ಭಾರತೀಯ ಅಂಚೆ ಇಲಾಖೆ: ಸಹೋದರರಿಗೆ ಹಾಗೂ ಸೇನಾ ಯೋಧರಿಗೆ ಆನ್ ಲೈನ್ ರಾಖಿ ತಲುಪಿಸುವ ಅವಕಾಶ
ಉಡುಪಿ: ಭಾರತೀಯ ಅಂಚೆ ಇಲಾಖೆಯ ವತಿಯಿಂದ ಮನೆಯಲ್ಲಿ ಕುಳಿತು ದೇಶದ ಯಾವುದೇ ಪ್ರದೇಶಕ್ಕೆ ರಾಖಿಯನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸುವ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಕೇವಲ 120 ರೂ. ವೆಚ್ಚದಲ್ಲಿ ಸಹೋದರರಿಗೆ ಹಾಗೂ ಲಡಾಕ್ ಗಡಿ ಪ್ರದೇಶದಲ್ಲಿರುವ ಸೇನಾ ಯೋಧರಿಗೂ ರಾಖಿ ತಲುಪಿಸುವ ಅವಕಾಶ ಕಲ್ಪಿಸಲಾಗಿದೆ. ಈ ಸೇವಾ ಯೋಜನೆಯಲ್ಲಿ www.karnatakapost.gov.in/Rakhi_Post ಗೆ ಲಾಗಿನ್ ಆಗಿ ಕಳುಹಿಸುವವರ ಪೂರ್ಣ ವಿವರಗಳನ್ನು ನೀಡಿದಾಗ ಏಳು ವಿಧದ ಆಕರ್ಷಕ ವಿನ್ಯಾಸವುಳ್ಳ ರಾಖಿಗಳನ್ನು ವೀಕ್ಷಿಸಬಹುದಾಗಿದ್ದು, ಪ್ರತಿಯೊಂದು ವಿನ್ಯಾಸದ ಎದುರು ವಿನ್ಯಾಸ ಅಂಕಿ ನಮೂದಿಸಿದ್ದು […]
ಕಡಿಯಾಳಿ: ಆಗಸ್ಟ್ 5ರಂದು ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಹಾಗೂ ಸಾಮೂಹಿಕ ಕುಂಕುಮಾರ್ಚನೆ
ಉಡುಪಿ: ವಿಶ್ವ ಹಿಂದೂ ಪರಿಷತ್ , ಮಾತೃ ಮಂಡಳಿ ಕಡಿಯಾಳಿ ಇದರ ಜಂಟಿ ಆಶ್ರಯದಲ್ಲಿ 38 ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಹಾಗೂ ಸಾಮೂಹಿಕ ಕುಂಕುಮಾರ್ಚನೆಯು ಆಗಸ್ಟ್ 5ರಂದು ಸಂಜೆ 4.30 ಕೆ ಕಾತ್ಯಾಯಿನಿ ಮಂಟಪ ದಲ್ಲಿ ಜರುಗಲಿದೆ.
ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣ ಗುಡ್ಡೆ: ಭಕ್ತರಿಂದ ಕಾಣಿಕೆ ನೀಡಲಾದ ಬೆಳ್ಳಿ ಕಿರೀಟದಲ್ಲಿ ಸರ್ವಾಲಂಕಾರ ಭೂಷಿತಳಾಗಿ ಕಂಗೊಳಿಸಿದ ದುರ್ಗಾ ದೇವಿ
ಮಣಿಪಾಲ: ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣ ಗುಡ್ಡೆ, ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ದೇವಿಯು ಶ್ರಾವಣ ಶುಕ್ರವಾರದಂದು ಮಣಿಪಾಲದ ಉದ್ಯಮಿ ರಾಜೇಶ್ ಮತ್ತು ಶ್ರೀಮತಿ ಪದ್ಮಿನಿ ರಾಜೇಶ್ ಕಾಣಿಕೆ ರೂಪದಲ್ಲಿ ಅರ್ಪಿಸಿದ ಬೆಳ್ಳಿಯ ಕೀರಿಟವನ್ನು ಧರಿಸಿ ಸರ್ವಾಲಂಕಾರ ಭೂಷಿತಳಾಗಿ ಪೂಜೆಯನ್ನು ಸ್ವೀಕರಿಸಿ ಭಕ್ತರನ್ನು ಅನುಗ್ರಹಿಸಿದಳು. ಕ್ಷೇತ್ರದಲ್ಲಿ ಶುಕ್ರವಾರ ಬೆಳಗ್ಗೆ ನೆರವೇರಿದ ಸಂಜೀವಿನಿ ಮೃತ್ಯುಂಜಯ ಯಾಗ, ಸಂಜೆ ನೆರವೇರಿದ ಶ್ರೀ ದುರ್ಗಾ ನಮಸ್ಕಾರ ಪೂಜೆಯ ದೃಶ್ಯಾವಳಿಗಳು
ಆಗುಂಬೆ ಘಾಟಿಯಲ್ಲಿ ಲಘು ವಾಹನ ಮತ್ತು ಬಸ್ ಸಂಚಾರಕ್ಕೆ ಅನುವು; ಘನ ವಾಹನಗಳಿಗೆ ಆಗಸ್ಟ್ 31 ರ ವರೆಗೆ ನಿಷೇಧ: ಜಿಲ್ಲಾಧಿಕಾರಿ
ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯ 11 ನೇ ತಿರುವಿನಲ್ಲಿ ಭೂಕುಸಿತವಾಗಿರುವ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರವನ್ನು ಆಗಸ್ಟ್ 31 ರ ವರೆಗೆ ನಿಷೇಧಿಸಲಾಗಿದೆ. ಆದಾಗ್ಯೂ, ಸಾರ್ವಜನಿಕರಿಂದ ಬಸ್ಸುಗಳ ಸಂಚಾರಕ್ಕೆ ಅನುಮತಿ ನೀಡಲು ಮನವಿ ಬರುತ್ತಿರುವುದರಿಂದ ಮತ್ತು ಈಗಾಗಲೇ ಭೂಕುಸಿತದಿಂದಾಗಿ ರಸ್ತೆ ಬದಿಯಲ್ಲಿ ಬಿದ್ದು ಹೋಗಿದ್ದ ಗಾರ್ಡ್ ವಾಲ್ ನ ಮರು ನಿರ್ಮಾಣ ಕಾರ್ಯ ಕೈಗೊಂಡಿದ್ದು ಸದ್ಯ ತಾತ್ಕಾಲಿಕ ದುರಸ್ತಿ ಮುಂದುವರಿದಿದ್ದು, ದುರಸ್ಥಿ ಸಂಪೂರ್ಣವಾಗಿ ಮುಗಿಯಲು ಎರಡು ವಾರಗಳ ಕಾಲಾವಧಿ ಬೇಕಾಗಿರುವುದರಿಂದ ಹಾಗೂ ಪ್ರಸ್ತುತ ಆಗುಂಬೆಯಲ್ಲಿ […]