ತ್ರಿಶಾ ಕ್ಲಾಸಸ್ ವತಿಯಿಂದ ಸಿ.ಎ.ಫೌಂಡೇಶನ್ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

ಮಂಗಳೂರು: ತ್ರಿಶಾ ಕ್ಲಾಸಸ್ ವತಿಯಿಂದ ಸಿ.ಎ ಫೌಂಡೇಶನ್ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರವು ಮಂಗಳೂರಿನ ಅಳಕೆಯ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಸಭಾಂಗಣದಲ್ಲಿ ನಡೆಯಿತು. ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲೆಕ್ಕ ಪರಿಶೋಧಕ ಕೆ.ಬಾಲಸುಬ್ರಮಣ್ಯನ್, ಪ್ರತಿಯೊಬ್ಬ ವ್ಯಕ್ತಿಗೂ ಅವಕಾಶಗಳು ಲಭಿಸುತ್ತದೆ. ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಸತತ ಅಭ್ಯಾಸ, ಕಠಿಣ ಪರಿಶ್ರಮ ನಿಷ್ಠೆಯಿಂದ ಕಾರ್ಯಪ್ರವೃತರಾದಾಗ ಜೀವನದಲ್ಲಿ ಯಶಸ್ಸುಗಳಿಸಬಹುದು ಎಂದರು. ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಲೆಕ್ಕ ಪರಿಶೋಧಕರಾದ ಗೋಪಾಲ ಕೃಷ್ಣ ಭಟ್ […]

ದೇಶದ ಮೂಲ ರಾಷ್ಟ್ರಧ್ವಜ ವಿನ್ಯಾಸಕ ಪಿಂಗಾಳಿ ವೆಂಕಯ್ಯ ಜನ್ಮಶತಮಾನೋತ್ಸವ ಆಚರಣೆ

ನವದೆಹಲಿ: ರಾಷ್ಟ್ರಧ್ವಜದ ವಿನ್ಯಾಸಕಾರ ಪಿಂಗಾಳಿ ವೆಂಕಯ್ಯ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಮಂಗಳವಾರ ದೆಹಲಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ತಿಳಿಸಿದ್ದಾರೆ. ವಿಜಯವಾಡದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕಿಶನ್ ರೆಡ್ಡಿ, ಪಿಂಗಾಳಿಯವರು ವಿನ್ಯಾಸಗೊಳಿಸಿದ ಮೂಲ ಧ್ವಜವನ್ನು ಅಂದು ಪ್ರದರ್ಶಿಸಲಾಗುವುದು. ಹೊಸದಿಲ್ಲಿಯಲ್ಲಿ ನಡೆಯಲಿರುವ ಶತಮಾನೋತ್ಸವ ಸಮಾರಂಭಕ್ಕೆ ಪಿಂಗಾಳಿ ವೆಂಕಯ್ಯನವರ ಹುಟ್ಟೂರಿಗೆ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಪ್ರಧಾನಿ ಪರವಾಗಿ ಆಹ್ವಾನಿಸುವುದಾಗಿ ತಿಳಿಸಿದ ಅವರು, ಪಿಂಗಾಳಿ ಅವರ ಹೆಸರಿನಲ್ಲಿ […]

ಜ್ಞಾನಸುಧಾ ಕಾಲೇಜು: ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಉದ್ಘಾಟನೆ

ಕಾರ್ಕಳ: ವಿದ್ಯಾರ್ಥಿಗಳು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅರಿವು ಮೂಡಲು ಎನ್ನೆಸ್ಸೆಸ್ ತನ್ನದೇ ಆದ ರೀತಿಯಲ್ಲಿ ಸಹಕಾರಿಯಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿಯ ಪ್ರಾಂಶುಪಾಲರಾದ ಡಾ. ಪ್ರಸಾದ್ ರಾವ್ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಚಟುವಟಿಕೆಗಳ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡುತ್ತಾ ನಾನು ನನ್ನದು ಎಂಬ ಸ್ವಾರ್ಥಪರತೆಯ ಮನೋಭಾವ ಎಲ್ಲೆಡೆ ಮನೆಮಾಡಿರುವಾಗ ಶೈಕ್ಷಣಿಕ ಜೀವನದ ಎನ್ನೆಸ್ಸೆಸ್ ಸಹಬಾಳ್ವೆ, ‘ನನಗಲ್ಲ ನಿನಗೆ’ ಎಂಬ ಕಲ್ಪನೆ ಕೊಟ್ಟು ಶ್ರಮದ […]

ಉಡುಪಿ: ಕಾಂಗ್ರೆಸ್ ನ ಹಿಂದುಳಿದ ವರ್ಗದ ಅಧ್ಯಕ್ಷ ಸಂಕಪ್ಪ. ಎ ಜೆ.ಡಿ.ಎಸ್ ಗೆ ಸೇರ್ಪಡೆ

ಉಡುಪಿ: ಉಡುಪಿಯ ಪ್ರಖ್ಯಾತ ವಕೀಲ, ಬಿಲ್ಲವ ಮುಖಂಡ ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗದ ಅಧ್ಯಕ್ಷ ಸಂಕಪ್ಪ. ಎ ಆಗಸ್ಟ್ 1 ರಂದು ಜಾತ್ಯಾತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಶಾಲು ಹೊದೆಸಿ, ಪಕ್ಷದ ಧ್ವಜ ನೀಡುವ ಮೂಲಕ ವಿದ್ಯುಕ್ತವಾಗಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಉಡುಪಿ ಜಿಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ, ನಾಯಕರಾದ ವಸಂತ ಪೂಜಾರಿ ಮಂಗಳೂರು, ಇಕ್ಬಾಲ್ ಮಂಗಳೂರು, ಇಕ್ಬಾಲ್ ಅತ್ರಾಡಿ, ಭರತ್ […]