ್ಯಾಣ ಸಲಹೆಗಾರ ಹುದ್ದೆ: ಅರ್ಜಿ ಆಹ್ವಾನ
ಉಡುಪಿ: ಜಿಲ್ಲಾ ಪ್ರಾಣಿ ದಯಾ ಸಂಘದ ವತಿಯಿಂದ ಜಿಲ್ಲಾ ಕಾನೂನು ಪ್ರಾಣಿ ಕಲ್ಯಾಣ ಸಲಹೆಗಾರ-1 ಹುದ್ದೆಗೆ ಕಾನೂನು ಪದವೀಧರರು ಹಾಗೂ ನ್ಯಾಯವಾದಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 1 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಪಶು ಪಾಲನಾ ಇಲಾಖೆ, ಉಡುಪಿ ರವರ ದೂ.ಸಂ.0820-2534024 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಂಗಳನ ಅಂಗಳದಲ್ಲಿ 10 ವರ್ಷಗಳನ್ನು ಪೂರೈಸಿದ ಕ್ಯೂರಿಯಾಸಿಟಿ ರೋವರ್: ನಾಸಾದ ಕೂಸಿಗೆ ದಶಕದ ಸಂಭ್ರಮ
ನಾಸಾದ ಕ್ಯೂರಿಯಾಸಿಟಿ ರೋವರ್ ಪ್ರಸ್ತುತ ಮಂಗಳನ ಅಂಗಳದಲ್ಲಿ ಜೀವನದ ಚಿಹ್ನೆಗಳನ್ನು ಹುಡುಕುತ್ತಿದೆ ಮತ್ತು ಕೆಂಪು ಗ್ರಹದ ವಿಶಿಷ್ಟ ಪರಿಸರದ ಬಗ್ಗೆ ಕಲಿಯುತ್ತಿದೆ. ಆಗಸ್ಟ್ 2, 2022 ರಂದು, ರೋವರ್ ಒಟ್ಟು 17.64 ಮೈಲುಗಳು (28.39 ಕಿಲೋಮೀಟರ್) ಪ್ರಯಾಣಿಸಿದೆ. ನವೆಂಬರ್ 26, 2011 ರಂದು ಫ್ಲೋರಿಡಾದ ಕೇಪ್ ಕ್ಯಾನವೆರಲ್ ಏರ್ ಫೋರ್ಸ್ ಸ್ಟೇಷನ್ನಿಂದ ಅಟ್ಲಾಸ್ ವಿ ರಾಕೆಟ್ನಲ್ಲಿ ಕ್ಯೂರಿಯಾಸಿಟಿ ಉಡಾವಣೆಗೊಂಡಿತು. ಅಂಗಾರಕನನ್ನು ತಲುಪಲು ಎಂಟು ತಿಂಗಳು ಮತ್ತು 10 ದಿನಗಳನ್ನು ತೆಗೆದುಕೊಂಡ ನಂತರ ಆಗಸ್ಟ್ 5, 2012 ರಂದು […]