ಜನಮೇಜಯನ ಸರ್ಪ ಯಾಗವನ್ನು ನಿಲ್ಲಿಸಿ ನಾಗಗಳ ಪ್ರಾಣವನ್ನು ಉಳಿಸಿದವ ಆಸ್ತಿಕ
ಸರ್ಪವನ್ನು ಕಂಡಾಗ ಕೆಲ ಹಿರಿಯರು “ಆಸ್ತಿಕ… ಆಸ್ತಿಕ…” ವೆಂದು ಪಠಿಸುವರು. ಯಾರು ಈ ಆಸ್ತಿಕ..? ಅದ್ಯಾಕೆ “ಆಸ್ತಿಕ” ಎಂದು ಸಂಬೋಧಿಸುವರು..? ಸರ್ಪಗಳಿಗೂ ಅವನಿಗೂ ಏನು ಸಂಬಂಧವಿದೆ..? ಜನಮೇಜಯನು ಯಾಗ ನಡೆಸಿ ಸರ್ಪಸಂತತಿಯನ್ನೇ ನಾಶ ಮಾಡಲು ಹೊರಟಿದ್ದೇಕೆ….? ಈ ಎಲ್ಲಾ ವಿಚಾರಗಳನ್ನು ತಿಳಿಯಲು ಈ ಸಣ್ಣ ಕಥೆಯನ್ನು ಓದಬೇಕು. ಕೌಶಿಕಿ ನದಿಯ ಸುಂದರ ಪರಿಸರದಲ್ಲಿ ಋಷಿ ಶಮಿಕರ ಆಶ್ರಮವಿತ್ತು. ಅಲ್ಲಿ ಸಾಕಷ್ಟು ಋಷಿಕುಮಾರರು ವೇದಾಧ್ಯಯನದಲ್ಲಿ ನಿರತರಾಗಿದ್ದರು. ಅವರಲ್ಲಿ ಋಷಿ ಶಮಿಕರ ಪುತ್ರನಾದ ಶೃಂಗಿಯೂ ಒಬ್ಬನಾಗಿದ್ದನು. ಒಂದು ದಿನ […]
ಮಣಿಪಾಲ: ಫಾರ್ಮಸಿ ವಿದ್ಯಾರ್ಥಿ ನಾಪತ್ತೆ
ಉಡುಪಿ: ಮಣಿಪಾಲದಲ್ಲಿ ಫಾರ್ಮಸಿ ವ್ಯಾಸಾಂಗ ಮಾಡುತ್ತಿದ್ದ ಅಭಯ್ ಕುಮಾರ್ (26) ಎಂಬ ವಿದ್ಯಾರ್ಥಿಯು ಜುಲೈ 27 ರಂದು ರಾತ್ರಿ 9.30 ರ ಸುಮಾರಿಗೆ ಹಾಸ್ಟೆಲ್ನಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಶರೀರ ಹೊಂದಿದ್ದು, ಹಿಂದಿ ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2570328, ಮೊ.ನಂ: 9480805475, 9480805448 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಣಿಪಾಲ ಪೊಲೀಸ್ […]
ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್: ಕೊನೆಯ ದಿನ ದಾಖಲೆಯ 72.42 ಲಕ್ಷ ಐಟಿಆರ್ ಸಲ್ಲಿಕೆ; ಒಟ್ಟು 5 ಕೋಟಿ 83 ಲಕ್ಷ ಐಟಿಆರ್ ಗಳು
ನವದೆಹಲಿ: ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯದಿನವಾಗಿದ್ದು, ಈ ದಿನಾಂಕವನ್ನು ವಿಸ್ತರಣೆ ಮಾಡಬೇಕೆಂದು ಕೂಗು ಕೇಳಿ ಬಂದಿದ್ದರೂ ವಿತ್ತ ಇಲಾಖೆಯು ದಿನಾಂಕ ವಿಸ್ತರಣೆಗೆ ಹಿಂದೇಟು ಹಾಕಿತ್ತು. ಆದಾಗೂ, ಕೊನೆಯ ದಿನವಾದ ಜುಲೈ 31 ರವರೆಗೆ 5 ಕೋಟಿ 83 ಲಕ್ಷ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಯಾಗಿದೆ ಎಂದು ತಿಳಿದುಬಂದಿದೆ. ಭಾನುವಾರ ಒಂದೇ ದಿನ 72 ಲಕ್ಷದ 42 ಸಾವಿರಕ್ಕೂ ಅಧಿಕ ಐಟಿಆರ್ ಸಲ್ಲಿಕೆಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಕ್ಲಪ್ತ ಸಮಯಕ್ಕೆ ಐಟಿಆರ್ […]
ಕರಾವಳಿಯಲ್ಲಿ ವರುಣನ ಅಬ್ಬರ: ಕುಂದಾಪುರ-ಬೈಂದೂರು ತಾಲೂಕು ಶಾಲಾ-ಕಾಲೇಜುಗಳಿಗೆ ರಜೆ
ಕುಂದಾಪುರ: ಕರಾವಳಿಯ ಹಲವೆಡೆಗಳಲ್ಲಿ ಮುಸಲಧಾರೆ ಮಳೆಯಾಗುತ್ತಿದ್ದು, ಕುಂದಾಪುರ-ಬೈಂದೂರು ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಕುಂದಾಪುರ ಸಹಾಯಕ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಶಿರೂರು ಭಾಗವು ಸಂಪೂರ್ಣವಾಗಿ ಜಲಾವೃತವಾಗಿದ್ದು, ಕೆಳಪೇಟೆ, ಕರಾವಳಿ ಭಾಗಗಳು ಮುಳುಗಡೆಯಾಗಿದ್ದು ಮನೆಗಳಿಗೆ ಜಲದಿಗ್ಭಂಧನವಾಗಿದೆ. ರಸ್ತೆಗಳಲ್ಲಿ ಕೊಚ್ಚೆ ನೀರು ತುಂಬಿ ಹರಿಯುತ್ತಿದೆ. ಹೊಳೆಗಳೆಲ್ಲಾ ತುಂಬಿ ಹರಿಯುತ್ತಿದ್ದು, ನದಿ ದಂಡೆಯ ಮನೆಗಳೆಲ್ಲಾ ಮುಳುಗಡೆಯಾಗಿವೆ. ಈ ರೀತಿಯ ಜಲಪ್ರಳಯದಂತ ಸ್ಥಿತಿ ೧೯೧೩ ರಲ್ಲಿ ಕಂಡು ಬಂದಿತ್ತು, ಆ ಬಳಿಕ ಇದೇ ಮೊದಲ ಬಾರಿಗೆ ಇಂತಹ ಸ್ಥಿತಿ ಕಂದುಬಂದಿದೆ ಎಂದು ಇಲ್ಲಿನ […]
ಅಂಬಲಪಾಡಿ ಯೂನಿಯನ್ ಬ್ಯಾಂಕ್ ಸಿಬ್ಬಂದಿ ಶ್ರೀಮತಿ ಕುಸುಮಾ ಎಸ್ ಕಿಣಿ ಬೀಳ್ಕೊಡುಗೆ
ಉಡುಪಿ: ಅಂಬಲಪಾಡಿ ಯೂನಿಯನ್ ಬ್ಯಾಂಕ್(ಕಾರ್ಪೊರೇಷನ್ ಬ್ಯಾಂಕ್ )ನಲ್ಲಿ ಸುಮಾರು 38 ವರ್ಷಗಳ ಕಾಲ ವಿವಿಧ ಕಡೆ ಸೇವೆ ಸಲ್ಲಿಸಿ ಸೋಮವಾರ ನಿವೃತ್ತರಾದ ಶ್ರೀಮತಿ ಕುಸುಮಾ ಎಸ್ ಕಿಣಿ ಹಾಗೂ ಶ್ರೀಪತಿ ಕಿಣಿ ಇವರನ್ನು ಸಮಾರಂಭದಲ್ಲಿ ಶಾಖಾ ಮೆನೇಜರ್ ಗೌರವ್ ಸಿಂಗ್ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಉಷಾ ಕುಮಾರಿ, ಶಾಂತ , ವಿನಯ , ರಾಜೇಶ್, ವಿನೋಧರ , ರೋಹಿಣಿ , ಸತ್ಯವತಿ , ವಿಷ್ಣು, ರಾಜೇಂದ್ರ ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.